ಹುಣಸೂರು: ನಗರದಲ್ಲಿ ಶಾಸಕ ಹೆಚ್ ಪಿ ಮಂಜುನಾಥ ರವರ ನೇತೃತ್ವದಲ್ಲಿ ಕೇಂದ್ರ ಸರ್ಕಾರದ ಅಗ್ನಿಪಥ ಯೋಜನೆಯ ವಿರುದ್ದ ಪ್ರತಿಭಟನೆ ನಡೆಸಲಾಯಿತು.
ಪ್ರತಿಭಟನೆಯಲ್ಲಿ ಶಾಸಕ ಎಚ್ ಪಿ.ಮಂಜುನಾಥ್ ಮಾತನಾಡಿ, ಕೇಂದ್ರ ಸರ್ಕಾರ ಜಾರಿಗೊಳಿಸಿರುವ ಅಗ್ನಿಪಥ್ ಯೋಜನೆಗೆ ನಮ್ಮ ವಿರೋಧವಿಲ್ಲ. ಆದರೆ ನೀವು ಅನುಷ್ಠಾನಗೊಳಿಸುತ್ತಿರುವ ಅಗ್ನಿಪಥ್ ನ ನೀತಿ ನಿಯಮಗಳಿಗೆ ನಮ್ಮ ವಿರೋಧವಿದೆ ಎಂದರು.
ಹೊಸ ನೀತಿ ನಿಯಮದಿಂದ ಸೈನ್ಯದ ಬಲ ಕುಗ್ಗುತ್ತದೆ. ಕೇವಲ ನಾಲ್ಕು ವರ್ಷ ಯುವಶಕ್ತಿಯನ್ಜು ಬಳಸಿಕೊಂಡು ನಂತರ ವಾಪಸ್ ಮನೆಗೆ ಕಳಿಸುವುದರಿಂದ ದೇಶದಲ್ಲಿ ನಿರುದ್ಯೋಗ ಸಮಸ್ಯೆ ಹೆಚ್ಚಾಗುತ್ತದೆ. ಅಗ್ನಿಪಥ ಯೋಜನೆಯಲ್ಲಿ ನೇಮಕಗೊಂಡವರಿಗೆ ಇತರೆ ಸೈನಿಕರಿಗೆ ನೀಡುವಂತೆ ಎಲ್ಲಾ ರೀತಿಯ ಸವಲತ್ತುಗಳನ್ನು ನೀಡಬೇಕು.
ಅವರಿಗೆ ಪೂರ್ಣಾವಧಿ ಉದ್ಯೋಗದ ಭರವಸೆ ನೀಡಬೇಕು ಎಂದು ಆಗ್ರಹಿಸಿದರು.
ಪ್ರತಿಭಟನೆಯಲ್ಲಿ ಕಾಂಗ್ರೆಸ್ ಪಕ್ಷದ ಅಧ್ಯಕ್ಷರುಗಳು ಪದಾಧಿಕಾರಿಗಳು ಕಾರ್ಯಕರ್ತರು ಹಾಗೂ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.