Advertisement

ಜಿಲ್ಲೆ ವಿಭಜನೆ ವಿರೋಧಿಸಿ ಪ್ರತಿಭಟನೆ

05:25 PM Dec 08, 2020 | Suhan S |

ಬಳ್ಳಾರಿ: ಗಣಿನಾಡು ಬಳ್ಳಾರಿ ಜಿಲ್ಲೆ ವಿಭಜನೆಖಂಡಿಸಿ, ಪ್ರತ್ಯೇಕ ವಿಜಯನಗರ ಜಿಲ್ಲೆ ರಚನೆಯನ್ನು ವಿರೋಧಿಸಿ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನೇತೃತ್ವದಲ್ಲಿ ವಿವಿಧ ಕನ್ನಡಪರ, ದಲಿತಪರ, ರೈತಪರ ಸಂಘಟನೆಗಳು, ಮಂಗಳಮುಖೀಯರ ವತಿಯಿಂದ ನಗರದಲ್ಲಿ ಬೃಹತ್‌ಪ್ರತಿಭಟನಾ ಮೆರವಣಿಗೆ ಸೋಮವಾರ ನಡೆಯಿತು.

Advertisement

ನಗರದ ನಗರೂರು ನಾರಾಯಣಉದ್ಯಾನವನದಲ್ಲಿ ಸಾವಿರಾರು ಸಂಖ್ಯೆಯಲ್ಲಿ ಜಮಾಯಿಸಿದ್ದ ಪ್ರತಿಭಟನಾನಿರತರುಅಲ್ಲಿಂದ ಬೃಹತ್‌ ಮೆರವಣಿಗೆ ಮೂಲಕಹೊರಟು ಗಡಗಿ ಚನ್ನಪ್ಪ ವೃತ್ತ, ಬೆಂಗಳೂರು ರಸ್ತೆ, ಬ್ರೂಸಪೇಟೆ ವೃತ್ತ,ಮೋತಿ ವೃತ್ತದ ಮೂಲಕ ಜಿಲ್ಲಾಧಿಕಾರಿ  ಕಚೇರಿಗೆ ತಲುಪಿತು. ರಸ್ತೆಯುದ್ದಕ್ಕೂ ಜಿಲ್ಲೆವಿಭಜನೆಗೆ ಕಾರಣರಾದ ರಾಜ್ಯ ಸರ್ಕಾರ,ಸಿಎಂ, ಸಚಿವರು, ಶಾಸಕರ ವಿರುದ್ಧ  ವಿವಿಧ ಘೋಷಣೆಗಳನ್ನು ಕೂಗಿ ಆಕ್ರೋಶ ವ್ಯಕ್ತಪಡಿಸಿದರು.

ರಾಜ್ಯ ಬಿಜೆಪಿ ಸರ್ಕಾರ ಜಿಲ್ಲೆಯ ಜನಾಭಿಪ್ರಾಯ ಪಡೆಯದೇ ಬಳ್ಳಾರಿಜಿಲ್ಲೆಯನ್ನು ಇಬ್ಭಾಗ ಮಾಡಿ ಸರ್ವಾಧಿಕಾರಿ ಧೋರಣೆ ಮೆರೆದಿದೆ. ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕ ವಿಜಯನಗರ ಜಿಲ್ಲೆಯನ್ನಾಗಿ ರಚನೆ ಮಾಡಿರುವುದು ಗಡಿಭಾಗದಲ್ಲಿನ ಸಮಸ್ಯೆಗಳಿಗೆ ಇಂಬು ಕೊಡು ವಂತಾಗಿದೆ.ಇಷ್ಟು ವರ್ಷಗಳ ಕಾಲ ಭಾಷಾ ಸೌಹಾರ್ದತೆ ಮೆರೆದಿರುವ ಬಳ್ಳಾರಿ ಜಿಲ್ಲೆಯಲ್ಲಿ ಮುಂದಿನ ದಿನಗಳಲ್ಲಿ ಸರ್ವರಿಗೆ ಸಮಬಾಳು, ಸಮಪಾಲು ಇವೆಲ್ಲವುಗಳಿಗೆನಾಂದಿ ಹಾಡಿದಂತಾಗಲಿದೆ ಎಂದುಪ್ರತಿಭಟನಾನಿರತರು ಅಸಮಾಧಾನ ವ್ಯಕ್ತಪಡಿಸಿದರು.

