ರಾಮನಗರ: ಪೌರತ್ವ ತಿದ್ದುಪಡಿ ಕಾನೂನು (ಸಿಎಎ), ರಾಷ್ಟ್ರೀಯ ಪೌರತ್ವ ನೋಂದಣಿ (ಎನ್‌ಆರ್‌ಸಿ)ಹಾಗೂ ರಾಷ್ಟ್ರೀಯ ಜನಸಂಖ್ಯಾ ನೋಂದಣಿ (ಎನ್‌ಪಿಆರ್) ಗೆ ನಮ್ಮ ವಿರೋಧವಿದೆ.
ಇವುಗಳನ್ನು ಕೇಂದ್ರ ಸರ್ಕಾರ ತಕ್ಷಣ ಹಿಂದಕ್ಕೆ ಪಡೆಯಬೇಕು ಎಂದು ಒತ್ತಾಯಿಸಿ ವುಮೆನ್ಸ್ ಇಂಡಿಯಾ ಮೂಮೆಂಟ್ ಮತ್ತು ನ್ಯಾಷನಲ್ ವುಮನ್ ಫ್ರಂಟ್ ಸಂಘಟನೆಗಳ ಕಾರ್ಯಕರ್ತರು ನಗರದಲ್ಲಿ ಪ್ರತಿಭಟನೆ ನಡೆಸಿದರು.
ಜಿಲ್ಲಾ ಸರ್ಕಾರಿ ಕಚೇರಿಗಳ ಸಂಕೀರ್ಣದ ಮುಂಭಾಗ ಜಮಾಯಿಸಿದ ನೂರಾರು ಮಹಿಳಾ ಕಾರ್ಯಕರ್ತರು ಪೌರತ್ವ ಕಾಯ್ದೆಗೆ ತಿದ್ದುಪಡಿ ತರುವ ಮುನ್ನ ಮುಸ್ಲಿಂ ಸಮುದಾಯದ ಗಮನ ಸೆಳೆಯ ಬಹುದಿತ್ತು. ಬಲವಂತವಾಗಿ ಕಾಯ್ದೆ ಜಾರಿಗೆ ತಂದಿ ರುವುದು ಸರಿಯಲ್ಲ. ಈ ಕಾಯಿದೆ ಗಳನ್ನು ಮುಸ್ಲಿಂ ಸಮುದಾಯದ ಮೇಲೆ ಬಲವಂತವಾಗಿ ಹೇರಲು ಮುಂದಾಗಿದೆ ಎಂದರು.
ಕಾಯ್ದೆಗೆ ತಂದಿರುವ ತಿದ್ದುಪಡಿ ಸಂವಿಧಾನ ವಿರೋಧಿಯಾಗಿದೆ. ಜಾತ್ಯಾ ತೀತ ಮೌಲ್ಯಗಳಿಗೆ ವಿರುದ್ಧ ವಾಗಿದೆ. ಸಂವಿಧಾನದ 14ನೇ ವಿಧಿಯನ್ನು ಉಲ್ಲಂಘನೆ ಮಾಡಿದಂತಾಗುತ್ತದೆ. ಧರ್ಮದ ಆಧಾರದ ಮೇಲೆ ಪೌರತ್ವ ನಿರ್ಧರಿಸುವುದು ಸಂವಿಧಾನ ವಿರೋಧಿ ಧೋರಣೆ ಎಂದರು. ತಾರ ತಮ್ಯದಿಂದ ಕೂಡಿರುವ ಈ ಮಸೂದೆ ಯಿಂದ ದೇಶದಲ್ಲಿ ಈಗಾಗಲೆ ಅಶಾಂತಿವಾತಾವರಣ ಸೃಷ್ಟಿಯಾಗಿದ್ದು, ಕೇಂದ್ರ ಸರ್ಕಾರ ತಕ್ಷಣ ಇವುಗಳನ್ನು ವಾಪಸ್ಸು ಪಡೆಯಬೇಕು ಎಂದರು.
ಜೆಎನ್‌ಯು ವಿಶ್ವವಿದ್ಯಾಲಯ ಹಾಗೂ ರಾಜ್ಯದ ವಿದ್ಯಾರ್ಥಿಗಳ ಮೇಲೆ ಕಾನೂನು ಬಾಹಿರವಾಗಿ ಲಾಠಿ ಚಾರ್ಜ್, ಗೋಲಿಬಾರ್ ನಡೆಸಿದ್ದನ್ನು ಸಹ ಪ್ರತಿಭಟ ನಾಕಾರರು ಖಂಡಿಸಿದರು. ಪ್ರತಿಭಟನೆಯಲ್ಲಿ ಸಂಘಟನೆಯ ಪದಾಧಿಕಾರಿಗಳಾದ ಶಬರೀನ್ ತಾಜ್ ಸುಮೇರಾ, ಅಲ್ಮಾಸ್, ಸಿರಾಜುನ್ನಿಸಾ, ಮಾಹಿಯಾ ಮತ್ತಿತರರಿದ್ದರು.