Advertisement

ಹದಗೆಟ್ಟ ರಸ್ತೆ ಗುಂಡಿ ಸರಿಪಡಿಸಿ

03:19 PM May 22, 2022 | Team Udayavani |

ಬಂಗಾರಪೇಟೆ: ಹದಗೆಟ್ಟಿರುವ ಬಂಗಾರಪೇಟೆ, ಕೆ.ಜಿ.ಎಫ್‌, ರಸ್ತೆಯ ಗುಂಡಿಗಳಿಗೆ ವಿಮುಕ್ತಿ ನೀಡಿ, ಜನ ಸಾಮಾನ್ಯರ ಅಮೂಲ್ಯ ಜೀವವನ್ನು ಉಳಿಸಬೇಕೆಂದು ರೈತ ಸಂಘದಿಂದ ದೇಶಿಹಳ್ಳಿ ಕೆರೆ ಮುಂದೆ ರೋಜ ಹೂಗಳನ್ನು ಅಧಿಕಾರಿಗಳಿಗೆ ನೀಡುವ ಮೂಲಕ ಹೋರಾಟ ಮಾಡಿಲೋಕೋಪಯೋಗಿ ಇಲಾಖೆ ಅಧಿಕಾರಿಗಳಿಗೆ ಮನವಿ ನೀಡಿ ಒತ್ತಾಯಿಸಲಾಯಿತು.

Advertisement

ಕೆರೆ, ರಾಜಕಾಲುವೆಗಳನ್ನು ಒತ್ತುವರಿ ಮಾಡಿಕೊಂಡು, ವಾಣಿಜ್ಯ ಮಳಿಗೆ ಹಾಗೂ ಕಲ್ಯಾಣ ಮಂಟಪಗಳನ್ನು ನಿರ್ಮಾಣ ಮಾಡಿ ಮಳೆ ನೀರು,ಕೆರೆಗೆ ಹರಿಯದೆ ಜನ ಸಾಮಾನ್ಯರ ಮನೆತೋಟಗಳಿಗೆ ಹಾಗೂ ರಸ್ತೆಗಳಿಗೆ ನುಗ್ಗಿ ಬಡವರಬದುಕನ್ನು ಕಸಿದುಕೊಳ್ಳುತ್ತಿರುವ ಶ್ರೀಮಂತರ ವಿರುದ್ದ ಕ್ರಮ ಕೈಗೊಳ್ಳದೆ ಮೌವಾಗಿರುವ ತಾಲೂಕು ಆಡಳಿತದ ವಿರುದ್ಧ, ಜನ ಸಾಮಾನ್ಯ ಆಕ್ರೋಶ ವ್ಯಕ್ತವಾಗುತ್ತದೆ. ತಾಲೂಕು ಆಡಳಿತಕ್ಕೆ ಹಾಗೂ ಸ್ಥಳೀಯ ಶಾಸಕರಿಗೆ ತಾಕತ್ತಿದ್ದರೆ. ಬಡವರ ಬದುಕು ಕಸಿಯುತ್ತಿರುವ ಶ್ರೀಮಂತರ ಆಸ್ತಿ ಹರಾಜು ಹಾಕಿ ಬಡವರಿಗೆ ಪರಿಹಾರ ನೀಡಲಿ ಎಂದು ಸ್ಥಳೀಯ ಶಾಸಕರಿಗೆ ರೈತ ಸಂಘದ ಜಿಲ್ಲಾಧ್ಯಕ್ಷ ಐತಂಡಹಳ್ಳಿ ಮಂಜುನಾಥ ಸವಾಲು ಹಾಕಿದರು.

