Advertisement
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿಯೇ 122 ಕೆರೆಗಳಿವೆ. ಈ ಹಿಂದಿನಿಂದಲೂಅವುಗಳ ರಕ್ಷಣೆ ಅಷ್ಟಕ್ಕಷ್ಟೇ ಎನ್ನುವಂತಿತ್ತು. ಇಲಾಖೆ ದಾಖಲೆಗಳಲ್ಲಿಮಾತ್ರ ನಮ್ಮ ವ್ಯಾಪ್ತಿಯಲ್ಲಿ ಇಷ್ಟು ಕೆರಗಳು ಇವೆ ಎನ್ನುವ ಮಾಹಿತಿ ಇಟ್ಟುಕೊಂಡಿತ್ತು. ಆದರೆ ವರ್ಷಕ್ಕೊಮ್ಮೆ ಲೆಕ್ಕಬಾಕಿ ತೋರಿಸುತ್ತಿತ್ತು. ಜಿಲ್ಲಾಡಳಿತವು 1980, 1990ರ ದಶಕದಲ್ಲಿ ಜಿಲ್ಲೆಯಲ್ಲಿ ಕೆರೆಗಳ ಅಭಿವೃದ್ಧಿ ಹಾಗೂ ನಿರ್ಮಾಣದ ನೂರಾರು ರೈತರ ಜಮೀನುಗಳನ್ನು ಸ್ವಾಧಿಧೀನ ಮಾಡಿಕೊಂಡು ಅವರಿಗೆ ಆಗಲೇ ಪರಿಹಾರವನ್ನೂ ನೀಡಿತ್ತು. ಆದರೆ ಅಧೀಕೃತವಾಗಿ ಪಹಣಿ ಪತ್ರಿಕೆಯನ್ನು ಸರ್ಕಾರದ ಸುಪರ್ದಿಗೆ ಮಾಡಿಕೊಂಡಿರಲಿಲ್ಲ. ಇದರಿಂದಾಗಿ ದಶಕದ ನಂತರವೂ ರೈತರ ಹೆಸರಿನಲ್ಲೇ ಆ ಜಮೀನು ಉಳಿದುಕೊಂಡಿದ್ದವು. ಕೆಲ ರೈತರು ಸರ್ಕಾರಕ್ಕೆ ಕೆರೆಗೆ ಭೂಮಿ ಕೊಟ್ಟಿದ್ದರೂ ಪಹಣಿ ಮುಂದುವರಿದಿದ್ದರಿಂದ ಅವುಗಳನ್ನೇ ಬ್ಯಾಂಕ್‌ನಲ್ಲಿ ಅಡಮಾನ ಇಟ್ಟು ಸಾಲ ಪಡೆಯುವುದು, ಬೆಳೆ ಸಾಲ ಪಡೆಯುವುದನ್ನು ಮಾಡುತ್ತಿದ್ದರು. ಇಂತಹ ಕೆಲವು ಪ್ರಕರಣಗಳು ಬೆಳಕಿಗೆ ಬಂದ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಕಾಳಜಿ ವಹಿಸುವ ಕೆಲಸ ಮಾಡಿದೆ.
Related Articles
Advertisement
ಸಣ್ಣ ನೀರಾವರಿ ಇಲಾಖೆ ನಿರ್ಲಕ್ಷ್ಯ: ಸಣ್ಣ ನೀರಾವರಿ ಇಲಾಖೆಯಡಿ 122 ಕೆರೆಗಳು ಇವೆ. ಅವುಗಳನ್ನು ಇಲಾಖೆಯು ದಾಖಲೆಯಲ್ಲಿ ಮಾತ್ರ ಇಟ್ಟುಕೊಂಡಿದೆ. ಆದರೆ ಅಲ್ಲಿ ಕೆರೆಗಳು ಒತ್ತುವರಿಯಾಗಿವೆ. ಇಲಾಖೆ ಈ ಇಲಾಖೆ ಕೆರೆಗಳ ರಕ್ಷಣೆ ಮಾಡುವ ಕಾಯಕದಲ್ಲಿ ತೊಡಗಿದರೆ ಮಾತ್ರ ಭವಿಷ್ಯದಲ್ಲಿ ಕೆರೆಗಳು ಉಳಿಯಲಿವೆ. ಇಲ್ಲದಿದ್ದರೆ ಮತ್ತೆ ಉಳ್ಳವರ ಪಾಲಾಗಲಿವೆ ಎನ್ನುವ ಮಾತು ಕೇಳಿ ಬಂದಿದೆ. ಇನ್ನಾದರೂ ಸಣ್ಣ ನೀರಾವರಿ ಇಲಾಖೆ ಕೆರೆಗಳ ಒತ್ತುವರಿ, ನಿಖರತೆ, ರಕ್ಷಣೆಯ ಬಗ್ಗೆ ಕಾಳಜಿ ವಹಿಸಬೇಕಿದೆ.
