Advertisement

ಕಲ್ಯಾ: ಘನ ವಾಹನ ಸಂಚಾರ ವಿರೋಧಿಸಿ ಪ್ರತಿಭಟನೆ

03:35 AM Dec 18, 2018 | Team Udayavani |

ಬೆಳ್ಮಣ್‌: ಕಲ್ಯಾ ಗ್ರಾಮದ ರಸ್ತೆಗಳು ಘನ ವಾಹನಗಳ ಆರ್ಭಟದಿಂದ ಸಂಪೂರ್ಣ ಕಿತ್ತು ಹೋಗಿದ್ದು ಸಣ್ಣ ಪುಟ್ಟ ವಾಹನಗಳಲ್ಲಿಯೂ ಓಡಾಡುವುದೇ ಅಸಾಧ್ಯವಾಗಿರುವ ಹಿನ್ನೆಯಲ್ಲಿ ಗ್ರಾಮಸ್ಥ ರೆಲ್ಲ ಸೇರಿ ಘನ ವಾಹನವನ್ನು ತಡೆದು ನಿಲ್ಲಿಸಿ ಸೋಮವಾರ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.

Advertisement

ದಿನೇ ದಿನೇ ಹತ್ತು ಚಕ್ರದ ಘನ ವಾಹನಗಳ ಆರ್ಭಟ ಹೆಚ್ಚಾಗುತ್ತಿದ್ದು ಗ್ರಾಮಸ್ಥರ ನೆಮ್ಮದಿಯನ್ನು ಕಸಿಯುತ್ತಿದೆ ಎಂದು ಕಾರ್ಕಳ ತಾಲೂಕಿನ ಕಲ್ಯಾ ಗ್ರಾಮಸ್ಥರು ಪ್ರತಿಭಟನೆಗೆ ಇಳಿದಿದ್ದಾರೆ. ಕಲ್ಯಾ ಹಾಗೂ ನಂದಳಿಕೆ ಗ್ರಾಮದಲ್ಲಿ ಬಹುತೇಕ ಕೋರೆಗಳಿದ್ದು ಇಲ್ಲಿಂದ ಜಲ್ಲಿ ಕಲ್ಲುಗಳನ್ನು ಸಾಗಟ ನಡೆಸುವ 10 ಚಕ್ರದ ಘನ ವಾಹನ ನಿತ್ಯ ಇಲ್ಲಿ ನೂರಾರು ಬಾರೀ ಓಡಾಟವನ್ನು ನಡೆಸುತ್ತಿರುವ ಕಾರಣ ಈ ಭಾಗದ ರಸ್ತೆಗಳು ಸಂಪೂರ್ಣ ಕಿತ್ತು ಹೋಗಿ ವಾಹನ ಸಂಚಾರಕ್ಕೆ ಅಯೋಗ್ಯವಾಗುವ ಮಟ್ಟ ತಲುಪಿವೆ. ಈ ಬಗ್ಗೆ ಸೂಕ್ತ ಕ್ರಮವನ್ನು ಅಧಿಕಾರಿಗಳು ಕೈಗೊಳ್ಳಬೇಕೆಂದು ಗ್ರಾಮಸ್ಥರು ಆಕ್ರೋಶವನ್ನು ವ್ಯಕ್ತಪಡಿಸಿ ಸೋಮವಾರ ಬೆಳಗ್ಗಿನಿಂದ  ಹಲವಾರು ಘನವಾಹನಗಳನ್ನು ತಡೆದು ನಿಲ್ಲಿಸಿ ಪ್ರತಿಭಟಿಸಿ ಬಳಿಕ ಸಂಬಂಧಿಸಿದ ಅಧಿಕಾರಿಗಳಿಗೆ ಗ್ರಾಮಸ್ಥರು ಮನವಿ ಸಲ್ಲಿಸಿದರು.

ಪ್ರತಿಭಟನೆಯಲ್ಲಿ ಅಂಬಿಕಾ ಮಠದ ಶ್ರೀ ಉಮಾಮಹೇಶ್ವರ ಸ್ವಾಮೀಜಿ, ಸಂಜೀವ ಶೆಟ್ಟಿ, ಮಹೇಶ್‌ ಪೂಜಾರಿ, ಜೀವನ್‌ ಕಲ್ಯಾ, ಸತೀಶ್‌ ಕೋಟ್ಯಾನ್‌, ಸುರೇಶ್‌ ನಾಯಕ್‌, ಅನೂಪ್‌ ಆಚಾರ್ಯ, ಅಕ್ಷಯ್‌ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next