Advertisement

ಆಹಾರ ರಕ್ಷಿಸಿದರೆ ಬಾಳು ಸುರಕ್ಷಾ

10:07 AM Oct 24, 2017 | |

ತರಕಾರಿ, ಹಾಲು-ಹಣ್ಣು, ಮೊಟ್ಟೆ, ಮಾಂಸ….ಇತ್ಯಾದಿ ಆಹಾರ ಪದಾರ್ಥಗಳನ್ನು ತಾಜಾ ಆಗಿ ಇಡಬೇಕಾದ ಅಗತ್ಯ ಈಗ ಹೆಚ್ಚಾಗಿದೆ. ಈ ಕೆಲಸದಲ್ಲೇ ಬದುಕು ಕಂಡುಕೊಳ್ಳುವವರೇ ಫ‌ುಡ್‌ ಟೆಕ್ನಾಲಜಿಸ್ಟ್‌ಗಳು. ಆಹಾರ ಪದಾರ್ಥಗಳ ಆಮದು-ರಫ್ತಿನಲ್ಲಿ ಮುಖ್ಯ ಪಾತ್ರ ವಹಿಸುವ ಅವರಿಗೆ ಸಾಕಷ್ಟು ಡಿಮ್ಯಾಂಡ್‌ ಇದೆ..

Advertisement

ಹಿಮಾವೃತವಾದ ಬಹಳಷ್ಟು ಪಾಶ್ಚಿಮಾತ್ಯ ದೇಶಗಳಲ್ಲಿ ಆಹಾರ ಪದಾರ್ಥಗಳನ್ನು ಬೆಳೆಯಲು ಅನುಕೂಲಕರ ವಾತಾವರಣವಿಲ್ಲ. ಅಂಥ ರಾಷ್ಟ್ರಗಳು ಬೇರೆ ಬೇರೆ ದೇಶಗಳಿಂದ ಹಣ್ಣು- ತರಕಾರಿ, ಮಾಂಸ, ಮೊಟ್ಟೆ ಇತ್ಯಾದಿ ಆಹಾರ ಪದಾರ್ಥಗಳನ್ನು ಆಮದು ಮಾಡಿಕೊಳ್ಳುತ್ತವೆ. ಇಂಥ ಆಹಾರ ಪದಾರ್ಥಗಳನ್ನು ಸಂರಕ್ಷಿಸಿ ತಾಜಾ ಆಗಿ ಜನರಿಗೆ ತಲುಪಿಸುವ ಹಿಂದೆ ಫುಡ್‌ ಟೆಕ್ನಾಲೊಜಿಗಳ ಶ್ರಮ ಬಹಳಷ್ಟಿದೆ. ಜಾಗತಿಕವಾಗಿ ಹೆಚ್ಚುತ್ತಲೇ ಇರುವ ಜನಸಂಖ್ಯೆಯಿಂದಾಗಿ ಹೊಸ ಆಹಾರ ಪದ್ಧತಿಗಳ ಅನ್ವೇಷಣೆ, ಸಾಮಗ್ರಿಗಳ ಸಂಸ್ಕರಣೆ, ಸಂರಕ್ಷಣೆ ಮಾಡಲು ಹೊರಟಿರುವ ಮಂದಿಯನ್ನು ಆಹಾರ ತಂತ್ರಜ್ಞರು ಎನ್ನಬಹುದು. 

