Advertisement

ಡೊನೇಷನ್‌ ಹಾವಳಿ ವಿರೋಧಿಸಿ ಪ್ರತಿಭಟನೆ

02:15 PM Jul 28, 2017 | Team Udayavani |

ಯಾದಗಿರಿ: ಖಾಸಗಿ ಶಾಲಾ ಕಾಲೇಜುಗಳ ಡೊನೇಷನ್‌ ಹಾವಳಿ ವಿರೋಧಿಸಿ ಗುರುವಾರ ಸಾರ್ವಜನಿಕ ಶಿಕ್ಷಣ ಇಲಾಖೆ ಎದುರು ಕರ್ನಾಟಕ ರಕ್ಷಣಾ ವೇದಿಕೆ ಯುವ ಸೇನೆ ಕಾರ್ಯಕರ್ತರು ಪ್ರತಿಭಟನೆ ನಡೆಸಿದರು.

Advertisement

ಈ ಸಂದರ್ಭದಲ್ಲಿ ಜಿಲ್ಲಾ ಅಧ್ಯಕ್ಷ ಅಂಬರೀಶ್‌ ಹತ್ತಿಮನಿ ಮಾತನಾಡಿ, ಶಿಕ್ಷಣ ಇಲಾಖೆಯಲ್ಲಿ ಬ್ರಹ್ಮಾಂಡ ಭ್ರಷ್ಟಾಚಾರದಿಂದ ವಿದ್ಯಾರ್ಥಿಗಳು ಗುಣಮಟ್ಟದ ಶಿಕ್ಷಣದಿಂದ ವಂಚಿತರಾಗಿದ್ದಾರೆ ಹಾಗೂ ಖಾಸಗಿ ಶಾಲಾ-ಕಾಲೇಜುಗಳು ಪಡೆಯುತ್ತಿರುವ ಡೊನೇಷನ್‌ ಹಾವಳಿಗೆ ತುತ್ತಾಗಿ ನಲುಗಿ ಹೋಗಿದ್ದು, ಇದರಿಂದ ರೈತರ ಮಕ್ಕಳು ಉತ್ತಮ ಪ್ರತಿಭೆ ಇದ್ದರೂ ಇಂದಿನ ದುಬಾರಿ ಶಿಕ್ಷಣ ಪದ್ಧತಿಗೆ ಹೆದರಿ ಶಿಕ್ಷಣ ಕೊಡಿಸುವಲ್ಲಿ ಹಿಂಜರಿಯುವಂತಾಗಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಸಾರ್ವಜನಿಕ ಶಿಕ್ಷಣ ಇಲಾಖೆ ನಿಯಮಾನುಸಾರ ಶಾಲಾ ಕಟ್ಟಡ, ಆಟದ ಮೈದಾನ, ಗ್ರಂಥಾಲಯ, ಶೌಚಾಲಯ ಮುಂತಾದ ಮೂಲ ಸೌಕರ್ಯಗಳನ್ನು ಒದಗಿಸದೇ ಕೆಲವು ಶಾಲಾ-ಕಾಲೇಜುಗಳು ಶಿಕ್ಷಣ ಇಲಾಖೆ ಅಧಿಕಾರಿಗಳ ಜೊತೆ ಶಾಮೀಲಾಗಿ ಸರ್ಕಾರದ ನಿಯಮಗಳನ್ನು ಉಲ್ಲಂಘಿಸಿ ತಮ್ಮ ಇಚ್ಛಾನುಸಾರ ಶಾಲಾ-ಕಾಲೇಜುಗಳನ್ನು ನಡೆಸುತ್ತಿವೆ ಈ ಬಗ್ಗೆ ಸಾಕಷ್ಟು ದೂರುಗಗಳು ಬಂದಿದ್ದರೂ, ಯಾವುದೇ ರೀತಿಯ ಕ್ರಮ ಕೈಗೊಂಡಿಲ್ಲ ಎಂದು ದೂರಿದರು.

ರಾಜ್ಯ ಸರ್ಕಾರ ಕೂಡಲೇ ಖಾಸಗಿ ಶಾಲಾ ಕಾಲೇಜುಗಳ ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಬೇಕು. ಒಂದು ವೇಳೆ ನಿರ್ಲಕ್ಷé ವಹಿಸಿದಲ್ಲಿ ಮುಂದಿನ ದಿನಗಳಲ್ಲಿ ಕರವೇ ಯುವ ಸೇನೆ ಉಗ್ರ ಹೋರಾಟ ಹಮ್ಮಿಕೊಳ್ಳುವುದಾಗಿ ಎಚ್ಚರಿಸಿದರು. ಪ್ರತಿಭಟನೆಯಲ್ಲಿ ಹಣಮಂತ ಹುಲಕಲ್‌, ಈರಣ್ಣ ವಾಲಿ, ರಿಯಾಝ್ ಬದ್ದೇಪಲ್ಲಿ, ಬಸವರಾಜ ಚಾಮ, ಆನಂದ ದಂಡೋತಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next