ಗೋಕಾಕ: ಭಾರತೀಯ ಸಂಯುಕ್ತ ಕಿಸಾನ್ ಮೋರ್ಚಾ ವತಿಯಿಂದ ಭಾರತ ಬಂದ್‌ಗೆ ಕರೆನೀಡಿರುವ ಹಿನ್ನೆಲೆಯಲ್ಲಿ ಶುಕ್ರವಾರ ನಗರದ ನಾಕಾನಂ.1 (ಚೆನ್ನಮ್ಮ ವೃತ್ತ)ದಲ್ಲಿ ರಾಜ್ಯ ರೈತ ಸಂಘ ಹಾಗೂಹಸಿರು ಸೇನೆ ವತಿಯಿಂದ ಬಂದ್ ಬೆಂಬಲಿಸಿ ರಸ್ತೆ ತಡೆ ನಡೆಸಿ ಪ್ರತಿಭಟನೆ ನಡೆಸಿದರು.
ರೈತ ಸಂಘದ ರಾಜ್ಯ ಕಾರ್ಯದರ್ಶಿ ಭೀಮಶಿ ಗದಾಡಿ ಮಾತನಾಡಿ, ಕಳೆದ ನಾಲ್ಕು ತಿಂಗಳಿಂದರೈತರು ದೇಶಾದ್ಯಂತ ಪ್ರತಿಭಟನೆ ಮಾಡುತ್ತಿದ್ದರೂಸರ್ಕಾರ ಸ್ಪಂದಿಸುತ್ತಿಲ್ಲ. ಎಪಿಎಂಸಿ ಕಾಯ್ದೆ,ವಿದ್ಯುತ್ ಖಾಸಗೀಕರಣ ಕಾಯ್ದೆ, ಭೂ ಸ್ವಾಧೀನ ಕಾಯ್ದೆಗಳನ್ನು ತಕ್ಷಣವೇ ಕೈ ಬಿಟ್ಟು ರೈತರಿಗೆ ಅನುಕೂಲಮಾಡಿಕೊಡಬೇಕು. ಇಲ್ಲದಿದ್ದರೆ ಮುಂಬರುವಚುನಾವಣೆಯಲ್ಲಿ ಬಿಜೆಪಿ ಪಕ್ಷ ಹೆಸರು ಇಲ್ಲದೇ ಹೋಗುತ್ತದೆ ಎಂದು ಹೇಳಿದರು.
ರೈತ ಸಂಘದ ರಾಜ್ಯ ಸಂಚಾಲಕ ಗಣಪತಿ ಈಳಿಗೇರಮಾತನಾಡಿ, ಮೋದಿ ಸರ್ಕಾರ ಇಂದು ಅನ್ನ ನೀಡುವಅನ್ನದಾತನಿಗೆ ಅನ್ಯಾಯ ಮಾಡುತ್ತಿದ್ದು, ರೈತರ ಮೇಲೆಕಾಳಜಿ ಇಲ್ಲದಂತಾಗಿದೆ. ಬರುವ ಮಾ.31ರಂದು ಬೆಳಗಾವಿಯಲ್ಲಿ ನಡೆಯಲಿರುವ ವಿಭಾಗೀಯ ಮಟ್ಟದ ಬೆಳಗಾವಿ ಚಲೋ ಹಾಗೂ ರೈತ ಮಹಾ ಪಂಚಾಯತ್ ಕಾರ್ಯಕ್ರಮದಲ್ಲಿ ಭಾಗವಹಿಸುತ್ತೇವೆ. ಭಾರತ ಬಂದ್ ಹಿನ್ನೆಲೆಯಲ್ಲಿ ಶುಕ್ರವಾರ ರಾಜ್ಯದ 31 ಜಿಲ್ಲೆಗಳಲ್ಲಿ ಮತ್ತು ಎಲ್ಲ ತಾಲೂಕುಗಳಲ್ಲಿ ಪ್ರತಿಭಟನೆ ಹಮ್ಮಿಕೊಳ್ಳಲಾಗಿದೆ.
ಶಿವಮೊಗ್ಗದಲ್ಲಿ ರೈತ ಮಹಾಪಂಚಾಯತ ಸಭೆಯಲ್ಲಿಭಾಗವಹಿಸಿದ್ದ ಕಿಸಾನ್ ಮೋರ್ಚಾ ನಾಯಕ ರಾಕೇಶ ಟಿಕಾಯತ್ ವಿರುದ್ಧ ಎಫ್‌ಆರ್‌ಐ ದಾಖಲಿಸಿದ್ದು,ಅದನ್ನು ಹಿಂಪಡೆಯಬೇಕು ಎಂದು ಒತ್ತಾಯಿಸಿದರು.ಡಿವೈಎಸ್‌ಪಿ ಜಾವೀದ ಇನಾಮದಾರ ಮುಲಕ ಸಿಎಂಗೆ ಮನವಿ ಸಲ್ಲಿಸಿದರು.
ಪ್ರತಿಭಟನೆಯಲ್ಲಿ ರೈತ ಸಂಘದ ಪದಾಧಿಕಾರಿಗಳಾದ ಭೀಮಶಿ ಹುಲಕುಂದ, ಮುತ್ತೆಪ್ಪಬಾಗನ್ನವರ, ಪ್ರಕಾಶ ಹಾಲನ್ನವರ, ಕುಮಾರತಿಗಡಿ, ಶಂಕರ ಮದಿಹಳ್ಳಿ,ರಾಯಪ್ಪ ಗೌಡಪ್ಪನವರ,ಲಕ್ಷ್ಮಣ ದಾಸನ್ನವರ, ಶಿವಪ್ಪ ಹೊಸಮನಿ, ನಿಂಗಪ್ಪಗೌಡರ, ಸಿದ್ದಪ್ಪ ತಪಸಿ, ಲಕ್ಕಪ್ಪ ಬಾಗನ್ನವರ,ರಮೇಶ ಬೂದಿಗೊಪ್ಪ, ಮುತ್ತೆಪ್ಪ ಹುಲಕುಂದ,ರಾಮಪ್ಪ ಪೂಜೇರಿ, ಅಡಿವೆಪ್ಪ ವಡೆರಟ್ಟಿ, ಭೀಮಶಿಬಗಟಿ,ಮಾಳಪ್ಪ ಜೋಗಟಿ, ಸಿದ್ದಪ್ಪ ಗೌಡಪ್ಪನವರ, ಶ್ರೀಲ ಅಂಗಡಿ ಸೇರಿದಂತೆ ಅನೇಕರು ಇದ್ದರು.