ಸಕಲೇಶಪುರ: ಮಿನಿಲಾರಿಯೊಂದರಲ್ಲಿ ಅಕ್ರಮ ವಾಗಿ ಕಸಾಯಿಖಾನೆಗೆ ಸಾಗಿಸಲಾಗುತ್ತಿದ್ದ ಗೋವು ಗಳನ್ನು ಪಟ್ಟಣ ಪೋಲಿಸರು ವಶಪಡಿಸಿ ಕೊಂಡು ಲಾರಿ ಚಾಲಕನನ್ನು ಬಂಧಿಸಿರುವ ಘಟನೆ ಪಟ್ಟಣ ದಲ್ಲಿ ಬುಧವಾರ ಮುಂಜಾನೆ ನಡೆದಿದೆ.
ಹಾಸನದ ಕಡೆಯಿಂದ ಮಂಗಳೂರಿನ ಕಸಾಯಿ ಖಾನೆಯೊಂದಕ್ಕೆ ಲಾರಿಯಲ್ಲಿ ಅಕ್ರಮವಾಗಿ ರಾಸು ಗಳನ್ನು ಸಾಗಣೆ ಮಾಡಲಾಗುತ್ತಿದೆ ಎಂಬ ಖಚಿತ ಮಾಹಿತಿ ಹಿನ್ನೆಲೆಯಲ್ಲಿ ಭಜರಂಗದ ದಳ ಕಾರ್ಯ ಕರ್ತರು ಬುಧವಾರ ಮುಂಜಾನೆ ಲಾರಿಯೊಂದನ್ನು ತಡೆದು ಪರಿಶೀಲಿಸಿದಾಗ ತುಂಬಾ ಇಕ್ಕಟ್ಟಿನಲ್ಲಿ ಉಸಿರಾಡುವುದಕ್ಕೂ ಸಹ ಸಾಧ್ಯವಾಗದ ರೀತಿಯಲ್ಲಿ ತುಂಬಿಸಿಕೊಂಡು ಸಾಗಣೆ ಮಾಡುತ್ತಿರುವುದು ಕಂಡು ಬಂದಿದೆ.
ಇದನ್ನೂ ಓದಿ;- ರಾಯಚೂರು ರೈಲ್ವೆ ನಿಲ್ದಾಣದಲ್ಲಿ ಅಂಗವಿಕಲರಿಗೆ ತಪ್ಪದ ಪರದಾಟ
ಮೇಲ್ನೋಟಕ್ಕೆ ತರಕಾರಿ ಮೂಟೆಗಳನ್ನು ಸಾಗಣೆ ಮಾಡುವಂತೆ ಮೂಟೆಗಳನ್ನು ತುಂಬಿಸಿಕೊಂಡು ಲಾರಿಯ ಒಳಗೆ ಸುಮಾರು 17 ರಾಸುಗಳನ್ನು ಸಾಗಣೆ ಮಾಡಲಾಗುತ್ತಿತ್ತು. ತಕ್ಷಣ ಪೊಲೀಸರಿಗೆ ಭಜರಂಗದಳ ಕಾರ್ಯಕರ್ತರು ಮಾಹಿತಿ ನೀಡಿದ್ದು ಸ್ಥಳಕ್ಕೆ ಬಂದ ಪಟ್ಟಣ ಠಾಣೆ ಪಿಎಸ್‌ಐ ಬಸವರಾಜ್ ಚಿಂಚೋಳಿ ಸ್ಥಳಕ್ಕೆ ಆಗಮಿಸಿ ಯಾವುದೇ ಅಹಿತಕರ ಘಟನೆ ನಡೆಯದಂತೆ ನೋಡಿಕೊಂಡು ಲಾರಿ ಚಾಲಕ ಪಿರಿಯಾಪಟ್ಟಣ ತಾಲೂಕಿನ ಅಲಗನಹಳ್ಳಿ ನಿವಾಸಿ ನಸ್ರುÇÉಾ ಶರೀಫ್ನನ್ನು ಬಂಧಿಸಿ ಲಾರಿ ಯನ್ನು ವಶಕ್ಕೆ ಪಡೆದರು.
ರಾಸುಗಳನ್ನು ಮೈಸೂರಿನ ಪಿಂಜರ್ ಪೋಲ್ ಗೋ ಶಾಲೆಗೆ ಕಳಿಸಲಾಯಿತು. ಪಟ್ಟಣ ಠಾಣೆಯಲ್ಲಿ ದೂರು ದಾಖಲಾಗಿದೆ. ರಾಷ್ಟ್ರೀಯ ಹೆದ್ದಾರಿ 75ರ ಮುಖಾಂತರ ಮಂಗಳೂರು ಹಾಗೂ ಕೇರಳದ ಕಸಾಯಿಖಾನೆ ಗಳಿಗೆ ಅಕ್ರಮವಾಗಿ ನಿರಂತರ ಗೋವುಗಳ ಸಾಗಾಟ ಮಾಡಲಾಗುತ್ತಿದ್ದು ರಾಜ್ಯದಲ್ಲಿ ಗೋ ಹತ್ಯೆ ನಿಷೇಧ ಕಾನೂನು ಜಾರಿಯಲ್ಲಿದ್ದರೂ ಸಹ ಅಕ್ರಮ ಗೋವು ಸಾಗಾಟ ಮಾಡುವವರ ವಿರುದ್ಧ ಪೋಲಿಸರು ಕಠಿಣ ಕ್ರಮ ಕೈಗೊಳ್ಳುವಲ್ಲಿ ವಿಫಲರಾಗಿದ್ದಾರೆ ಎಂದು ಭಜರಂಗದಳ ಜಿಲ್ಲಾ ಸುರಕ್ಷಾ ಪ್ರಮುಖ್ ಕೌಶಿಕ್ ಆರೋಪಿಸಿದ್ದಾರೆ.