Advertisement

ಕಾನೂನು ಪಾಲಕರಿಗೆ ರಕ್ಷೆ ; ಭಂಜಕರಿಗೆ ಶಿಕ್ಷೆ

11:05 AM Jan 30, 2018 | |

ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಕಾನೂನು ಮತ್ತು ಸುವ್ಯವಸ್ಥೆಯನ್ನು ಪಾಲಿಸುವ ನಿಟ್ಟಿನಲ್ಲಿ ಈ ಹಿಂದಿನ ಪೊಲೀಸ್‌ ವರಿಷ್ಠಾಧಿಕಾರಿಗಳು ಕೈಗೊಂಡಿರುವ ಉಪಕ್ರಮಗಳನ್ನು ಮುಂದುವರಿಸುವ ಜತೆಗೆ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿಯಾಗಿಸಲು ಪ್ರಯತ್ನಿಸಲಾಗುವುದು. ಕಾನೂನು ಪಾಲಕರಿಗೆ ರಕ್ಷಣೆ ಹಾಗೂ ಕಾನೂನು ಭಂಜಕರು ಮತ್ತು ದುಷ್ಕೃತ್ಯ ನಡೆಸುವವರ ವಿರುದ್ಧ ಕಠಿನ ಕ್ರಮ ಕೈಗೊಳ್ಳಲಾಗುವುದು – ಇದು ದಕ್ಷಿಣ ಕನ್ನಡ ಜಿಲ್ಲೆಯ ನೂತನ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿಯಾಗಿ ಅಧಿಕಾರ ಸ್ವೀಕರಿಸಿರುವ ಡಾ| ಬಿ.ಆರ್‌. ರವಿಕಾಂತೇ ಗೌಡ ನೀಡಿರುವ ಸ್ನೇಹ ಸಂದೇಶ ಮತ್ತು ಎಚ್ಚರಿಕೆ.

Advertisement

ಇಲಾಖೆಯಲ್ಲಿ 20 ವರ್ಷಗಳ ಸುದೀರ್ಘ‌ ಸೇವಾನುಭವ ಹೊಂದಿರುವ ಡಾ|  ರವಿಕಾಂತೇಗೌಡ ಕಳೆದ ಎರಡು ದಶಕಗಳಲ್ಲಿ ಮೈಸೂರು, ಬೆಂಗ ಳೂರು, ಹುಬ್ಬಳ್ಳಿ-ಧಾರವಾಡ, ಬೆಳಗಾವಿಜಿಲ್ಲೆಗಳಲ್ಲಿ ಸೇವೆ ಸಲ್ಲಿಸಿ ದ್ದಾರೆ. ಸೋಮವಾರ ದ.ಕ. ಜಿಲ್ಲಾ ಎಸ್‌ಪಿಯಾಗಿ ಅಧಿಕಾರ ಸ್ವೀಕರಿಸಿದ  ಸಂದರ್ಭ ಅವರು ಉದಯವಾಣಿಗೆ ನೀಡಿದ ವಿಶೇಷ ಸಂದರ್ಶನ ಇದು.

 ಕರಾವಳಿ ಜಿಲ್ಲೆಯಲ್ಲಿ ನಿಮ್ಮ ಆದ್ಯತೆಗಳೇನು?
    ಕಾನೂನು ಸುವ್ಯವಸ್ಥೆ ಕಾಪಾಡು ವುದು, ಪೊಲೀಸ್‌ ಇಲಾಖೆಯನ್ನು ಇನ್ನಷ್ಟು ಜನಸ್ನೇಹಿ ಯಾಗಿಸಲು ಪ್ರಯತ್ನ, ಜನರ ಜತೆಗೆ ನಾವಿದ್ದೇವೆ ಎಂಬ ವಿಶ್ವಾಸ ಮೂಡಿಸುವ ನಿಟ್ಟಿನಲ್ಲಿ ಇಲಾಖೆ ಪರಿಣಾಮ ಕಾರಿ ಯಾಗಿ ಕಾರ್ಯ ನಿರ್ವಹಿಸು ವಂತೆ ನೋಡಿ ಕೊಳ್ಳುವುದು ಪ್ರಥಮ ಆದ್ಯತೆ.

