Advertisement

ದಬ್ಬಾಳಿಕೆ ವಿರುದ್ಧ ಒಗ್ಗೂಡಿ ಹೋರಾಡಿ

02:45 PM Mar 27, 2021 | Team Udayavani |

ತುಮಕೂರು: ರೈತ ವಿರೋಧಿ ಕಾಯ್ದೆಗಳನ್ನು ಜಾರಿಗೆ ತಂದು ಅನ್ನದಾತನ ಮೇಲೆ ದಬ್ಬಾಳಿಕೆ ನಡೆಸುತ್ತಿರುವ ಕೇಂದ್ರದ ವಿರುದ್ಧ ನಾವೆಲ್ಲರೂ ಒಗ್ಗೂಡಿ ಹೋರಾಟ ಮಾಡಬೇಕು ಎಂದು ರೈತ ಸಂಘ ಮತ್ತುಹಸಿರುಸೇನೆಯ ಜಿಲ್ಲಾ ಅಧ್ಯಕ್ಷ ಎ.ಗೋವಿಂದರಾಜುತಿಳಿಸಿದರು.

Advertisement

ರೈತ ಸಂಘ ಕರೆ ನೀಡಿದ್ದ ಭಾರತ ಬಂದ್‌ ಹಿನ್ನೆಲೆಯಲ್ಲಿನಗರದ ಟೌನ್‌ಹಾಲ್‌ನ ಬಿಜಿಎಸ್‌ ವೃತ್ತದಲ್ಲಿ ಶುಕ್ರವಾರರೈತ ಸಂಘಟನೆ ಹಾಗೂ ವಿವಿಧ ಪ್ರಗತಿಪರಸಂಘಟನೆಗಳು ಹಮ್ಮಿಕೊಂಡಿದ್ದ ಪ್ರತಿಭಟನೆಯಲ್ಲಿ ಮಾತನಾಡಿದರು.

ಕಳೆದ 120 ದಿನಗಳಿಂದ ದೆಹಲಿ ಗಡಿಯಲ್ಲಿ ಮಳೆ, ಚಳಿ, ಬಿಸಿಲು ಎನ್ನದೆ ನಿರಂತರವಾಗಿ ಹೋರಾಟದಲ್ಲಿನಿರತರಾಗಿದ್ದಾರೆ. 300ಕ್ಕೂ ಹೆಚ್ಚು ರೈತರು ಈಹೋರಾಟದಲ್ಲಿ ಅಸುನೀಗಿದ್ದಾರೆ. ಈ ದೇಶದ ಅನ್ನದಾತರಿಗೆ ಮಾರಕವಾಗಿರುವ ಕಾನೂನುಗಳಿಂದರೈತರಿಗಷ್ಟೇ ಅಲ್ಲ, ವ್ಯಾಪಾರಸ್ಥರು, ಗ್ರಾಹಕರು,ಜನಸಾಮಾನ್ಯರಿಗೆ, ಯುವಜನರಿಗೆ ಸಾಕಷ್ಟು ತೊಂದರೆಯಾಗಲಿದೆ ಎಂದರು.

ಖಾಸಗೀಕರಣದ ವೇಗ ಗಮನಿಸಿದರೆ ಲಕ್ಷಾಂತರ ಯುವಜನರು ಉದ್ಯೋಗವಿಲ್ಲದ ಬೀದಿಗೆ ಬೀಳುವುದುಖಚಿತ. ಹೀಗಾಗಿ ಈ ಹೋರಾಟದಲ್ಲಿ ಅನ್ನ ತಿನ್ನುವಪ್ರತಿಯೊಬ್ಬರೂ ಪಾಲ್ಗೊಳ್ಳಬೇಕೆಂಬುದು ನಮ್ಮ ಆಶಯ ಎಂದರು. ರೈತ ಸಂಘದ ಜಿಲ್ಲಾಧ್ಯಕ್ಷ ಆನಂದ್‌ಪಟೇಲ್‌ಮಾತನಾಡಿ, ದೇಶದ್ರೋಹವೆಂದರೆ ಏನು ಎಂಬುದನ್ನುಮೊದಲು ಸರ್ಕಾರ ಸ್ಪಷ್ಟಪಡಿಸಬೇಕು. ರೈತರನ್ನು ಚಳವಳಿಮಾಡಿ ಎಂದು ಕರೆ ನೀಡುವುದನ್ನೇ ದ್ರೋಹವೆಂದುತಪ್ಪಾಗಿ ಅಥೆìçಸಿ, ಈ ದೇಶದ ಕಾನೂನುಗಳಿಗೆ ಅಗೌರವ ನೀಡುತ್ತಿರುವ ರಾಜ್ಯ ಸರ್ಕಾರಕ್ಕೆ ನಿಜಕ್ಕೂ ನಾಚಿಕೆಯಾಗಬೇಕು ಎಂದರು.