ನಮ್ಮ ದೇಶದಲ್ಲಿ ಟೊಮೇಟೋ ಬೆಳೆಗೆ ಕೆ.ಜಿಗೆ ಒಂದು ರೂಪಾಯಿಯೂ ಸಿಕ್ತಾ ಇಲ್ಲವೆಂದು ರಸ್ತೆಗೆ ಚೆಲ್ಲಿ ಪ್ರತಿಭಟನೆ ಮಾಡುವ ರೈತರನ್ನು ಕಂಡಿದ್ದೇವೆ. ಆಯುಧ ಪೂಜೆ ಮುಗಿಯಿತೆಂದರೆ,  ನಗರಗಳ  ಮಾರುಕಟ್ಟೆಯಲ್ಲಿ  ಬೂದುಗುಂಬಳಕಾಯಿ ಚೆಲ್ಲಾಪಿಲ್ಲಿಯಾಗಿ ಬಿದ್ದಿರುತ್ತದೆ. ಪ್ರತಿದಿನ ಮಳೆ ಸುರಿಯುತ್ತದೆ ಎಂದರೆ ತರಕಾರಿ, ಹಣ್ಣು, ಸೊಪ್ಪು ಮಾರುವವರು ತಮ್ಮ ಪದಾರ್ಥಗಳನ್ನು ಸಂರಕ್ಷಿಸಿಕೊಳ್ಳುವುದು ಹೇಗೆಂದು ಗೊತ್ತಾಗದೆ ಪರದಾಡುತ್ತಾರೆ. ಇದು ಕೇವಲ ಸಾಮಾನ್ಯ ತರಕಾರಿ ವ್ಯಾಪಾರಸ್ಥರ ಸಮಸ್ಯೆಯಲ್ಲ. ಜಾಗತಿಕವಾಗಿ ಜನಸಂಖ್ಯೆ ಸಮಸ್ಯೆ ಎದುರಿಸುತ್ತಿರುವ ಎಲ್ಲಾ ದೇಶಗಳ ಸಮಸ್ಯೆ. ಅದಕ್ಕಾಗಿ ಆಹಾರ ಸಂರಕ್ಷಣೆಯ ಹಲವು ಯೋಜನೆಗಳು, ಸಂರಕ್ಷಣಾ ತಂತ್ರಗಳನ್ನು ಅನುಸರಿಸಲಾಗುತ್ತಿದೆ. ಜೊತೆಗೆ ಹೊಸ ರೀತಿಯ ಆಹಾರ ಪದ್ಧತಿಗಳನ್ನೂ ಪರಿಚಯಿಸುವ, ಆಹಾರ ಪದಾರ್ಥಗಳನ್ನು ಸಂಶೋಧಿಸುವ ಕೆಲಸವೂ ನಡೆಯುತ್ತಿದೆ. ಹಾಲು, ಹಣ್ಣು, ತರಕಾರಿಗಳನ್ನು ಬಹಳ ದಿನಗಳ ಕಾಲ ಕೆಡದಂತೆ ಇರಿಸಲು ಫುಡ್‌ ಟೆಕ್ನಾಲಲೊಜಿಗಳ ಸಹಾಯ ಅತ್ಯಗತ್ಯ. ಜೊತೆಗೆ, ಆಹಾರ ಪದಾರ್ಥಗಳ ಆಮದು - ರಫ್ತಿನಲ್ಲಿಯೂ ಇವರ ಪಾತ್ರ ಮಹತ್ವದ್ದು. ಇಂಥ ಆಹಾರ ತಂತ್ರಜ್ಞರಾಗಬೇಕೆಂದರೆ…

