Advertisement

ಸರ್ಕಾರದ ವೈಫಲ್ಯ ಖಂಡಿಸಿ ನಾಳೆ ಪ್ರತಿಭಟನೆ

03:15 PM Aug 14, 2020 | Suhan S |

ಚಿಕ್ಕಮಗಳೂರು: ಅತಿವೃಷ್ಟಿ, ಕೋವಿಡ್‌ -19, ಲಾಕ್‌ಡೌನ್‌ ಪ್ಯಾಕೇಜ್‌ ವಿತರಣೆಯಲ್ಲಿ ರಾಜ್ಯ ಸರ್ಕಾರ ಮತ್ತು ಜಿಲ್ಲಾ ಉಸ್ತುವಾರಿ ಸಚಿವರು ಸಂಪೂರ್ಣ ವಿಫಲರಾಗಿದ್ದು, ಸುಳ್ಳು ಭರವಸೆಗಳನ್ನು ಕೇಳಿ ಸಾಕಾಗಿದ್ದು, ಸುಳ್ಳು ಭರವಸೆಗಳನ್ನು ವಿರೋಧಿಸಿ ಆ. 15ರಂದು ನಗರದ ಗಾಂಧಿ ಪ್ರತಿಮೆ ಎದುರು ವಿರೋಧ ಪಕ್ಷದ ಕಾರ್ಯಕರ್ತರು ಮತ್ತು ವಿವಿಧ ಸಂಘಟನೆಗಳ ಮುಖಂಡರು ಸೇರಿ ಮೌನ ಪ್ರತಿಭಟನೆ ನಡೆಸುವುದಾಗಿ ವಿಧಾನ ಪರಿಷತ್‌ ಸದಸ್ಯ ಎಸ್‌.ಎಲ್‌. ಭೋಜೇಗೌಡ ತಿಳಿಸಿದರು.

Advertisement

ಗುರುವಾರ ನಗರದ ಪ್ರವಾಸಿ ಮಂದಿರದಲ್ಲಿ ವಿರೋಧ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಕಾರ್ಯಕರ್ತರೊಂದಿಗೆ ಸಭೆ ನಡೆಸಿ ಬಳಿಕ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಬಿಜೆಪಿ ಸರ್ಕಾರ ರಾಜ್ಯದಲ್ಲಿ ಅಸ್ತಿತ್ವಕ್ಕೆ ಬಂದ ನಂತರ ಜನರಿಗೆ ಸುಳ್ಳು ಭರವಸೆ ನೀಡುತ್ತಿದೆ. ಬಿ.ಎಸ್‌. ಯಡಿಯೂರಪ್ಪ ಅಧಿಕಾರಕ್ಕೆ ಬಂದ ಆರಂಭದಲ್ಲಿ ರೆಸಾರ್ಟ್‌ ರಾಜಕಾರಣ ಮಾಡಿದರು. ಸಚಿವ ಸಂಪುಟ ರಚನೆಯಲ್ಲಿ ಕಾಲ ಕಳೆದರೇ ಹೊರತು ಜನಪರ ಯೋಜನೆ ಜಾರಿ ಮಾಡುವಲ್ಲಿ ವಿಫಲರಾದರು ಎಂದರು.

ರಾಜ್ಯ ಸರ್ಕಾರ ನೀಡಿದ ಭರವಸೆಯನ್ನು ಒಂದೂ ಈಡೇರಿಸಿಲ್ಲ, ಕೋವಿಡ್‌-19 ಸೋಂಕು ರಾಜ್ಯದಲ್ಲೂ ಹರಡುವ ಮುನ್ಸೂಚನೆ ಇದ್ದರೂ ಮುಂಜಾಗ್ರತಾ ಕ್ರಮ ಕೈಗೊಳ್ಳಲಿಲ್ಲ. ಆರೋಗ್ಯ ಸಿಬ್ಬಂದಿಗೆ ತರಬೇತಿ ನೀಡಲಿಲ್ಲ, ಜನರನ್ನು ಎಚ್ಚರಿಸುವ ಕೆಲಸ ಸರ್ಕಾರ ಮಾಡಲಿಲ್ಲವೆಂದು ಆರೋಪಿಸಿದರು.