ಕೋಮು ಸೂಕ್ಷ್ಮ ಜಿಲ್ಲೆಯಲ್ಲಿ ಯಾವ ರೀತಿ ಕಾರ್ಯ ನಿರ್ವಹಿಸುವಿರಿ?
     ಸೂಕ್ಷ್ಮತೆಯನ್ನು ಅರಿತುಕೊಂಡು, ಹಿಂದಿನ ಅಧಿಕಾರಿಗಳ ಅನುಭವ ಹಾಗೂ ಹಿರಿಯ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಯಾವುದೇ ರೀತಿಯ ಸವಾಲುಗಳನ್ನು ಸಮರ್ಥವಾಗಿ ನಿಭಾ ಯಿಸುವ ಆತ್ಮವಿಶ್ವಾಸ ಇದೆ.

ಅಕ್ರಮ ಮರಳು ಮಾಫಿಯಾ ತಡೆಯಲು ಏನು ಕ್ರಮ ಕೈಗೊಳ್ಳುವಿರಿ?
     ಅಕ್ರಮ ಮರಳುಗಾರಿಕೆಗೆ ಸಂಬಂಧಿಸಿ ಮಾತ್ರ ವಲ್ಲ , ಎಲ್ಲ ರೀತಿಯ ಅಕ್ರಮಗಳ ವಿರುದ್ಧವೂ ಸೂಕ್ತ ಕ್ರಮ ಜರಗಿಸಲಾಗುವುದು.

Advertisement

ಬೆಳಗಾವಿಯಲ್ಲಿ ಕೈಗೊಂಡ ಕ್ರಮಗಳನ್ನು ಮುಂದುವರಿಸುವಿರಾ?
      ಪೊಲೀಸ್‌ ಠಾಣೆಗಳನ್ನು ಇನ್ನಷ್ಟು ಜನಸ್ನೇಹಿ ಯಾಗಿಸುವ ನಿಟ್ಟಿನಲ್ಲಿ ಬೆಳಗಾವಿಯಲ್ಲಿ ಮುಖ ಕಚೇರಿಗಳನ್ನು (ಫ್ರಂಟ್‌ ಆಫೀಸ್‌) ತೆರೆ ಯುವ ಪ್ರಕ್ರಿಯೆ ನಡೆದಿದೆ. ಠಾಣೆಗಳಿಗೆ ಬರುವ ಸಾರ್ವಜನಿಕರಿಗೆ ನೀರು, ಆಸನ ಹಾಗೂ ಅಧಿ ಕಾರಿ ಗಳು ಇಲ್ಲದಿದ್ದ ಸಂದರ್ಭದಲ್ಲಿ ಪತ್ರಿಕೆ ಗಳನ್ನು ಓದಲು ಅನುಕೂಲತೆ ಕಲ್ಪಿಸಲಾಗಿದೆ. ದ.ಕ.ದಲ್ಲೂ ಪ್ರಾರಂಭಿಸಲು ಸಾಧ್ಯವೇ ಎಂಬುದನ್ನು ಪರಿ ಶೀಲಿಸಿ ಕ್ರಮ ಕೈಗೊಳ್ಳ‌ಲಾಗುವುದು.

ಆಡಳಿತದಲ್ಲಿ ರಾಜಕೀಯ ಹಸ್ತಕ್ಷೇಪವನ್ನು ಯಾವ ರೀತಿ ನಿಭಾಯಿಸುವಿರಿ? 
     ನಾನು ದ.ಕ. ಜಿಲ್ಲೆಯಲ್ಲಿ ಸೇವೆ ಸಲ್ಲಿ ಸಲು ಇಷ್ಟಪಟ್ಟು ಬಂದಿದ್ದೇನೆ. ದ.ಕ.ವು ಸಾಂಸ್ಕೃತಿಕ ವಾಗಿ, ಬೌದ್ಧಿಕವಾಗಿ ಹೆಸರು ಪಡೆದ ಜಿಲ್ಲೆ. ಹಾಗಾಗಿ ಜನಸಾಮಾನ್ಯನಿಂದ ಹಿಡಿದು ಜನ ಪ್ರತಿನಿಧಿ ಯ ವರೆಗೆ ಯಾರೇ ಆದರೂ ಕಾನೂನು ಚೌಕಟ್ಟಿ ನೊಳಗೆ ಸಮಾಜಕ್ಕೆ ಹಿತಕರವಾದ ಸಲಹೆಯನ್ನು ನೀಡಿದರೆ ಅದನ್ನು ಹಸ್ತಕ್ಷೇಪವಾಗಿ ಪರಿಗಣಿಸದೆ ಸಲಹೆಯಾಗಿ ಸ್ವೀಕರಿಸಲಾಗುವುದು. ಕಾನೂನಿಗೆ ವಿರುದ್ಧ ವಾಗಿದ್ದಲ್ಲಿ ಅದನ್ನು ತಿರಸ್ಕರಿಸಲಾಗುತ್ತದೆ.