ವಿದ್ಯಾರ್ಹತೆ
ಎಸ್ಸೆಸ್ಸೆಲ್ಸಿ ಮುಗಿದ ಬಳಿಕ ಪಿಯುನಲ್ಲಿ ಪಿಸಿಎಂಬಿ ಅಥವಾ ಅಗ್ರಿಕಲ್ಚರ್‌ ಆಯ್ಕೆ ಮಾಡಿಕೊಳ್ಳಿ. ನಂತರ ಪದವಿ ತರಗತಿಯಲ್ಲಿ ಫುಡ್‌ ಟೆಕ್ನಾಲಜಿ, ಕೆಮಿಕಲ… ಟೆಕ್ನಾಲಜಿ, ಕೆಮಿಸ್ಟ್ರಿ, ಅಗ್ರಿಕಲ್ಚರಲ್ ಸೈನ್ಸ್, ಡೇರಿ ಸೈನ್ಸ್ ಇವುಗಳಲ್ಲಿ ಯಾವುದಾದರೊಂದನ್ನು ಆರಿಸಿಕೊಂಡು ಅಭ್ಯಾಸ ಮಾಡಿ. ಸ್ನಾತಕೋತ್ತರ ಪದವಿಯಲ್ಲಿ ಫುಡ್‌ ಟೆಕ್ನಾಲಜಿ ಕೋರ್ಸನ್ನು ಆಯ್ಕೆ ಮಾಡಿಕೊಂಡರೆ ಮುಂದೆ ಫ‌ುಡ್‌ ಟೆಕ್ನಾಲಜಿಸ್ಟ್‌ ಆಗುವುದು ಸುಲಭ. ಜೊತೆಗೆ, ಈ ಹುದ್ದೆಗೆ ಸಂಬಂಧಿಸಿದ ಹೊಸ ಮಾದರಿಯ ಯಂತ್ರಗಳ ಬಗ್ಗೆ ತಾಂತ್ರಿಕ ಜ್ಞಾನ ಪಡೆಯುವುದು ಸೂಕ್ತ.

ಕೌಶಲಗಳು
ಆಹಾರ ಪದಾರ್ಥ, ವಸ್ತು, ವಿಷಯಗಳ ಬಗ್ಗೆ ವಿಮಶಾì ಜ್ಞಾನ ಶುಚಿ, ರುಚಿ, ಮಾಂಸಾಹಾರಿ, ಸಸ್ಯಾಹಾರಿ ವಸ್ತುಗಳ ಬಗೆಗೆ ಸಾಮಾನ್ಯ ಜ್ಞಾನ ಸಂಸ್ಕರಣೆ, ಸಂರಕ್ಷಣೆ, ಜೀವಶಾಸ್ತ್ರ ಆಹಾರ ಅವಸ್ಥೆಗಳ ಬಗ್ಗೆ ಪರಿಪೂರ್ಣ ಅರಿವು ಆಹಾರ ಪದಾರ್ಥಗಳ ಫ್ಲೇವರ್‌, ಪೌಷ್ಟಿಕಾಂಶ, ವಿಟಮಿನ್ಸ್, ನ್ಯೂಟ್ರಿನ್‌ಗಳ ಬಗ್ಗೆ ತಿಳಿವಳಿಕೆ ಆಹಾರ ಸಾಮಗ್ರಿಗಳ ಮೌಲ್ಯ, ಗುಣಮಟ್ಟ, ಮಾರುಕಟ್ಟೆ ತಲ್ಲಣಗಳ ಕುರಿತು ವಿಮಶಾì ಜ್ಞಾನ ತಂತ್ರಜ್ಞಾನ, ಯಂತ್ರಗಳ ಬಳಕೆ, ಸಂರಕ್ಷಣಾ ಸಂಬಂಧಿ ಕೆಮಿಕಲ್ ಬಳಕೆ ಕುರಿತು ಅರಿವು