ಪ್ರತಿಭಟನೆಯಲ್ಲಿ ಸಚಿವ ಆನಂದ ಸಿಂಗ್‌ ನಡೆ ವಿರುದ್ಧ ತೀವ್ರವಾದ ಆಕ್ರೋಶ ವ್ಯಕ್ತಪಡಿಸಿದ ಪ್ರತಿಭಟನಾಕಾರರುವಯಕ್ತಿಕ ಹಿತಾಸಕ್ತಿಗಾಗಿ ಜಿಲ್ಲೆಯನ್ನುಒಡೆಯೋ ಕೆಲಸ ಮಾಡುತ್ತಿದ್ದಾರೆ. ಸಿಎಂಯಡಿಯೂರಪ್ಪ ಅವರು ಸಹ ಆನಂದ್‌ಸಿಂಗ್‌ ತಾಳಕ್ಕೆ ತಕ್ಕಂತೆ ಕುಣಿಯುತ್ತಿದ್ದಾರೆಎಂದೆಲ್ಲಾ ಘೋಷಣೆ ಕೂಗಿ ಆಕ್ರೋಶವ್ಯಕ್ತಪಡಿಸಿದರು. ಬಳ್ಳಾರಿ ಜಿಲ್ಲೆ ತನ್ನದೇ ಇತಿಹಾಸ ಹೊಂದಿದೆ. 1956ರಲ್ಲಿಚುನಾವಣೆಯಲ್ಲಿ ಗೆಲುವು ಸಾ ಸುವ ಮೂಲಕ ಬಳ್ಳಾರಿ ಜಿಲ್ಲೆಯನ್ನು ಕರ್ನಾಟಕಕ್ಕೆ ಸೇರಿಸಲಾಯಿತು. ಅದರಂತೆ ಈಗಲೂ ಚುನಾವಣೆ ನಡೆಸಿ. ಚುನಾವಣೆಯಲ್ಲಿಗೆದ್ದು ಜಿಲ್ಲೆಯನ್ನು ವಿಭಜಿಸಿ ಪ್ರತ್ಯೇಕವಿಜಯನಗರ ಜಿಲ್ಲೆಯನ್ನು ರಚಿಸಿಕೊಳ್ಳಿ ಎಂದು ಸಚಿವ ಆನಂದ್‌ಸಿಂಗ್‌ ಅವರಿಗೆ ಪ್ರತಿಭಟನಾಕಾರರು ಸವಾಲು ಹಾಕಿದರು.

ಈಗಾಗಲೇ ವಿಭಜನೆಯ ಜಿಲ್ಲೆಗಳಲ್ಲಿ, ತಾಲೂಕುಗಳಲ್ಲಿ ಅಭಿವೃದ್ಧಿ ಕುಂಠಿತಗೊಂಡಿರುವ ಬಗ್ಗೆ ಸರ್ಕಾರದಅಂಕಿ-ಅಂಶಗಳೇ ಸೂಚಿಸುತ್ತವೆ. ಅಭಿವೃದ್ಧಿಮಾಡುವಲ್ಲಿ ವಿಫಲಗೊಂಡಿರುವಸರ್ಕಾರ ಬಳ್ಳಾರಿ ಜಿಲ್ಲೆಯ ವಿಭಜನೆ ಮಾಡಿ, ರಾಜಕೀಯ ಸ್ವಾರ್ಥವನ್ನು ಸಾಧಿ ಸುವಲ್ಲಿ ನೆರವಾಗುವ ನಿರ್ಧಾರವನ್ನುತೆಗೆದುಕೊಂಡಿದೆ. ಈ ಕಾರಣಕ್ಕಾಗಿ ಬಳ್ಳಾರಿಜಿಲ್ಲೆಯ ವಿಭಜನೆಯ ನಿರ್ಧಾರವನ್ನು ಕೂಡಲೇ ಹಿಂಪಡೆಯಬೇಕು ಎಂದು ಹೋರಾಟ ಸಮಿತಿ ಆಗ್ರಹಿಸುತ್ತದೆ. ಈ ನಿರ್ಧಾರ ವಾಪಸ್‌ ಪಡೆಯದಿದ್ದರೆಹೋರಾಟ ಉಗ್ರ ಸ್ವರೂಪ ತಾಳುತ್ತದೆ ಎಂದು ಎಚ್ಚರಿಸಿದ್ದಾರೆ. ಬಳಿಕ ಜಿಲ್ಲಾಡಳಿತದ ಮೂಲಕ ಮುಖ್ಯಮಂತ್ರಿಗಳಿಗೆ ಮನವಿ ಸಲ್ಲಿಸಲಾಯಿತು.

Advertisement

ಪ್ರತಿಭಟನೆಯಲ್ಲಿ ಸಮಿತಿಯ ಮುಖಂಡರಾದ ಸಿರಿಗೇರಿ ಪನ್ನಾರಾಜ್‌, ಜಿಪಂ ಸದಸ್ಯರಾದ ಮುಂಡ್ರಿಗಿ ನಾಗರಾಜ್‌, ಎ.ಮಾನಯ್ಯ, ರೈತ ಮುಖಂಡ ದರೂರು ಪುರುಷೋತ್ತಮಗೌಡ, ಕನ್ನಡಪರ ಸಂಘಟನೆಗಳ ಕೆ.ಎರ್ರಿಸ್ವಾಮಿ, ಚಾನಾಳ್‌ ಶೇಖರ್‌, ರಾಮಾಂಜನಿ, ಸಿದ್ಮಲ್‌ ಮಂಜುನಾಥ್‌, ಪಾಲಿಕೆ ಮಾಜಿ ಸದಸ್ಯ ಪರ್ವಿನ್‌ಬಾನು, ಮಂಗಳಮುಖೀಯರು ಸೇರಿದಂತೆ ಸಾವಿರಾರು ಸಂಖ್ಯೆಯ ಜನರು ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next