ಕುರುಗೋಡು : ಪರಿಶಿಷ್ಟರಲ್ಲದ ವೀರಶೈವ ಲಿಂಗಾಯತ ‘ಜಂಗಮರಿಗೆ’ ಬೇಡ ಜಂಗಮ ಜಾತಿ ಪ್ರಮಾಣ ಪತ್ರ ನೀಡುವುದನ್ನು ಖಂಡಿಸಿ ಕುರುಗೋಡು ತಾಲೂಕು ಪರಿಶಿಷ್ಟ ಜಾತಿಗಳ ಸಮೂಹ ವತಿಯಿಂದ ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಪತ್ರ ಸಲ್ಲಿಸಿದರು.
ಶ್ರೀ ದೊಡ್ಡಬಸವೇಶ್ವ ದೇವಸ್ಥಾನ ದಿಂದ ಪ್ರಾರಂಭಗೊಂಡ ಮೆರವಣಿಗೆ ರಾಜ ಬೀದಿ ಮೂಲಕ ಸಂಚರಿಸಿ ಎದುರು ಬಸವಣ್ಣ ರಸ್ತೆಗೆ ತಲುಪಿ ನಂತರ ತಹಸೀಲ್ದಾರ್ ಕಚೇರಿಗೆ ಸಮಾವೇಶಗೊಂಡು ಎಸ್ಸಿ ಪಟ್ಟಿಯಲ್ಲಿರುವ ನಾನಾ ಸಮುದಾಯದ ಮುಖಂಡರು ಪ್ರತಿಭಟನಾ ಮೆರವಣಿಗೆ ಮೂಲಕ ತೆರಳಿ ತಹಸೀಲ್ದಾರ್ ಅವರಿಗೆ ಮನವಿ ಸಲ್ಲಿಸಿದರು.
ಪ್ರತಿಭಟನೆ ವೇಳೆ ಹಲವರು ವೇಷ ಭೂಷಣ ಧರಿಸಿ ಜನರ ಗಮನ ಸೇಳದರು.
ಈ ವೇಳೆ ಕೆಲ ಪ್ರತಿಭಟನಾಕಾರರು ಮಾತನಾಡಿ, ವೀರಶೈವ ಲಿಂಗಾಯತ ಜಂಗಮರು ಅಸ್ಪೃಶ್ಯರಲ್ಲ. ವೀರಶೈವ ಲಿಂಗಾಯತ ಜಂಗಮರು ಬೇಡ ಜಂಗಮರಲ್ಲ. ಇವರು ಉನ್ನತ ಸಾಮಾಜಿಕ ಸ್ಥಾನಮಾನ ಹೊಂದಿದ್ದು, ಎಲ್ಲ ಕ್ಷೇತ್ರಗಳಲ್ಲಿ ಮುಂದುವರೆದಿದ್ದಾರೆ. ಪರಿಶಿಷ್ಟ ಜಾತಿಯ ಬೇಡ ಜಂಗಮರೊಂದಿಗೆ ಹೋಲಿಸಿಕೊಂಡು ಎಸ್ಸಿ ಮೀಸಲು ಕಬಳಿಸಲು ಮುಂದಾಗಿರುವುದು ಸಮಂಜಸವಲ್ಲ. ಈಗಾಗಲೇ ವೀರಶೈವ ಲಿಂಗಾಯತ ಜಂಗಮರೆಂದು ಪಡೆದ ಎಸ್ಸಿ ಜಾತಿ ಪ್ರಮಾಣಪತ್ರ ವಾಪಸ್ ಪಡೆಯಬೇಕು. ಸರಕಾರ ಒತ್ತಡಕ್ಕೆ ಮಣಿದು ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣಪತ್ರ ನೀಡಬಾರದು. ನಿಜವಾದ ಜಂಗಮರು ಎಂದರೆ ಅಲೆಮಾರಿ ಬೇಡ ಬುಡ್ಗ ಜಂಗಮರು ಆದ್ದರಿಂದ ವೀರಶೈವ ಲಿಂಗಾಯತ ಜಂಗಮರಿಗೆ ಎಸ್ಸಿ ಪ್ರಮಾಣಪತ್ರ ನೀಡಿದಲ್ಲಿ ಮುಂದಿನ ದಿನದಲ್ಲಿಉಗ್ರ ಹೋರಾಟ ಹಮ್ಮಿಕೊಳ್ಳಲಾಗುವುದು ಎಂದು ಎಚ್ಚರಿಕೆ ನೀಡಿದರು.
ಈ ಸಂದರ್ಭದಲ್ಲಿ ಸಂಘದ ಜಿಲ್ಲಾಧ್ಯಕ್ಷ ಗಂಗಾಧರ್, ಎಲ್. ಎಸ್. ರಾಮುಡು, ಹಂಡಿ ಜೋಗಿ ಜಿಲ್ಲಾಧ್ಯಕ್ಷ ಜೋಗಿ ಸುಂಕಪ್ಪ, ವಿ. ಗುರಪ್ಪ, ಡಿ. ಸಿದ್ದಪ್ಪ, ಹರಿಜನ ರುದ್ರಪ್ಪ, ಕೊರವರ ಆಂಜಿನಪ್ಪ, ಕುಡುತಿನಿ ಸಂಪತ್ ಕುಮಾರ್, ದುರ್ಗ ಪ್ರಸಾದ್, ರಾಮುಲು ಸೇರಿದಂತೆ ಇತರರು ಇದ್ದರು.