ರಾಮದುರ್ಗ: ರಾಜ್ಯ ಸರ್ಕಾರದಿಂದ ವಿದ್ಯುತ್ ದರ ಏರಿಕೆ ಹಾಗೂ ಕೇಂದ್ರ ಸರ್ಕಾರದ ತೈಲ ಬೆಲೆ ಏರಿಕೆ ಖಂಡಿಸಿ ಮತ್ತು ನೆರೆ ಪರಿಹಾರಕ್ಕಾಗಿ ಒತ್ತಾಯಿಸಿ ತಾಲೂಕಾ ಕಾಂಗ್ರೆಸ್ ಸಮಿತಿಯಿಂದ ತಹಶೀಲ್ದಾರ್ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಲಾಯಿತು.
ಕಾಂಗ್ರೆಸ್ ತಾಲೂಕಾ ವೀಕ್ಷಕರಾಗಿ ಆಗಮಿಸಿದ್ದ ಉಮೇಶ ಬಾಳಿ ಮಾತನಾಡಿ, ಕೊರೊನಾ ಮಹಾಮಾರಿ ಹಾಗೂ ನೆರೆ ಹಾವಳಿಯಿಂದ ಜನರು ತೊಂದರೆ ಅನುಭವಿಸುವ ಸಂದರ್ಭದಲ್ಲಿ ರಾಜ್ಯ ಸರ್ಕಾರವು ವಿದ್ಯುತ್ ದರ ಏರಿಕೆ ಮಾಡುವ ಮೂಲಕ ಜನತೆಯ ಮೇಲೆ ಮತ್ತೂಂದು ಹೊರೆ ಹಾಕುತ್ತಿರುವದು ಖಂಡನಿಯ. ವಿದ್ಯುತ್ ದರ ಹೆಚ್ಚಳದ ಆದೇಶವನ್ನು ತಕ್ಷಣ ಹಿಂಪಡೆಯಬೇಕೆಂದು ಒತ್ತಾಯಿಸಿದರು.
ಇದನ್ನೂ ಓದಿ:ಪೈಪ್‌ಲೈನ್ ಅಡುಗೆ ಅನಿಲ ಸಂಪರ್ಕ ಶೀಘ್ರ: ಸಿದ್ದೇಶ್ವರ
ಹಿರಿಯ ಮುಖಂಡ ಬಿ.ಎಸ್. ನಾಯಕ ಮಾತನಾಡಿ, ತೈಲ ಬೆಲೆ ಹೆಚ್ಚಳದಿಂದ ದಿನಬಳಕೆ ವಸ್ತುಗಳ ಬೆಲೆ ಹೆಚ್ಚಿವೆ. ತೈಲ ಬೆಲೆ ಕಡಿಮೆ ಮಾಡದಿದ್ದರೆ ಉಗ್ರ ಹೋರಾಟ ಮಾಡಬೇಕಾಗುತ್ತದೆ ಎಂದು ಹೇಳಿದರು. ಬ್ಲಾಕ ಕಾಂಗ್ರೆಸ್ ಅಧ್ಯಕ್ಷ ಜಿ.ಬಿ. ರಂಗನಗೌಡರ ಮಾತನಾಡಿದರು.
ಜಿ.ಪಂ ಸದಸ್ಯ ಜಹೂರ ಹಾಜಿ, ಮುಖಂಡರಾದ ಶಿವಯೋಗಿ ಚಿಕ್ಕೋಡಿ, ಜಯಪ್ರಕಾಶ ಶಿಂಧೆ, ಪುರಸಭೆ ಸದಸ್ಯೆ ರಾಜೇಶ್ವರಿ ಮೇಟಗುಡ್ಡ, ಎಸ್.ಎಂ. ಪಾಟೀಲ, ಎ.ಪಿ.ಎಂ.ಸಿ ಮಾಜಿ ಅಧ್ಯಕ್ಷ ಫಕೀರಪ್ಪ ಕೊಂಗವಾಡ, ಆನಂದ ಜಗತಾಪ್, ವಿಜಯಕುಮಾರ ರಾಠೊಡ, ಹನಮಂತ ಕೋಟಗಿ, ಕೃಷ್ಣಗೌಡ ಪಾಟೀಲ, ಇತರರಿದ್ದರು.