Advertisement

ಬಜರಂಗದಳ ದಿಂದ ಹಿಂದೂ ಧರ್ಮ ರಕ್ಷಣೆ: ಕುಂಟೋಜಿಮಠ

12:17 PM Feb 05, 2018 | Team Udayavani |

ಜೇವರ್ಗಿ: ವಿಶ್ವ ಹಿಂದೂ ಪರಿಷತ್‌ ಯುವ ವಿಭಾಗವಾದ ಬಜರಂಗದಳ ಸೇವಾ ಸುರಕ್ಷಾ ಸಂಸ್ಕಾರಗಳು ಎಂಬ ದೇಯೋದ್ಧೇಶ ಇಟ್ಟುಕೊಂಡು ಕಾರ್ಯನಿರ್ವಹಿಸುತ್ತಿರುವ ದೇಶದ ಅತ್ಯಂತ ದೊಡ್ಡ ಹಿಂದೂ ಯುವ ಸಂಘಟನೆಯಾಗಿದೆ ಎಂದು ವಿಎಚ್‌ಪಿ ತಾಲೂಕು ಘಟಕದ ಅಧ್ಯಕ್ಷ ಪ್ರವೀಣಕುಮಾರ ಕುಂಟೋಜಿಮಠ ಹೇಳಿದರು.

Advertisement

ಪಟ್ಟಣದ ನಿಜಶರಣ ಅಂಬಿಗರ ಚೌಡಯ್ಯನವರ ಸಮುದಾಯ ಭವನದಲ್ಲಿ ವಿಶ್ವ ಹಿಂದೂ ಪರಿಷತ್‌ ಹಾಗೂ ಬಜರಂಗ ದಳ ತಾಲೂಕು ಘಟಕದ ವತಿಯಿಂದ ಆಯೋಜಿಸಲಾಗಿದ್ದ ಸದಸ್ಯತ್ವ ಅಭಿಯಾನದಲ್ಲಿ ಅಧ್ಯಕ್ಷತೆ ವಹಿಸಿ ಅವರು ಮಾತನಾಡಿದರು.

ಹಿಂದೂ ಧರ್ಮದ ರಕ್ಷಣೆ ಚಟುವಟಿಕೆಗಳಲ್ಲಿ ಅತ್ಯಂತ ಮಂಚೂಣಿಯಲ್ಲಿರುವ ಈ ಸಂಘಟನೆ ದೇಶಾದ್ಯಂತ 75
ಲಕ್ಷಕ್ಕೂ ಹೆಚ್ಚು ಸಕ್ರಿಯ ಕಾರ್ಯಕರ್ತರನ್ನು ಹೊಂದಿದೆ. ದೇಶಾದ್ಯಂತ ಬಜರಂಗ ದಳ ಘಟಕ ಪ್ರಾರಂಭಿಸಿ,
ಲಕ್ಷಾಂತರ ಹಿಂದೂಗಳನ್ನು ಸಂಘಟಿಸಿ, ಸಂಸ್ಕಾರ ನೀಡಿ, ದೇಶಭಕ್ತರನ್ನಾಗಿ ಯುವಶಕ್ತಿಯನ್ನು ರಾಷ್ಟ್ರಶಕ್ತಿಯನ್ನಾಗಿ
ನಿರ್ಮಾಣ ಮಾಡುವ ಕಾರ್ಯದಲ್ಲಿ ಬಜರಂಗ ದಳ ತೊಡಗಿದೆ. ಅಲ್ಲದೇ ಪ್ರತಿಯೊಬ್ಬರಲ್ಲಿ ಹಿಂದೂ ಧರ್ಮದ ಕ್ಷಾತ್ರಭಾವ ಜಾಗೃತಗೊಳಿಸಿ ಹಿಂದೂ ಧರ್ಮದ ರಕ್ಷಣೆಗಾಗಿ ಕಾರ್ಯನಿರ್ವಹಿಸಲು ಕಟ್ಟಿಬದ್ಧರನ್ನಾಗಿಸುವ ಸಂಕಲ್ಪ ಮೂಡಿಸಲಾಗುತ್ತಿದೆ. ಹಿಂದೂ ಸಮಾಜಕ್ಕೆ ಎದುರಾಗಿರುವ ಸವಾಲುಗಳಾದ ಭಯೋತ್ಪಾದನೆ, ಮತಾಂತರ, ಗೋಹತ್ಯೆ, ಲವ್‌ ಜಿಹಾದ್‌, ಕಮ್ಯುನಿಸ್‌ಂ, ಅಕ್ರಮ ಬಾಂಗ್ಲಾ ನುಸುಳುಕೋರರು ಮತ್ತು ವಿಕೃತ ಬಿದ್ಧಿಜೀವಿಗಳ ದುಷ್ಕೃತ್ಯ ಇವೆಲ್ಲವನ್ನು ಮೆಟ್ಟಿ ನಿಂತು ಹಿಂದೂ ಸಮಾಜದಲ್ಲಿ ಸಾಮರಸ್ಯವನ್ನು ನಿರ್ಮಾಣ ಮಾಡಿ ನಾವೆಲ್ಲ ಹಿಂದು ನಾವೆಲ್ಲ ಒಂದು ನಾವೆಲ್ಲ ಒಂದು ಎಂಬುದನ್ನು ಜಾಗೃತಗೊಳಿಸುವ ಕಾರ್ಯವನ್ನು ವಿಎಚ್‌ಪಿ, ಬಜರಂಗದಳ ಮಾಡುತ್ತಿದೆ ಎಂದು ಹೇಳಿದರು.

ಮಕ್ಕಳ ತಜ್ಞ ಡಾ| ಪಿ.ಎಂ. ಮಠ ಅಭಿಯಾನಕ್ಕೆ ಚಾಲನೆ ನೀಡಿದರು. ಮುಖಂಡರಾದ ಈರಯ್ಯಸ್ವಾಮಿ ಹಿರೇಮಠ
ವಡಗೇರಾ, ಬಸಯ್ಯಸ್ವಾಮಿ ಹಿರೇಮಠ ಕೋಳಕೂರ, ಬಸವರಾಜ ಬಳಬಟ್ಟಿ, ಬಸವರಾಜ ಸೂಗೂರ, ಮಲ್ಲು ನಾಟಿಕಾರ, ಬಸವರಾಜ ಕಿರಣಗಿ, ಆಕಾಶ ಅಳ್ಳೋಳ್ಳಿ, ಭಾಸ್ಕರ್‌ ಹಳಿಮನಿ, ಬಸವರಾಜ ಸೇಡಂ ಭಾಗವಹಿಸಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next