ಸಿಡ್ನಿ: ಸುಮಾರು ಎಂಟು ತಿಂಗಳ ಬಳಿಕ ಟೀಂ ಇಂಡಿಯಾ ಏಕದಿನ ಸರಣಿ ಆಡುತ್ತಿದೆ. ಸಿಡ್ನಿಯಲ್ಲಿ ನಡೆಯುತ್ತಿರುವ ಮೊದಲ ಪಂದ್ಯದ ಭಾರತ ಮತ್ತು ಆಸ್ಟ್ರೇಲಿಯಾ ತಂಡಗಳು ಮುಖಾಮುಖಿಯಾಗುತ್ತಿದೆ. ಇದರ ಮಧ್ಯೆ ಇಬ್ಬರು ಪ್ರತಿಭಟನಾಕಾರರು ‘ಅದಾನಿ’ ವಿರುದ್ಧದ ಪೋಸ್ಟರ್ ಹಿಡಿದು ಮೈದಾನಕ್ಕೆ ನುಗ್ಗಿದ ಘಟನೆ ನಡೆಯಿತು.
ಆಸೀಸ್ ಬ್ಯಾಟಿಂಗ್ ನಡೆಸುತ್ತಿದ್ದ ವೇಳೆ ಈ ಘಟನೆ ನಡೆಯಿತು. ಭಾರತೀಯ ಸ್ಟೇಕ್ ಬ್ಯಾಂಕ್ ಅದಾನಿಗೆ ಒಂದು ಬಿಲಿಯನ್ ಡಾಲರ್ ಲೋನ್ ನೀಡಬಾರದು ಎಂದು ಪ್ಲೇಕಾರ್ಡ್ ನಲ್ಲಿ ಬರೆಯಲಾಗಿದೆ. ಮೈದಾನಕ್ಕೆ ನುಗ್ಗಿದ ಪ್ರತಿಭಟನಾಕಾರರನ್ನು ರಕ್ಷಣಾ ಸಿಬ್ಬಂದಿ ಹೊರಗೆ ಕರೆದೊಯ್ದರು.
ಇದನ್ನೂ ಓದಿ:ಏಕದಿನ ಸರಣಿಗೆ ನಟರಾಜನ್: ಟೆಸ್ಟ್ ನಿಂದ ಇಶಾಂತ್ ಔಟ್, ರೋಹಿತ್ ಅನಿಶ್ಚಿತತೆ ಮುಂದುವರಿಕೆ
ಭಾರತೀಯ ಉದ್ಯಮಿ ಅದಾನಿ ಆಸ್ಟ್ರೇಲಿಯಾದಲ್ಲಿ ಗಣಿಗಾರಿಕೆ ಉದ್ಯಮ ಮಾಡುತ್ತಿದ್ದಾರೆ. ಅದಾನಿಯವರ ಕಾರ್ಮಿಚೆಲ್ ಕಲ್ಲಿದ್ದಲು ಗಣಿ ಹಲವಾರು ವರ್ಷಗಳಿಂದ ಸಾಕಷ್ಟು ವಿವಾದಗಳಿಗೆ ಕಾರಣವಾಗಿದೆ. ಗಣಿಗಾರಿಕೆಯಿಂದ ಪರಿಸರಕ್ಕೆ ಹಾನಿಯಾಗುತ್ತಿದೆ ಎಂದು ‘ಸ್ಟಾಪ್ ಅದಾನಿ’ ಸಮೂಹವು ಆರೋಪಿಸಿ ಈ ಗಣಿಗಾರಿಕೆ ಸ್ಥಗಿತ ಮಾಡಲು ಹೋರಾಡುತ್ತಿದೆ.
ಆಸ್ತ್ರೇಲಿಯಾದ ಹಲವೆಡೆ ಈ ಹೋರಾಟಗಳು ನಡೆಯುತ್ತಿದೆ.