Advertisement
ಬೀದರ ನಗರ ಸೇರಿದಂತೆ ಜಿಲ್ಲಾದ್ಯಂತ ಬಂದ್ ಗೆ ಯಾವುದೇ ಸ್ಪಂದನೆ ಸಿಗಲಿಲ್ಲ. ನಗರದ ಗಾಂಧಿ ಗಂಜ್‌ನ ಅಡತ್, ಕೃಷಿ ಯಂತ್ರೋಪಕರಣ ಮತ್ತು ಔಷಧ ಅಂಗಡಿಗಳ ಮಾರುಕಟ್ಟೆ ಮಾತ್ರ ಬಂದ್‌ಮಾಡಿ ಹೋರಾಟಕ್ಕೆ ಬೆಂಬಲ ಸೂಚಿಸಿದ್ದವು. ಇವನ್ನು ಹೊರತುಪಡಿಸಿ ಎಲ್ಲ ಅಂಗಡಿ ಮುಗ್ಗಟ್ಟುಗಳು ಎಂದಿನಂತೆ ತೆರೆದಿದ್ದವು. ಆಟೋ, ಬಸ್ ಸಂಚಾರ ಸಾಮಾನ್ಯವಾಗಿತ್ತು.
Related Articles
Advertisement
ಖಾಸಗಿ ಸಂಘ-ಸಂಸ್ಥೆಗಳಿಗೆ ದೀರ್ಘ ಕಾಲದವರೆಗೆ ಗುತ್ತಿಗೆಗೆ ನೀಡಲಾಗಿದ್ದ ಜಮೀನನ್ನು ಸಹ ಗುತ್ತಿಗೆದಾರರಿಗೆ ಪರಭಾರೆ ಮಾಡಲು ಸರ್ಕಾರನಿರ್ಧರಿಸಿದೆ. ಈ ರೀತಿ ಪ್ರಜಾಸತ್ತಾತ್ಮಕವಲ್ಲದ ವಿಧಾನಗಳಲ್ಲಿ ನೈಸರ್ಗಿಕ ಸಂಪನ್ಮೂಲವನ್ನು ಕೆಲವು ಶ್ರೀಮಂತರು, ಬಂಡವಾಳಶಾಹಿಗಳ ಒಡೆತನಕ್ಕೆಒಪ್ಪಿಸುವುದು ಸಮಾನತೆ ತತ್ವಕ್ಕೆ ವಿರುದ್ಧವಾದುದು. ಆದ್ದರಿಂದ ಇಂತಹ ಅಮಾನುಷ ಆದೇಶಗಳಿಂದ ಜನರಿಗೆ ಉಳಿಗಾಲವಿಲ್ಲ ಎಂದರು.
ಬಿಜೆಪಿ ಸರ್ಕಾರದ ಈ ಅನೈತಿಕ ನಿರ್ಧಾರದಿಂದ ಭೂ-ಒಡೆತನದ ಕನಸು ಕಂಡ ಲಕ್ಷಾಂತರ ಭೂ ರಹಿತರ ಕೃಷಿ ಕಾರ್ಮಿಕರ ಆಸೆಗೆ ಬಿಜೆಪಿ ಸರ್ಕಾರ ಕೊಳ್ಳಿ ಇಟ್ಟುಶಾಶ್ವತವಾಗಿ ಅವರನ್ನು ಭೂಹೀನರನ್ನಾಗಿಸುತ್ತಿದೆ. ಹಾಗಾಗಿ ಸರ್ಕಾರ ತನ್ನ ನಿರ್ಧಾರದಿಂದ ಹಿಂದೆ ಸರಿಯಬೇಕು. ಎಪಿಎಂಸಿ ಕಾಯ್ದೆ ತಿದ್ದುಪಡಿಯನ್ನು ಹಿಂಪಡೆಯಬೇಕು ಎಂದು ಅಗ್ರಹಿಸಿದರು.
ಸಮಿತಿಯ ಜಿಲ್ಲಾ ಸಂಚಾಲಕ ಮಲ್ಲಿಕಾರ್ಜುನ ಸ್ವಾಮಿ, ಎಐಕೆಎಸ್ ಉಪಾಧ್ಯಕ್ಷ ಬಾಬುರಾವ್ ಹೊನ್ನಾ, ರೈತ ಸಂಘದ ಅಧ್ಯಕ್ಷ ಸಿದ್ರಾಮಪ್ಪ ಆಣದೂರೆ, ಪ್ರಮುಖರಾದ ನಜೀರ್ ಅಹ್ಮದ್, ಖಾಸೀಮ್ ಅಲಿ, ಅರ್.ಪಿ. ರಾಜಾ, ರವಿರಾಜ್, ದಯಾನಂದ ಸ್ವಾಮಿ ಸೇರಿದಂತೆ ಮತ್ತಿತರರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.