ಕೋವಿಡ್‌ ನಿರ್ವಹಣೆಗೆ ಉಪಕರಣ, ಕಿಟ್‌ಗಳ ಖರೀದಿಯಲ್ಲಿ ಸಾವಿರಾರು ಕೋಟಿ ರೂ. ಮೊತ್ತದ ಅವ್ಯವಹಾರ ನಡೆಸಿದ್ದಾರೆ. ಈ ಬಗ್ಗೆ ವಿರೋಧ ಚಿಕ್ಕಮಗಳೂರು: ಪ್ರವಾಸಿ ಮಂದಿರದಲ್ಲಿ ವಿವಿಧ ಪಕ್ಷದ ಮುಖಂಡರು ಹಾಗೂ ವಿವಿಧ ಸಂಘಟನೆಗಳ ಪ್ರಮುಖರು ಸಭೆ ನಡೆಸಿದರು. ಸೂಕ್ಷ್ಮ ವಲಯದಲ್ಲಿರುವ ಭೂ ದಾಖಲೆಗಳಲ್ಲಿ ನುಸುಳಿರುವ ಲೋಪಗಳನ್ನು ರಾಜ್ಯ ಸರ್ಕಾರ ತಕ್ಷಣ ನಿರ್ವಹಣಾ ಸಮಿತಿಯ ಸಲಹೆ ಅನುಸಾರ ಸರಿಪಡಿಸಬೇಕಾಗಿದೆ. ಈ ವಲಯದ ಮಹಾ ಅಭಿವೃದ್ಧಿ ಯೋಜನೆಯಲ್ಲಿ ಎಲ್ಲ ನೀರಿನ ಮೂಲಗಳನ್ನು ಗುರುತಿಸಿ ನಮೂದಿಸಬೇಕಾಗಿದೆ.

ಪಕ್ಷಗಳ ಆರೋಪಕ್ಕೂ ಸೂಕ್ತ ಮಾಹಿತಿ ನೀಡದೇ ಜನರನ್ನೂ ವಂಚಿಸಿದ್ದಾರೆ. ಇದರ ಪರಿಣಾಮ ಜನರು ಕೋವಿಡ್‌ ಸೋಂಕಿಗೆ ತುತ್ತಾಗಿ ವೆಂಟಿಲೇಟರ್‌ ನಂತಹ ಸೌಲಭ್ಯ, ಸೂಕ್ತ ಚಿಕಿತ್ಸೆ ಸಿಗದೇ ದಿನ ಸಾಯುವಂತಾಗಿದೆ. ಚಿಕ್ಕಮಗಳೂರು ಜಿಲ್ಲೆಯಲ್ಲೂ ಕೋವಿಡ್‌ ನಿರ್ವಹಣೆಯಲ್ಲಿ ಜಿಲ್ಲಾಡಳಿತ, ಉಸ್ತುವಾರಿ ಸಚಿವರು ಸಕಾಲದಲ್ಲಿ ಸಿದ್ಧತೆ ನಡೆಸಿರಲಿಲ್ಲ ಎಂದು ದೂರಿದರು.

Advertisement

ಬಿಜೆಪಿ ಸರಕಾರದ ಆಡಳಿತದಿಂದಾಗಿ ರಾಜ್ಯ ಹಾಗೂ ಜಿಲ್ಲೆಯ ಜನರಿಗೆ ಭಾರೀ ಅನ್ಯಾಯವಾಗಿದೆ. ಸುಳ್ಳುಗಳನ್ನೇ ಹೇಳಿಕೊಂಡು ಬಂದ ಸರ್ಕಾರ ಇದೀಗ ಆ.15ರಂದು ಸ್ವಾತಂತ್ರ್ಯ ದಿನಾಚರಣೆಯಂದು ಸುಳ್ಳಿನ ಭಾಷಣ ಮಾಡಲು ಸಿದ್ಧತೆ ಮಾಡಿಕೊಂಡಿದೆ. ಜಿಲ್ಲಾ ಉಸ್ತುವಾರಿ ಸಚಿವ ಸಿ.ಟಿ. ರವಿ ಕೂಡ ತಮ್ಮ ಸುಳ್ಳಿನ ಭಾಷಣ ಮಾಡಲು, ಸರ್ಕಾರ ಬರೆದುಕೊಟ್ಟ ಪೊಳ್ಳು ಭಾಷಣ ಮಾಡಲು ಮುಂದಾಗಿದ್ದಾರೆ. ಇಂತಹ ಸುಳ್ಳಿನ ಭಾಷಣೆ ಕೇಳಲು ವಿರೋಧ ಪಕ್ಷಗಳಿಗೆ ಇಷ್ಟವಿಲ್ಲ ಎಂದರು.

ಸಭೆಯಲ್ಲಿ ವಿವಿಧ ಪಕ್ಷ, ಸಂಘಟನೆಗಳ ಮುಖಂಡರಾದ ಎಚ್‌. ಎಚ್‌. ದೇವರಾಜ್‌, ಕೆ.ಟಿ. ರಾಧಾಕೃಷ್ಣ, ಪರಮೇಶ್ವರ್‌, ದಂಟರಮಕ್ಕಿ ಶ್ರೀನಿವಾಸ್‌, ಗಿರೀಶ್‌, ಮರ್ಲೆ ಅಣ್ಣಯ್ಯ, ತೇಗೂರು ಜಗದೀಶ್‌ ಮತ್ತಿತರರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next