Advertisement

ಬಳ್ಳಾರಿ ಜಿಲ್ಲೆ ವಿಭಜನೆ ವಿರೋಧಿಸಿ ಪ್ರತಿಭಟನೆ

02:25 PM Jan 05, 2021 | Team Udayavani |

ಬಳ್ಳಾರಿ: ಜಿಲ್ಲೆ ವಿಭಜನೆ ವಿರೋಧಿಸಿ ನಗರದ ಜಿಲ್ಲಾಧಿಕಾರಿ ಕಚೇರಿ ಮುಂದೆ ಅಖಂಡ ಬಳ್ಳಾರಿ ಜಿಲ್ಲಾ ಹೋರಾಟ ಸಮಿತಿ ನಡೆಸುತ್ತಿರುವ ಅನಿರ್ಧಿಷ್ಟಾವಧಿ ಧರಣಿ ಸೋಮವಾರ 22ನೇ ದಿನ ಪೂರ್ಣಗಳಿಸಿದ್ದು, ಬಳ್ಳಾರಿ ರಾಘವ ಮೆಮೋರಿಯಲ್‌ ಅಸೋಸಿಯೇಷನ್‌ಧರಣಿ ನಡೆಸಿತು.

Advertisement

ನಗರದ ರಾಘವ ಕಲಾ ಮಂದಿರದಿಂದ ಜಿಲ್ಲಾಧಿಕಾರಿ ಕಚೇರಿವರೆಗೆ ಅಸೋಸಿಯೇಷನ್‌ಪದಾಧಿಕಾರಿಗಳು, ಸದಸ್ಯರು ಪ್ರತಿಭಟನಾ ಮೆರವಣಿಗೆ ಮೂಲಕಆಗಮಿಸಿ ಧರಣಿಯಲ್ಲಿ ಪಾಲ್ಗೊಂಡರು.

ಅಸೋಸಿಯೇಷನ್‌ ಅಧ್ಯಕ್ಷ ಕೆ. ಕೊಟೆಶ್ವರ ರಾವ್‌, ಗೌರವಾಧ್ಯಕ್ಷ ಕೆ.ಚನ್ನಪ್ಪ, ಉಪಾಧ್ಯಕ್ಷರುಗಳಾದ ಕೆ.ರಾಮಾಂಜನೇಯಲು, ಎನ್‌.ಬಸವರಾಜ್‌, ಗೌರವ ಕಾರ್ಯದರ್ಶಿ ರಮೇಶ್‌ ಗೌಡ ಪಾಟೀಲ್‌, ಜಂಟಿಕಾರ್ಯದರ್ಶಿ ಕೆ ಪೊಂಪನಗೌಡ, ಸದಸ್ಯರು,ಕಲಾವಿದರುಗಳಾದ ಜೆ. ಪ್ರಭಾಕರ, ಕೆ. ಕೃಷ್ಣ,ಎನ್‌ ಪ್ರಕಾಶ್‌ ,ಚೆಲ್ಲಾ ಅಮರೇಂದ್ರನಾಥಚೌಧರಿ, ಜಿ. ಗೋಪಾಲ ಕೃಷ್ಣ, ಎಂ. ಶೇಷರೆಡ್ಡಿ, ಪಲ್ಲೇದ ನಾಗರಾಜ್‌, ಸುಬ್ಬಣ್ಣ,ಲಾಲ್‌ರೆಡ್ಡಿ, ಜಿ.ಆರ್‌. ವೆಂಕಟೇಶಲು, ದೇವಣ್ಣ, ಕೆ.ಶ್ಯಾಮಸುಂದರ್‌, ಟಿ.ಜಿ.ವಿಠಲ್‌, ಕಪ್ಪಗಲ್ಲು ಚಂದ್ರಶೇಖರ, ನೇತಿ ರಘುರಾಮ, ವರಲಕ್ಷ್ಮೀ, ಆದೋನಿ ವೀಣಾ, ಕೃಷ್ಣ, ಜಿಲಾನಿ ಬಾಷ, ಶ್ರೀರಾಮುಲು, ರಮಣಪ್ಪ ಭಜಂತ್ರಿ, ಸತ್ಯ ನಾರಾಯಣ, ಸುರೇಂದ್ರ ಬಾಬು, ಲತಾ, ಮಹಾಂತೇಶ ಇದ್ದರು.

ಸಾಂಸ್ಕೃತಿಕವಾಗಿ ಹಿರಿಮೆ ಗರಿಮೆಯಿಂದ ಕೂಡಿದ್ದ ಅಖಂಡ ಬಳ್ಳಾರಿ ಜಿಲ್ಲೆಯನ್ನುವಿಭಜನೆ ಮಾಡಿದ ಸರ್ಕಾರದ ನಿರ್ಧಾರ ಸರಿಯಲ್ಲ. ಈ ನಿಟ್ಟಿನಲ್ಲಿ ಸರ್ಕಾರ ಜಿಲ್ಲೆಯ ಎಲ್ಲಸಂಘಸಂಸ್ಥೆಗಳ ಮುಖಂಡರೊಂದಿಗೆ ಚರ್ಚಿಸಿನಿರ್ಧರಿಸಲಿ ಎಂದು ಹೋರಾಟಗಾರರು ಅಭಿಪ್ರಾಯಪಟ್ಟರು.

Advertisement

Udayavani is now on Telegram. Click here to join our channel and stay updated with the latest news.

Next