ಮಂಡ್ಯ: ತಾಲೂಕಿನ ಸಂಪಹಳ್ಳಿ ಗ್ರಾಮದ ದಲಿತರಿಗೆ ನಿವೇಶನ ಗುರುತಿಸಿ ಕೂಡಲೇ ಹಕ್ಕುಪತ್ರ ನೀಡಬೇಕು ಎಂದು ಆಗ್ರಹಿಸಿ ಗ್ರಾಮಸ್ಥರು ದಲಿತ ಹಕ್ಕುಗಳ ಸಮಿತಿ ಕರ್ನಾಟಕ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿದರು. ನಗರದ ಜಿಲ್ಲಾಧಿಕಾರಿ ಕಚೇರಿ ಬಳಿ ಜಮಾಯಿಸಿದ ಕಾರ್ಯಕರ್ತರು, ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ನಂತರ ಜಿಲ್ಲಾಧಿಕಾರಿ ಕಚೇರಿ ಅಧಿಕಾರಿಗೆ ಮನವಿ ಸಲ್ಲಿಸಿದರು.
ವಾಪಸ್ ಪಡೆದಿದ್ದಾರೆ: ಹಲವು ವರ್ಷಗಳಿಂದ ಜೀವಂತವಾಗಿ ರುವ ಈ ಸಮಸ್ಯೆ ಬಗ್ಗೆ ಹಲವು ಬಾರಿ ಮನವಿ ಮಾಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ. ಸರ್ಕಾರ ಸರ್ವೆ ನಂ 129ರಲ್ಲಿ ಸಂಪಹಳ್ಳಿ ದಲಿತರಿಗೆ ನಿವೇಶನ ನೀಡಲು 4 ಎಕರೆ 32 ಗುಂಟೆ ಜಮೀನನ್ನು ಸ್ವಾ ಧೀನ ಮಾಡಿಕೊಂಡು ಪರಿಶಿಷ್ಟ ಜಾತಿ 40 ಕುಟುಂಬಗಳಿಗೆ ನಿವೇಶನ ಹಕ್ಕುಪತ್ರವನ್ನು 1987ರ ಜ.3ರಂದು ಹಂಚಿಕೆ ಮಾಡಿತ್ತು. ಈ ಪೈಕಿ 12 ಕುಟುಂಬಗಳಿಗೆ ಮುದ್ರಣ ತಪ್ಪಾಗಿದೆ ಎಂದು ಹಕ್ಕುಪತ್ರ ವಾಪಸ್ ಪಡೆದಿದೆ. ಆದರೆ, ಇದುವರೆಗೂ ಇನ್ನೂ ಹಕ್ಕುಪತ್ರ ನೀಡಿಲ್ಲ ಎಂದು ದೂರಿದರು.
28 ಕುಟುಂಬಕ್ಕೆ ಹಕ್ಕು ಪತ್ರ ನೀಡಿ ರುವಂತೆ ಉಳಿದ 12 ಕುಟುಂಬಗಳಿಗೂ ಜಾಗ ಅಳತೆ ಮಾಡಿ ಹದ್ದುಬಸ್ತು ಅಳತೆ ಮಾಡಿ, ಕ್ರಮ ಸಂಖ್ಯೆಯಂತೆ ಜಾಗ ಗುರುತಿಸಿ ಕೊಟ್ಟಿಲ್ಲ. ಯಾರಿಗೆ ಯಾವ ಜಾಗವೆಂದು ಗೊಂದಲ ಉಂಟಾಗಿದೆ. ಗ್ರಾಪಂನಿಂದ ಮನೆಕಟ್ಟಲು ಗ್ರಾÂಂಟ್ ಮಂಜೂರಾಗುತ್ತಿಲ್ಲ. ಮೂಲಭೂತ ಸೌಲಭ್ಯಗಳಾದ ರಸ್ತೆ, ಚರಂಡಿ ಸೇರಿದಂತೆ ಯಾವ ಸೌಕರ್ಯವನ್ನೂ ನೀಡಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.
ಗುರುತಿಸಿಲ್ಲ: ಗುಡಿಸಲು ಹಾಕಿಕೊಂಡು ಜೀವನ ಸಾಗಿಸುತ್ತಿರುವ ನಮಗೆ ಗ್ರಾಪಂ ಸೌಲಭ್ಯ ಪಡೆಯಲು ಆಗುತ್ತಿಲ್ಲ. ಹಲವಾರು ಬಾರಿ ಜಿಲ್ಲಾಧಿಕಾರಿ, ತಹಶೀಲ್ದಾರ್‌ರಿಗೆ ಅರ್ಜಿ ಸಲ್ಲಿಸಿದರೂ, ಇದುವರೆಗೂ ಜಾಗ ಗುರುತಿಸಿ ಕೊಟ್ಟಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.
ಈ ಸಂದರ್ಭದಲ್ಲಿ ಸಮಿತಿ ಜಿಲ್ಲಾ ಸಂಚಾಲಕ ಆರ್.ಕೃಷ್ಣ, ತಾಲೂಕು ಸಂಚಾಲಕಿ ಅಂಬೂಜಿ, ಮುದಗಂದೂರು ಶ್ರೀನಿವಾಸ್, ಮುಖಂಡರಾದ ಸುರೇಶ್, ಯಶವಂತ್, ಲೋಕೇಶ್, ಎಚ್.ಎಸ್. ಸತೀಶ್ ಮತ್ತಿತರರು ಉಪಸ್ಥಿತರಿದ್ದರು.