ಹಲವಾರು ಆಶ್ವಾಸನೆಗಳೊಂದಿಗೆ ಯುವಜನರ ಮತ ಪಡೆದು ಅಧಿಕಾರಕ್ಕೆ ಬಂದ ಕೇಂದ್ರದ ಬಿಜೆಪಿನೇತೃತ್ವದ ಎನ್‌ಡಿಎ ಸರ್ಕಾರ ಸರಳ ಆಡಳಿತದಹೆಸರಿನಲ್ಲಿ ಖಾಸಗೀಕರಣಕ್ಕೆ ಒತ್ತು ನೀಡಿದೆ. ಪರಿಣಾಮನವರತ್ನ ಕಂಪನಿಗಳನ್ನು ದಲ್ಲಾಳಿ ವ್ಯಾಪಾರಿಗಳ ರೀತಿಮನಸ್ಸಿಗೆ ಬಂದಷ್ಟು ಹಣಕ್ಕೆ ಮಾರಾಟ ಮಾಡಲಾಗುತ್ತಿದೆ.ಸಂತೆ ದಲ್ಲಾಳಿಗಳಿಗಿಂತಲೂ ಕೆಟ್ಟದಾಗಿ ವ್ಯವಹಾರನಡೆಸಲಾಗುತ್ತಿದೆ. 2024ರ ಚುನಾವಣೆಯಲ್ಲಿ ಜನರುನಿಮಗೆ ಸರಿಯಾದ ಪಾಠ ಕಲಿಸಲಿದ್ದಾರೆ ಎಂದು ಎಚ್ಚರಿಕೆ ನೀಡಿದರು.

Advertisement

ಪ್ರಾಂತ ರೈತ ಸಂಘದ ಜಿಲ್ಲಾಧ್ಯಕ್ಷ ಬಿ.ಉಮೇಶ್‌ ಮಾತನಾಡಿ, ಇಂದಿನ ಪ್ರತಿಭಟನೆಯಲ್ಲಿ ರೈತ ಸಂಘ, ಹಸಿರು ಸೇನೆ, ರೈತ ಕೂಲಿ ಕಾರ್ಮಿಕರ ಸಂಘಟನೆ,ಪ್ರಾಂತ ರೈತ ಸಂಘ ಹಾಗೂ ಇನ್ನಿತರ ಸಂಘ ಸಂಸ್ಥೆಗಳು ಒಗ್ಗೂಡಿ ಎರಡು ನಿರ್ಣಯಗಳನ್ನು ಅಂಗೀಕರಿಸಲಾಗಿದೆ.ರೈತ ನಾಯಕ ರಾಕೇಶ್‌ ಟಿಕಾಯತ್‌ ಹಾಗೂ ಇತರರ ಮೇಲೆ ಹಾಕಿರುವ ಸುಳ್ಳು ಮೊಕದ್ದಮೆ ವಾಪಸ್‌ ಪಡೆಯಬೇಕೆಂದರು.

ಏ.9 ರ ಸಭೆಯ ತೀರ್ಮಾನದಂತೆ ರಾಜ್ಯದಲ್ಲಿ ರೈತ ಹೋರಾಟ ವಿಸ್ತರಿಸಲು ಮುಂದಾಗಬೇಕೆಂಬ ನಿರ್ಣಯಕ್ಕೆ ಬರಲಾಗಿದೆ ಎಂದರು.

ಪ್ರತಿಭಟನೆಯಲ್ಲಿ ಸಿಐಟಿಯುನ ಸೈಯದ್‌ ಮುಜೀಬ್‌, ಆರ್‌ಕೆಎಸ್‌ನ ಸ್ವಾಮಿ, ಚಿರತೆ ಚಿಕ್ಕಣ್ಣ, ಎಐಟಿಯುಸಿ ಕಂಬೇಗೌಡ, ಡಿಎಸ್‌ಎಸ್‌ನ ಪಿ.ಎನ್‌. ರಾಮಯ್ಯ, ಸಿಐಟಿಯುನ ಎನ್‌.ಕೆ.ಸುಬ್ರಮಣ್ಯ, ಆರ್‌ ಕೆಎಸ್‌ನ ಕಲ್ಯಾಣಿ, ಲಕ್ಷ್ಮೀಕಾಂತ್‌, ಪ್ರಾಂತ ರೈತ ಸಂಘದ ಅಜ್ಜಪ್ಪ, ರೈತ ಸಂಘ ಮತ್ತು ಹಸಿರು ಸೇನೆ ಧನಂಜ ಯಾರಾಧ್ಯ ಮತ್ತಿತರರು ಇದ್ದರು.

ಈ ದೇಶದ ಕಾನೂನು ಮತ್ತುಸಂವಿಧಾನದ ವಿರುದ್ಧನಡೆದುಕೊಳ್ಳುವುದು ದೇಶದ್ರೋಹ. ಆದರ ಅಂತಹ ಯಾವುದೇ ಹೀನ ಕೃತ್ಯದಲ್ಲಿ ರೈತರುಭಾಗಿಯಾಗಿಲ್ಲ. ಕೂಡಲೇ ರೈತ ನಾಯಕರ ವಿರುದ್ಧ ದಾಖಲಾಗಿರುವ ಕ್ರಿಮಿನಲ್‌ ಮೊಕದ್ದಮೆ ಕೈಬಿಡಬೇಕು. – ಆನಂದ್‌ಪಟೇಲ್‌, ರೈತ ಸಂಘದ ಜಿಲ್ಲಾಧ್ಯಕ್ಷ

Advertisement

Udayavani is now on Telegram. Click here to join our channel and stay updated with the latest news.

Next