ಪಹಣಿಯಾದ ಕೆರೆಗಳು : ಭಾನಾಪುರ, ಹುಣಸಿಹಾಳ, ಗಾಣದಾಳ,ಚನ್ನಪ್ಪನಹಳ್ಳಿ ಕೆರೆ, ಚಿಕ್ಕ ಮ್ಯಾಗೇರಿ ಕೆರೆ,ರ್ಯಾವಣಕಿ, ಗುನ್ನಾಳ, ನಿಲೋಗಲ್, ಕಲ್ಲಬಾವಿ, ಬಳ್ಳೋಟಗಿ, ತಳಕಲ್, ಮುರಡಿ, ಬೆಣಕಲ್, ಮಲಕಸಮುದ್ರ, ನೆಲಜೇರಿ, ಕಟಗಿಹಳ್ಳಿ, ಹೊಸೂರು, ದ್ಯಾಂಪೂರ, ಚಿಕ್ಕ ಮನ್ನಾಪೂರ, ತಲ್ಲೂರ, ವಟಪರ್ವಿ, ತರಲಕಟ್ಟಿ ಕೆರೆಗಳಿಗೆ ಪಹಣಿ ಭಾಗ್ಯ ಬಂದಿದೆ. ಇವೆಲ್ಲವೂ ಸೇರಿ 760 ಎಕರೆ ಪ್ರದೇಶದಷ್ಟು ಒಳಗೊಂಡಿವೆ.
ಜಿಲ್ಲೆಯಲ್ಲಿ ಸಣ್ಣ ನೀರಾವರಿ ಇಲಾಖೆಯಡಿ ಈ ಹಿಂದೆ ಸರ್ಕಾರ 1980 ಹಾಗೂ 1990ರ ದಶಕದಲ್ಲಿ ಕೆರೆಗಳಿಗಾಗಿ ರೈತರ ಜಮೀನು ಸ್ವಾಧೀನ ಮಾಡಿ, ಅವರಿಗೆ ಪರಿಹಾರವನ್ನೂ ಕೊಟ್ಟಿತ್ತು. ಆದರೆ ಅವುಗಳಿಗೆ ಪಹಣಿ ಪತ್ರಿಕೆ ಮಾಡಿರಲಿಲ್ಲ. ಇನ್ನೂ ರೈತರ ಹೆಸರಿನಲ್ಲೇ ಇದ್ದವು. ಅಂತಹವುಗಳನ್ನು ಗುರುತಿಸಿ 22 ಕೆರೆಗಳಿಗೆ ಪಹಣಿ ಪತ್ರಿಕೆ ಮಾಡಿದ್ದೇವೆ. ಇನ್ನೂ ಇಂತಹ ಕೆರೆಗಳು ಇವೆ. ಅವುಗಳಿಗೂ ಪಹಣಿ ಪತ್ರಿಕೆಯ ಪ್ರಕ್ರಿಯೆ ನಡೆದಿದೆ.- ನಾರಾಯಣರಡ್ಡಿ ಕನಕರಡ್ಡಿ, ಕೊಪ್ಪಳ ಎಸಿ
-ದತ್ತು ಕಮ್ಮಾರ