Advertisement

ಬೀದಿಯಲ್ಲಿ ಅಕ್ಕಿ ಬೇಡುತ್ತಿದ್ದ ಮಕ್ಕಳ ರಕ್ಷಣೆ

09:59 PM May 17, 2020 | Sriram |

ಮಲ್ಪೆ: ರಾಷ್ಟ್ರೀಯ ಹೆದ್ದಾರಿ ಅಂಬಲಪಾಡಿಯಲ್ಲಿ ಊಟಕ್ಕೆ ಅಕ್ಕಿ ಕೊಡಿ ಎಂದು ಸಾರ್ವಜನಿಕರಲ್ಲಿ ಅಂಗಲಾಚುತ್ತಿದ್ದ ಇಬ್ಬರು ಬಾಲಕರನ್ನು ವಿಶು ಶೆಟ್ಟಿ ಅಂಬಲಪಾಡಿ ಅವರು ತುರ್ತು ಸಹಾಯ ನೀಡಿ ರಕ್ಷಿಸಿ ಹೆತ್ತವರಿಗೆ ಒಪ್ಪಿಸಿದ್ದಾರೆ.

Advertisement

ಬಾಲಕರು ನಮಗೆ ಇದುವರೆಗೆ ಉಚಿತ ಊಟ ಸಿಗುತ್ತಿತ್ತು. ಇದೀಗ ಮನೆಯಲ್ಲಿದ್ದ ಅಕ್ಕಿ ಖಾಲಿಯಾಗಿದೆ. ತಂದೆ ಮಾಡುತ್ತಿದ್ದ ಕೆಲಸ ಇನ್ನೂ ಪ್ರಾರಂಭವಾಗಲಿಲ್ಲ. ತಾಯಿಯ ಆರೋಗ್ಯ ಸರಿ ಇಲ್ಲ. ಹಾಗಾಗಿ ಮನೆಯಲ್ಲಿ ಊಟಕ್ಕೆ ಅಕ್ಕಿ ಇಲ್ಲದೆ ಉಪವಾಸ ಇರಬೇಕಾದ ಪರಿಸ್ಥಿತಿ ಒದಗಿದೆ ಅವರಲ್ಲಿ ತಮ್ಮ ಅಳಲನ್ನು ತೋಡಿಕೊಂಡಿದ್ದಾರೆ.

ಇದಕ್ಕೆ ಸ್ಪಂದಿಸಿದ ಅವರು ಅಸಹಾಯಕ ಕುಟುಂಬಕ್ಕೆ 20 ಕೆ.ಜಿ. ಅಕ್ಕಿ ಹಾಗೂ ದಿನಸಿ ಸಾಮಗ್ರಿ ನೀಡಿ, ಬಾಲಕರನ್ನು ಹೆತ್ತವರಿಗೆ ಒಪ್ಪಿಸಿ, ಮಕ್ಕಳನ್ನು ಬೀದಿಯಲ್ಲಿ ಬೇಡಲು ಬಿಡಬೇಡಿ ಬುದ್ಧಿ ಮಾತು ಹೇಳಿದ್ದಾರೆ. ಮುಂದಿನ ದಿನಗಳಲ್ಲಿ ಇಂತಹ ಅಸಹಾಯಕ ಮಕ್ಕಳು ಬೀದಿಗೆ ಬೀಳುವ ಸಂಭವ ಹೆಚ್ಚಾಗಿದೆ. ಸಂಬಂಧಪಟ್ಟ ಅಧಿಕಾರಿಗಳು, ಇಲಾಖೆಯವರು ಮಕ್ಕಳು ಬೀದಿಗೆ ಇಳಿಯದಂತೆ, ಬೀಳ‌ದಂತೆ ಮಾನವೀಯ ಕ್ರಮ ಕೈಗೊಳ್ಳಬೇಕೆಂದು ಅವರು ವಿನಂತಿಸಿದ್ದಾರೆ.

 

Advertisement

Udayavani is now on Telegram. Click here to join our channel and stay updated with the latest news.

Next