ಕಟಪಾಡಿ: ಉದ್ಯಾವರ ಗ್ರಾಮದ ಜನ ವಸತಿ ಪ್ರದೇಶದಲ್ಲಿ ಮೀನಿನ ಹುಡಿ ಸಂಗ್ರಹ ಗೋದಾಮು ರಚನೆ ಮತ್ತು ಹೊಸ ಮೀನಿನ ಕೈಗಾರಿಕೆಗೆ ಆಕ್ಷೇಪ ವ್ಯಕ್ತಪಡಿಸಿದ ಪಿತ್ರೋಡಿ, ಕಲಾಯಿಬೈಲ್, ಸಂಪಿಗೆ ನಗರದ ಗ್ರಾಮಸ್ಥರು ಪರಿಸರ ರಕ್ಷಣೆ ಆರೋಗ್ಯ ಪಾಲನೆಯನ್ನು ಕಾಪಾಡುವಂತೆ ಭಿತ್ತಿಪತ್ರಗಳನ್ನು ಹಿಡಿದುಕೊಂಡು ಪಾದಯಾತ್ರೆ ನಡೆಸಿದರು.
ಈ ಮೂಲಕ ಗ್ರಾಮ ಪಂಚಾಯಿತಿಗೆ ಆಗಮಿಸಿ ಗ್ರಾಮ ಪಂಚಾಯತ್ ಅಧ್ಯಕ್ಷ ರಾಧಾಕೃಷ್ಣ ಶ್ರೀಯಾನ್ ಅವರಲ್ಲಿ ಮನವಿ ಮಾಡಿದರು.
ಇದನ್ನೂ ಓದಿ:ರಸ್ತೆ ಅಪಘಾತ: ಯಕ್ಷಗಾನ ಕಲಾವಿದ ಸುಬ್ರಹ್ಮಣ್ಯ ಚಿಟ್ಟಾಣಿಯವರಿಗೆ ಗಾಯ
ಜನವಸತಿ ಪ್ರದೇಶದಲ್ಲಿ ಕಾನೂನಿಗೆ ವಿರುದ್ಧವಾಗಿ ಇಂತಹ ಕೈಗಾರಿಕೆಗಳಿಗೆ ಅನುಮತಿಯನ್ನು ನೀಡದೆ ಗ್ರಾಮಸ್ಥರ ಆರೋಗ್ಯವನ್ನು ಕಾಪಾಡಿಕೊಳ್ಳುವಲ್ಲಿ ಸಹಕರಿಸಬೇಕು. ಈಗಾಗಲೇ ಕಾನೂನುಬಾಹಿರವಾಗಿ ನೀಡಿದ ಪರವಾನಿಗೆಗಳನ್ನು ಹಿಂಪಡೆಯುವಂತೆ ಗ್ರಾಮಸ್ಥರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದರು.
ಪಿಡಿಒ ನೇಮಕ ಮತ್ತು ಅಕೌಂಟೆಂಟ್ ರನ್ನು ವರ್ಗಾಯಿಸುವಂತೆ ಜನರು ಆಗ್ರಹಿಸಿದರು.