Advertisement
ಭಾರತ್ ಬಂದ್ ಹಿನ್ನೆಲೆ ಸೋಮವಾರ ಸುಮಾರು 595 ರೈಲುಗಳ ಸಂಚಾರ ರದ್ದು ಮಾಡಲಾಗಿತ್ತು. ದಿಲ್ಲಿಯಲ್ಲಿ ಹಲವೆಡೆ ಪ್ರತಿಭಟನೆ ನಡೆದ ಕಾರಣ ಟ್ರಾಫಿಕ್ ಜಾಮ್ ಉಂಟಾಗಿ, ಮೈಲುಗಟ್ಟಲೆ ವಾಹನಗಳು ಸಾಲುಗಟ್ಟಿ ನಿಲ್ಲಬೇಕಾಯಿತು. ಹರಿಯಾಣದ ಫತೇಹಾಬಾದ್‌ನಲ್ಲಿ ಸೇನಾಕಾಂಕ್ಷಿಗಳ ಗುಂಪೊಂದು ಲಾಲ್ ಬಟ್ಟಿ ಚೌಕ್‌ನಲ್ಲಿ ರಸ್ತೆ ತಡೆ ನಡೆಸಿತು.
Related Articles
Advertisement
ಅಗ್ನಿವೀರರಿಗೆ ವಿವಿಧ ಕಂಪೆನಿಗಳಿಂದ ಆಫರ್ :
ಸೇನೆಯಿಂದ ನಿವೃತ್ತರಾಗುವ ಅಗ್ನಿವೀರರಿಗೆ ತಮ್ಮ ಕಂಪೆನಿಯ ನೇಮಕಾತಿಯಲ್ಲಿ ಆದ್ಯತೆ ನೀಡಲಾಗುವುದು ಎಂದು ಮಹೀಂದ್ರಾ ಗ್ರೂಪ್ ಮುಖ್ಯಸ್ಥ ಆನಂದ್ ಮಹೀಂದ್ರಾ ಘೋಷಿಸಿದ್ದಾರೆ. ಇದರ ಬೆನ್ನಲ್ಲೇ ಆರ್‌ಪಿಜಿ ಗ್ರೂಪ್ ಮುಖ್ಯಸ್ಥ ಹರ್ಷ್ ಗೋಯೆಂಕಾ ಅವರೂ ಇದೇ ರೀತಿಯ ಘೋಷಣೆ ಮಾಡಿದ್ದು, ನಮ್ಮ ಕಂಪೆನಿಯೂ ಅಗ್ನಿವೀರರನ್ನು ಸ್ವಾಗತಿಸುತ್ತದೆ ಎಂದಿದ್ದಾರೆ. ಮತ್ತೂಂದೆಡೆ, ಟಾಟಾ ಸನ್ಸ್ ಕಂಪೆನಿಯ ಮುಖ್ಯಸ್ಥ ಎನ್. ಚಂದ್ರಶೇಖರ್ ಕೂಡ ಅಗ್ನಿಪಥ್‌ನಿಂದ ನಿವೃತ್ತಿ ಹೊಂದಿ ಬರುವ ಯೋಧರಿಗೆ ಟಾಟಾ ಸನ್ಸ್ ಸಂಸ್ಥೆಯಲ್ಲಿ ಉದ್ಯೋಗ ನೀಡುವುದಾಗಿ ಘೋಷಿಸಿದ್ದಾರೆ. ಇದರ ಜತೆಗೆ ಬಯೋಕಾನ್ ಸಂಸ್ಥೆಯ ಮುಖ್ಯಸ್ಥೆ ಕಿರಣ್ ಮಜುಂದಾರ್-ಶಾ, ಅಪೊಲೊ ಆಸ್ಪತ್ರೆಗಳ ಸಮೂಹ ಸಂಸ್ಥೆಗಳ ಜಂಟಿ ನಿರ್ವಹಣ ನಿರ್ದೇಶಕ ಸಂಗೀತಾ ರೆಡ್ಡಿ ಕೂಡ ಅಗ್ನಿಪಥ ಯೋಧರಿಗೆ ತಮ್ಮಲ್ಲಿ ಕೆಲಸ ಕೊಡುವುದಾಗಿ ಆಶ್ವಾಸನೆ ನೀಡಿದ್ದಾರೆ.
ಇದೇ ಮೊದಲ ಬಾರಿಗೆ ಸರಕಾರದ ಯೋಜನೆಯೊಂದನ್ನು ಸಮರ್ಥಿಸಿಕೊಳ್ಳಲು ಮೂರೂ ಪಡೆಗಳ ಮುಖ್ಯಸ್ಥರು ಸುದ್ದಿಗೋಷ್ಠಿ ನಡೆಸಬೇಕಾಯಿತು. ಸ್ವತಂತ್ರ ಭಾರತದ 75 ವರ್ಷಗಳ ಇತಿಹಾಸದಲ್ಲಿ ಹೀಗೆ ಎಂದೂ ಆಗಿರಲಿಲ್ಲ.-ಮಲ್ಲಿಕಾರ್ಜುನ ಖರ್ಗೆ, ಕಾಂಗ್ರೆಸ್ ಹಿರಿಯ ನಾಯಕ