Advertisement

ಅಕ್ಕಿಗಾಗಿ ಕೇಂದ್ರದ ವಿರುದ್ಧ ಪ್ರತಿಭಟನೆ ಹಾಸ್ಯಾಸ್ಪದ: ಅಶ್ವತ್ಥನಾರಾಯಣ

08:20 PM Jun 17, 2023 | Team Udayavani |

ಮಂಡ್ಯ: ಕೇಂದ್ರದ ಅಕ್ಕಿಗಾಗಿ ಆಗ್ರಹಿಸಿ ಕಾಂಗ್ರೆಸ್ಸಿಗರು ಜೂ.20ರಂದು ಪ್ರತಿಭಟನೆಗೆ ಕರೆ ನೀಡಿರುವುದು ಹಾಸ್ಯಾಸ್ಪದ ಎಂದು ರಾಜ್ಯ ಬಿಜೆಪಿ ಪ್ರಧಾನ ಕಾರ್ಯದರ್ಶಿ ಅಶ್ವತ್ಥ ನಾರಾಯಣ ಹೇಳಿದರು.

Advertisement

ನಗರದಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾತನಾಡಿದ ಅವರು, ರಾಜ್ಯದಲ್ಲಿ ಆಡಳಿತ ನಡೆಸುತ್ತಿರುವುದು ಕಾಂಗ್ರೆಸ್‌ ಸರಕಾರ ಅಲ್ಲ. ಇದೊಂದು ದೋಖಾ ಸರಕಾರ. ಜನತೆಗೆ 5 ಗ್ಯಾರಂಟಿ ನೀಡುತ್ತೇವೆ ಎಂದು ಹೇಳಿಕೊಂಡು ಅಧಿ ಕಾರಕ್ಕೆ ಬಂದ ಇವರು, ಇವತ್ತು ವಿದ್ಯುತ್‌ ಬಿಲ್‌ ಜಾಸ್ತಿಯಾಗಿದೆ. ರಾಜ್ಯದಲ್ಲಿರುವ ಸಣ್ಣ ಕೈಗಾರಿಕೆಗಳು ಬೇರೆ ರಾಜ್ಯಕ್ಕೆ ವಲಸೆ ಹೋಗುವಂತೆ ಮಾಡಿದ್ದಾರೆ ಎಂದು ಕಿಡಿಕಾರಿದರು.

ಸಾರಿಗೆ ಬಸ್‌ನಲ್ಲಿ ಮಹಿಳೆಯರಿಗೆ ಪ್ರಯಾಣ ಉಚಿತವಾಗಿದೆ. ಪುರುಷ ಪ್ರಯಾಣಿಕರಿಗೆ ಬಸ್‌ ಸಿಗದೆ ಇರುವುದು ಖಚಿತವಾಗಿದೆ. ವಿದ್ಯುತ್‌ ಬಿಲ್‌, ಗೃಹಲಕ್ಷ್ಮಿ ಯೋಜನೆ, ನಿರುದ್ಯೋಗ ಭತ್ತೆ ನೀಡುವ ಗೊಂದಲ ನಿವಾರಣೆ ಮಾಡದೆ ಕೇಂದ್ರ ಸರಕಾರ ಅಕ್ಕಿ ಕೊಡುತ್ತಿಲ್ಲ ಎಂದು ಕಥೆ ಹೇಳಲು ಹೋರಾಟ ಮಾಡಲು ಕರೆ ಕೊಟ್ಟಿರುವುದು ಹಾಸ್ಯಾಸ್ಪದ ಎಂದರು.

ಸರಕಾರಕ್ಕೆ ಅಕ್ಕಿ ಬೇಕಿದ್ದರೆ ನಮ್ಮ ರಾಜ್ಯದಲ್ಲೇ ಭತ್ತದ ಕಣಜವಾಗಿರುವ ಗಂಗಾವತಿಯಲ್ಲಿದೆ. ಸರಕಾರದ ದರಕ್ಕೆ ಇಲ್ಲೇ ಭತ್ತ, ಅಕ್ಕಿ ಸಿಗುತ್ತದೆ. ರೈಸ್‌ಮಿಲ್‌ ಮಾಲಕರ ಬಳಿ ಮಾತನಾಡಿ ಅಕ್ಕಿ ತರಿಸಿಕೊಳ್ಳಬಹುದು. ಮಂಡ್ಯದ ರೈಸ್‌ಮಿಲ್‌ ಮಾಲಕರನ್ನು ಭೇಟಿ ಮಾಡಿ ಪಡೆಯಬಹುದು ಎಂದು ಸಲಹೆ ನೀಡಿದರು.

Advertisement

Udayavani is now on Telegram. Click here to join our channel and stay updated with the latest news.

Next