Advertisement

ಕಾರ್ಮಿಕ ವಿರೋಧಿ ನೀತಿ ವಿರುದ್ಧ ಪ್ರತಿಭಟನೆ

05:20 PM Nov 27, 2020 | Adarsha |

ಹೊನ್ನಾವರ: ದುಡಿಯುವ ವರ್ಗಗಳ ಸಂವಿಧಾನಾತ್ಮಕ ಬೇಡಿಕೆ ಈಡೇರಿಸಲು ದೇಶಾದ್ಯಂತ 11 ಸಂಘಟನೆಗಳು ಜಂಟಿಯಾಗಿ ಮುಷ್ಕರ ನಡೆಸುತ್ತಿದ್ದು ತಾಲೂಕಿನಲ್ಲಿಯೂ ಸಿಐಟಿಯು ಜೊತೆ ವಿವಿಧ ಸಂಘಟನೆಯವರು ಒಗ್ಗೂಡಿ ಶರಾವತಿ ವೃತ್ತದ ಬಳಿಯಿಂದ ತಹಶೀಲ್ದಾರ್‌ ಕಚೇರಿವರೆಗೆ ಪ್ರತಿಭಟನಾ ಮೆರವಣೆಗೆ ನಡೆಸಿದರು.

Advertisement

ಕೇಂದ್ರ ಹಾಗೂ ರಾಜ್ಯ ಸರ್ಕಾರ ಬೆಲೆ ಏರಿಕೆ ನಿಯಂತ್ರಣ ಮಾಡಲು ವಿಫಲವಾಗಿದ್ದು, ಎಲ್ಲಾ ವರ್ಗದ ಜನರು ಸಂಕಷ್ಟಕ್ಕೆ ಒಳಗಾಗಿದ್ದಾರೆ. ಕಾರ್ಮಿಕರನ್ನು ಗುಲಾಮರನ್ನಾಗಿಸುವ ಕಾಯ್ದೆ ಜಾರಿಗೆ ತರಲು ಮುಂದಾಗಿದೆ. ಅಂಗನವಾಡಿ ಬಿಸಿಯೂಟ ಆಶಾ ಸೇರಿದಂತೆ ವಿವಿಧ ರೀತಿಯಲ್ಲಿ ದುಡಿಯುವ ನೌಕರರನ್ನು ಕಾಯಂ ಮಾಡಲು ಮೀನಾಮೇಷ ಮಾಡುತ್ತಿದ್ದು, ಸೂಕ್ತ ವೇತನ ನೀಡುತ್ತಿಲ್ಲ.

ಹೊಸ ಶಿಕ್ಷಣ ನೀತಿ ಜಾರಿಗೆ ತರಲು ಮುಂದಾಗಿದ್ದು ಇದನ್ನು ಕೂಡಲೇ ರದ್ದುಗೊಳಿಸಬೇಕು. ಹಣಕಾಸು ವಲಯ, ರೈಲ್ವೆ, ರಕ್ಷಣಾ ವಲಯ ಖಾಸಗೀಕರಣ ಮಾಡುವುದನ್ನು ನಿಲ್ಲಿಸಬೇಕು. ಸರ್ಕಾರಿ ನೌಕರರ ಮೇಲಿನ ಅಕಾಲಿಕ ನಿವೃತ್ತಿ ವಾಪಸ್‌ ಪಡೆಯಬೇಕು.

ಇದನ್ನೂ ಓದಿ:ಮಲೆನಾಡ ಗಂಗೆ ಎಂದೇ ಪ್ರಸಿದ್ದಿ ಪಡೆದ ಹೇಮಾವತಿ ನದಿ ಉಗಮವಾಗಿದ್ದೇ ಇಲ್ಲಿ

ಎಲ್ಲರನ್ನು ಪಿಂಚಣೆವ್ಯಾಪ್ತಿಗೆ ತಂದು ಎನ್‌ಪಿಎಸ್‌ ಪದ್ಧತಿ ರದ್ದುಗೊಳಿಸಬೇಕು. ಉದ್ಯೋಗಖಾತ್ರಿ ಯೋಜನೆ ಕೆಲಸದ ದಿನವನ್ನು 200 ದಿನಗಳಿಗೆ ಹೆಚ್ಚಿಸಿ ಕೂಲಿಯ ಹಣ ಹೆಚ್ಚಿಸಬೇಕು. ನಾಗರಿಕ ಸೇವಾ ಅಧಿನಿಯಮ ಕಾಯ್ದೆ 2020ನ್ನು ಕೂಡಲೇ ವಾಪಸ್‌ ಪಡೆಯುವಂತೆ ಪ್ರಮುಖ 12 ಬೇಡಿಕೆ ಈಡೇರಿಸುವಂತೆ ಒತ್ತಾಯಿಸಿ ಮನವಿ ಸಲ್ಲಿಸಿದರು.

Advertisement

ತಾಲೂಕು ದಂಡಾಧಿಕಾರಿ ವಿವೇಕ ಶೇಣ್ವಿ ಮನವಿ ಸ್ವೀಕರಿಸಿದರು. ಸಿಐಟಿಯು ಜಿಲ್ಲಾಧ್ಯಕ್ಷ ತಿಲಕ ಗೌಡ, ಅಂಗನವಾಡಿ ನೌಕರರ ಸಂಘದ ಅಧ್ಯಕ್ಷೆ ಗೀತಾ ನಾಯ್ಕ, ಸಿಐಟಿಯು ತಾಲೂಕು ಅಧ್ಯಕ್ಷ ತಿಮ್ಮಪ್ಪ ಗೌಡ, ರೈತ ಸಂಘದ ಅಧ್ಯಕ್ಷ ಗಣೇಶ ಭಂಡಾರಿ, ಬಿಸಿಯೂಟ ನೌಕರರ ಸಂಘದ ತಾಲೂಕು ಅಧ್ಯಕ್ಷೆ ಶ್ರೀಮತಿ ನಾಯ್ಕ, ವಿವಿಧ ಸಂಘಟನೆ ಪ್ರಮುಖರಾದ ಬೀರ ಗೌಡ, ಗೋವಿಂದ ಮುಕ್ರಿ, ಅಣ್ಣಪ್ಪ ಗೌಡ, ವನಿತಾ ಆಚಾರಿ, ಮಂಜುನಾಥ ಗೌಡ ಸೇರಿದಂತೆ ಅಂಗನವಾಡಿ ಹಾಗೂ ಬಿಸಿಯೂಟ ನೌಕರರು ಹಾಜರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next