Advertisement

ಭ್ರಷ್ಟಾಚಾರ ಖಂಡಿಸಿ ನಾಳೆ ಪ್ರತಿಭಟನೆ

11:44 AM Dec 04, 2019 | Team Udayavani |

ಯಳಂದೂರು: ತಾಲೂಕಿನ ಸರ್ಕಾರಿ ಹಾಗೂ ಖಾಸಗಿ ಶಾಲೆಗಳಲ್ಲಿ ಗೋಹತ್ಯೆ ನಿಷೇಧ ಕುರಿತು ಹಕ್ಕೊತ್ತಾಯ ಪತ್ರವನ್ನು ಶಾಲಾ ಮಕ್ಕಳಿಗೆ ಹಂಚಿ, ಸಹಿ ಪಡೆಯುತ್ತಿದ್ದ ಶಿಕ್ಷಕರ ವಿರುದ್ಧ ಕ್ರಮ ವಹಿಸದ ಇಲಾಖೆಗಳು ಹಾಗೂ ತಾಲೂಕು ಸಮಾಜ ಕಲ್ಯಾಣ ಇಲಾಖೆಯಲ್ಲಿ ನಡೆದಿರುವ ಭ್ರಷ್ಟಾಚಾರವನ್ನು ಖಂಡಿಸಿ ದಲಿತ ಸಂಘರ್ಷ ಸಮಿತಿ ಡಿ.5ರಂದು ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂಭಾಗ ಪ್ರತಿಭಟನೆ ನಡೆಸಲಿದೆ ಎಂದು ದಸಂಸ ಜಿಲ್ಲಾ ಸಂಚಾಲಕ ಸಿ. ರಾಜಣ್ಣ ತಿಳಿಸಿದರು.

Advertisement

ಪಟ್ಟಣದ ಪ್ರವಾಸಿ ಮಂದಿರದಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿ, ಗೋ ಸಂರಕ್ಷಣಾ ಕುರಿತು ಹಕ್ಕೊತ್ತಾಯ ಪತ್ರಗಳನ್ನು ಹಂಚಿ ಪೋಷಕರಿಂದ ಸಹಿ ಪಡೆಯುತ್ತಿದ್ದ ಶಿಕ್ಷಕರಾದ ಗುರುಮೂರ್ತಿ, ನಂಜುಂಡಸ್ವಾಮಿ, ಕಿರಣ್‌ ವೀರಭದ್ರಸ್ವಾಮಿ, ಫ‌ಣೀಶ್‌ ಹಾಗೂ ಖಾಸಗಿ ಶಾಲೆಯ ಶಿವಕುಮಾರ್‌, ಸರಸ್ವತಿ ಎಂಬುವವರ ವಿರುದ್ಧ ದೂರು ದಾಖಲಾಗಿದೆ. 2017ರಲ್ಲಿ ನಡೆದ ಘಟನೆಯಲ್ಲಿ ಪೊಲೀಸ್‌ ಇಲಾಖೆ ಹಾಗೂ ಶಿಕ್ಷಣ ಇಲಾಖೆಯಿಂದ ತನಿಖೆ ನಡೆದು ವರದಿ ನೀಡಲಾಗಿದೆ. ನಾವೂ ಕೂಡ ಈ ಸಂಬಂಧ ಹೇಳಿಕೆಗಳಿಗೆ ಹಾಜರಾಗಿದ್ದೇವೆ. ಆದರೆ, ಈ ಬಗ್ಗೆಕ್ರಮ ವಹಿಸಿಲ್ಲ. ಇದನ್ನು ಖಂಡಿಸಿ ತಪ್ಪಿತಸ್ಥರಿಗೆ ಶಿಕ್ಷೆಯಾಗಬೇಕು. ಈ ಪ್ರಕರಣ ತಾರ್ಕಿಕ ಅಂತ್ಯವಾಗಬೇಕು ಎಂದು ಹೇಳಿದರು.

ಸಮಾಜ ಕಲ್ಯಾಣ ಇಲಾಖೆಯಲ್ಲಿ ಈ ಹಿಂದೆ ಇದ್ದ ಸಹಾಯಕ ನಿರ್ದೇಶಕಿ ಮೇಘಾ ಅವರ ಅವಧಿಯಲ್ಲಿ ನಡೆದಿರುವ ಅವ್ಯವಹಾರಗಳ ಬಗ್ಗೆ ತನಿಖೆಯಾಗಬೇಕು. ಪರಿಶಿಷ್ಟ ಜಾತಿ ವರ್ಗದ ವಿದ್ಯಾರ್ಥಿ ವೇತನ, ಪೀಠೊಪಕರಣಗಳ ಖರೀದಿಯಲ್ಲಿ ನಡೆದಿರುವ ಅವ್ಯವಹಾರ ಸೇರಿದಂತೆ ವಿವಿಧ ವಿಷಯಗಳ ಬಗ್ಗೆ ತನಿಖೆಯಾಗಬೇಕು ಎಂದು ಒತ್ತಾಯಿಸಿ ಪಟ್ಟಣದ ಸಮಾಜ ಕಲ್ಯಾಣ ಇಲಾಖೆಯ ಕಚೇರಿಯ ಮುಂಭಾಗ ಧರಣಿ ನಡೆಸಲಾಗುವುದು ಎಂದರು.

ಈ ವೇಳೆ ದಸಂಸ ತಾಲೂಕು ಸಂಯೋಜಕ ಎನ್‌. ಚಂದ್ರಶೇಖರ್‌, ಸಂಘಟನಾ ಸಂಚಾಲಕ ಎಂ.ಸಿದ್ದರಾಜು, ಹೋಬಳಿ ಸಂಚಾಲಕ ಬಿ. ರವಿ, ಕಾಳಿ ಪ್ರಸಾದ್‌ ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next