Advertisement

ಗಳಿಕೆ
ಜಾಗತಿಕವಾಗಿ ಜನಸಂಖ್ಯೆ ಹೆಚ್ಚಳವಾಗುತ್ತಿದ್ದು. ಆಹಾರ ಪದಾರ್ಥಗಳ ಆಮದು ರಪ್ತಿನಲ್ಲಿಯೂ ಬೆಳವಣಿಗೆ ಹೆಚ್ಚುತ್ತಿದೆ. ಅದಕ್ಕೆ ಅನುಗುಣವಾಗಿ ಆಹಾರ ಸಾಮಗ್ರಿಗಳ ಉತ್ಪಾದನೆ, ಸಂಸ್ಕರಣೆ, ಸಂರಕ್ಷಣೆಯೂ ತನ್ನ ವೇಗವನ್ನು ಹೆಚ್ಚಿಸಿಕೊಳ್ಳುತ್ತಿದೆ. ಹೀಗಾಗಿ ಆಹಾರ ತಂತ್ರಜ್ಞರ ಅಗತ್ಯ ಹೆಚ್ಚುತ್ತಿದೆ. ಅದ್ದರಿಂದ ಅವರ ಪ್ರಾರಂಭ ಹಂತದ ಸಂಬಳ ವಾರ್ಷಿಕವಾಗಿ 2 ಲಕ್ಷವಿದ್ದು, ಅನುಭವಿ ತಂತ್ರಜ್ಞರು ವಾರ್ಷಿಕ 7- 10 ಲಕ್ಷ ರೂ. ಸಂಬಳ ಪಡೆಯುತ್ತಾರೆ. ವಿದೇಶಿ ಕಂಪನಿಗಳಲ್ಲಾದರೆ ದೊಡ್ಡ ಮೊತ್ತದ ವಾರ್ಷಿಕ ಪ್ಯಾಕೇಜ…ಗಳ ಆಫರ್‌ ಸಿಗುತ್ತದೆ.

ಅವಕಾಶಗಳು
ಆಹಾರ ಕೈಗಾರಿಕೆಗಳು, ಪ್ಯಾಕೇಜಿಂಗ್‌ ಕೈಗಾರಿಕೆಗಳು, ಕೂಲ್ ಡ್ರಿಂಕ್ಸ್ ಕಾರ್ಖಾನೆಗಳು, ಮಲ್ಟಿಸ್ಟಾರ್‌ ಹೋಟೆಲ್‌ಗ‌ಳು, ಡಿಸ್ಟಿಲರಿಗಳು, ಮಸಾಲೆ ಮತ್ತು ಆಹಾರ ಧಾನ್ಯ ಸಂರಕ್ಷಣಾ ಘಟಕಗಳು, ಫುಡ್‌ ಪಾರ್ಕ್‌ ಗಳು, ಆಹಾರ ಸಂಶೋಧನಾ ಘಟಕಗಳು..

ಕಾಲೇಜುಗಳು
ಕೇಂದ್ರೀಯ ಆಹಾರ ತಾಂತ್ರಿಕ ಸಂಶೋಧನಾ ಸಂಸ್ಥೆ (ಸಿಎಫ್‌ಟಿಆರ್‌ಐ), ಮೈಸೂರು
ಮೈಸೂರು ವಿಶ್ವವಿದ್ಯಾಲಯ, ಮೈಸೂರು
ಡಾ. ಬಾಬಾಸಾಹೇಬ್ ಅಂಬೇಡ್ಕರ್‌ ಮರಾಠವಾಡ ವಿಶ್ವವಿದ್ಯಾಲಯ, ಔರಂಗಾಬಾದ್‌
ಮಹಾತ್ಮಾಗಾಂಧಿ ಚಿತ್ರಕೂಟ ಗ್ರಾಮೋದಯ ವಿಶ್ವವಿದ್ಯಾಲಯ, ಮಧ್ಯ ಪ್ರದೇಶ
ದೆಹಲಿ ವಿಶ್ವವಿದ್ಯಾಲಯ, ದೆಹಲಿ
ಜಾದವಪುರ ವಿಶ್ವವಿದ್ಯಾಲಯ, ಪಶ್ಚಿಮ ಬಂಗಾಳ
ಕಾಕತೀಯ ವಿಶ್ವವಿದ್ಯಾಲಯ, ವಾರಂಗಲ…
ಆಂಧ್ರ ವಿಶ್ವವಿದ್ಯಾಲಯ, ಆಂಧ್ರಪ್ರದೇಶ
ಮಣಿಪುರ ವಿಶ್ವವಿದ್ಯಾಲಯ, ಮಣಿಪುರ

ಎನ್‌. ಅನಂತನಾಗ್‌

Advertisement

Udayavani is now on Telegram. Click here to join our channel and stay updated with the latest news.

Next