ಹದಗೆಟ್ಟಿರುವ ಬಂಗಾರಪೇಟೆ ಕೆಜಿಎಫ್ ಮುಖ್ಯ ರಸ್ತೆಯಲ್ಲಿ ಜನ ಸಾಮಾನ್ಯರು ಸಂಚರಿಸಬೇಕಾದರೆ ಯಮಧರ್ಮರಾಜನಿಗೆ ಪತ್ರ ಬರೆದು ಜೀವವನ್ನು ಅಂಗೈಯಲ್ಲಿಟ್ಟುಕೊಂಡು ಸಂಚಾರ ಮಾಡಬೇಕಾದ ಮಟ್ಟಕ್ಕೆ ರಸ್ತೆ ಹದಗೆಟ್ಟಿದೆ. ಇಂಚು ಇಂಚಿಗೂ ಬಾಯಿ ತೆರೆದು ಅಪಘಾತಕ್ಕೆ ಕಾದು ಕುಳಿತಿರುವ ಗುಂಡಿಗಳಿಗೆ ಜಲ್ಲಿ ಅಳವಡಿಸಲು ಗುತ್ತಿಗೆದಾರರು ಹಾಗೂ ಅಧಿಕಾರಿಗಳು ವಿಫಲವಾಗಿ ಜನ ಸಾಮಾನ್ಯರ ಜೀವನದ ಜೊತೆ ಚಲ್ಲಾಟವಾಡುತ್ತಿದ್ದಾರೆಂದು ಆಕ್ರೋಶ ವ್ಯಕ್ತಪಡಿಸಿದರು.

ಚುನಾವಣೆ ಸಮಯದಲ್ಲಿ ತಾಲೂಕನ್ನು ಸಿಂಗಪೂರ್‌ ಮಾಡಿದ್ದೇವೆ. ರಸ್ತೆಗಳು ಜನರ ಪಾಲಿಗೆ ಸಂಚಾರಿ ರಸ್ತೆಗಳಾಗದೆ ಇದ್ದರೂ ಶಾಸಕರು, ಸಂಸದರು, ಜನ ಸಾಮಾನ್ಯರ ಕಣ್ಣೊರೆಸಲು ತಮ್ಮ ಸ್ವಂತ ಹಣದಿಂದ ರಸ್ತೆಯ ಹಳ್ಳಗಳನ್ನು ಮುಚ್ಚುತ್ತೇವೆ ಎಂದು ಪತ್ರಿಕಾ ಮತ್ತು ಮಾದ್ಯಮಕ್ಕೆ ಕಾಣಿಸಿಕೊಂಡು ಈಗ ನಾಪತ್ತೆಯಾಗಿದ್ದಾರೆಂದು ವಂಗ್ಯವಾಡಿದರು.

ಮನವಿ ಸ್ವೀಕರಿಸಿ ಮಾತನಾಡಿದ ಲೋಕೋಪ ಯೋಗಿ ಇಲಾಖೆ ಅಧಿಕಾರಿಗಳು ರಸ್ತೆ ಅಭಿವೃದ್ದಿಗೆ ಅನುದಾನ ಬಿಡುಗಡೆಯಾಗಿದೆ. ಮಳೆ ಸುರಿಯುತ್ತಿರುವುದರಿಂದ ಕಾಮಗಾರಿ ಪ್ರಾರಂಭವಾಗಿಲ್ಲ. ಮಾನವೀಯತೆ ದೃಷ್ಟಿಯಿಂದ ರಸ್ತೆಯ ಗುಂಡಿಗಳಿಗೆ ಜಲ್ಲಿ ಅಳವಡಿಸಿ ಜನ ಸಾಮಾನ್ಯರ ಜೀವ ರಕ್ಷಣೆಗೆ ಮುಂದಾಗುವ ಭರವಸೆಯನ್ನು ನೀಡಿದರು.

Advertisement

ಹಸಿರು ಸೇನೆ ಜಿಲ್ಲಾಧ್ಯಕ್ಷ ಕಿರಣ್‌, ಜಿಲ್ಲಾ ಉಪಾಧ್ಯಕ್ಷ ಚಾಂದ್‌ಪಾಷ, ಜಿಲ್ಲಾ ಕಾರ್ಯಾಧ್ಯಕ್ಷ ವಕ್ಕಲೇರಿ ಹನುಮಯ್ಯ, ತಾಲೂಕು ಅಧ್ಯಕ್ಷ ಮರ ಗಲ್‌ ಮುನಿಯಪ್ಪ, ಐತಂಡಹಳ್ಳಿ ಮುನ್ನ, ರಾಜಣ್ಣ,ಮುನಿರಾಜು, ನಾಗಯ್ಯ, ಮುನಿಕೃಷ್ಣ, ಕೋಲಾರತಾಲ್ಲುಕು ಅಧ್ಯಕ್ಷ ಈಕಂಬಳ್ಳಿ ಮಂಜುನಾಥ, ಮಾಲೂರು ತಾಲೂಕು ಅಧ್ಯಕ್ಷ ಯಲ್ಲಣ್ಣ,ಮುಳಬಾಗಿಲು ತಾಲೂಕು ಅಧ್ಯಕ್ಷ ಯಲುವಳ್ಳಿಪ್ರಭಾಕರ್‌, ರಾಮಸಾಗರ ವೇಣು, ಸಂದೀಪ್‌,ಸಂದೀಪ್‌ರೆಡ್ಡಿ, ಸುರೇಶ್‌ಬಾಬು, ಹಸಿರು ಸೇನೆತಾಲೂಕು ಅಧ್ಯಕ್ಷ ಚಲಪತಿ, ಬಾಬಾಜಾನ್‌, ಹಾರೀಪ್‌, ಗೌಸ್‌ ಇತರರಿದ್ದರು.

ಶಾಸಕರ ಮನೆ ಮುತ್ತಿಗೆ ಎಚ್ಚರಿಕೆ :

ಮುಂಗಾರು ಮಳೆ ಆರ್ಭಟಕ್ಕೆ ರಸ್ತೆಗಳು ಕೆರೆ ಕುಂಟೆಗಳಾಗಿ ಮಾರ್ಪಟ್ಟು ರಾತ್ರಿವೇಳೆ ರಸ್ತೆ ಕಾಣಿಸದೆ, ವಾಹನ ಸವಾರರು ಪರದಾಡುವ ಜೊತೆಗೆ ಅಪಘಾತಗಳಾಗಿ ಕೈಕಾಲುಗಳನ್ನು ಕಳೆದುಕೊಳ್ಳುತ್ತಿದ್ದಾರೆ. ಅಷ್ಟರ ಮಟ್ಟಿಗೆ ರಸ್ತೆ ಹದಗೆಟ್ಟಿದೆ. ಗುತ್ತಿಗೆದಾರರು ಕನಿಷ್ಠ ಪಕ್ಷ 6 ತಿಂಗಳ ಕಾಲ ರಸ್ತೆ ಕಾಮಗಾರಿ ಪ್ರಾರಂಭ

ಮಾಡಲು ಸಾಧ್ಯವಿಲ್ಲದ ಕಾರಣ ಬಿದ್ದಿರುವ ಗುಂಡಿಗಳಿಗೆ ಜಲ್ಲಿ ಅಳವಡಿಸುವ ಮೂಲಕ ಜನ ಸಾಮಾನ್ಯರ ಅಮೂಲ್ಯ ಜೀವ ರಕ್ಷಣೆಗೆ ಗುತ್ತಿಗೆದಾರರು ಮುಂದಾಗಬೇಕೆಂದು ಒತ್ತಾಯ ಮಾಡಿದರು. 24 ಗಂಟೆಯಲ್ಲಿ ಹದಗೆಟ್ಟಿರುವ ರಸ್ತೆಯ ಗುಂಡಿಗಳಿಗೆ ಜಲ್ಲಿ ಅಳವಡಿಸಿ ಜನ ಸಾಮಾನ್ಯರ ಜೀವ ರಕ್ಷಣೆಮಾಡದೇ ಇದ್ದರೆ, ಬುಡ್ಡಿ ದೀಪಗಳೊಂದಿಗೆ, ಸ್ಥಳೀಯ ಶಾಸಕರ ಮನೆ ಮುತ್ತಿಗೆ ಹಾಕಲಾಗುವುದು ಎಂದು ರೈತ ಸಂಘದ ರಾಜ್ಯ ಉಪಧ್ಯಕ್ಷ ಕೆ.ನಾರಾಯಣಗೌಡ ಎಚ್ಚರಿಕೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next