ಬೆಳಗಾವಿಯಲ್ಲಿ ಕನ್ನಡದಲ್ಲಿ ಕವಾಯತು ಆರಂಭಿಸಿದ ನೀವು ಅದನ್ನು ದಕ್ಷಿಣ ಕನ್ನಡದಲ್ಲಿ ಪರಿಚಯಿಸುವಿರಾ? 
     ಪೊಲೀಸ್‌ ಇಲಾಖೆಗೆ ಸಂಬಂಧಿಸಿದ ಕವಾ ಯತು ಪ್ರಕ್ರಿಯೆಗಳು ಹಿಂದಿ ಅಥವಾ ಆಂಗ್ಲ ಭಾಷೆಯಲ್ಲಿದ್ದು, ಬೆಳಗಾವಿಯಲ್ಲಿ 2016ರ ಜನವರಿ 26ರಂದು ಈ ಪ್ರಕ್ರಿಯೆಯನ್ನು ಕನ್ನಡ ದಲ್ಲಿ  ಆರಂಭಿಸಲಾಗಿದೆ. ಇದರ ಡಿವಿಡಿ ತಯಾರಿಸಿ ಹಿರಿಯ ಅಧಿಕಾರಿಗಳ ಮಾರ್ಗದರ್ಶನ ಪಡೆದು 2017ರ ನ. 22ರಂದು ಮುಖ್ಯಮಂತ್ರಿಗಳು ಬಿಡುಗಡೆಗೊಳಿಸಿದ್ದಾರೆ. ಇದೀಗ ರಾಜ್ಯಾದ್ಯಂತ ಕವಾಯತು ಆದೇಶಗಳನ್ನು ಕನ್ನಡದಲ್ಲಿ ಆರಂಭಿಸುವ ನಿಟ್ಟಿನಲ್ಲಿ ಸಮಿತಿ ರಚನೆ ಆಗಿದೆ. ಆ ಸಮಿತಿಯಲ್ಲಿ ನಾನೂ ಒಬ್ಬ ಸದಸ್ಯ. ಸಮಿತಿ ಮುಂದಿನ ಸಭೆಯಲ್ಲಿ   ಸೂಕ್ತ ನಿರ್ಧಾರ ಕೈಗೊಂಡು ಶೀಘ್ರದಲ್ಲೇ ರಾಜ್ಯದಲ್ಲಿ ಕನ್ನಡದಲ್ಲಿಯೇ ಕವಾಯತು ಪ್ರಕ್ರಿಯೆ ಆರಂಭವಾಗಲಿದೆ. ದಕ್ಷಿಣ ಕನ್ನಡ ಜಿಲ್ಲೆಯಲ್ಲಿಯೂ ಈ ನಿಟ್ಟಿನಲ್ಲಿ ಕನ್ನಡದಲ್ಲಿ ಕವಾಯತು ಆರಂಭಕ್ಕೆ ಕ್ರಮ ವಹಿಸುತ್ತೇನೆ. ಸುಧಾರಿತ ಗಸ್ತು ವ್ಯವಸ್ಥೆಯನ್ನು ಪ್ರಾಯೋಗಿಕವಾಗಿ ಬೆಳಗಾವಿಯಲ್ಲಿ ಆರಂಭಿಸ ಲಾಗಿದ್ದು, ಇದೀಗ ಕರ್ನಾಟಕದಲ್ಲಿ ಇದನ್ನು ಜಾರಿಗೊಳಿಸಲಾಗಿದೆ.

ಎನ್‌ಕೌಂಟರ್‌ ಸ್ಪೆಷಲಿಸ್ಟ್‌ ಎಂಬ ಹೆಸರು ಹೇಗೆ ಬಂತು?
     ಬೆಂಗಳೂರಿನಲ್ಲಿ ಅಪರಾಧ ವಿಭಾಗದ ಡಿಸಿಪಿ ಆಗಿದ್ದಾಗ ಒಂದು ಎನ್‌ಕೌಂಟರ್‌ ನಡೆದಿತ್ತು. ಹಾಗಾಗಿ ಈ ಹೆಸರು ಬಂದಿರಬಹುದು.

ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶ ಗಳಿಂದಾಗಿ ಉಂಟಾಗುವ ಪರಿಣಾಮಗಳನ್ನು ಎದುರಿಸಲು ಯಾವ ಕ್ರಮ ಅನುಸರಿಸುವಿರಿ?
     ಸಾಮಾಜಿಕ ಜಾಲತಾಣಗಳಲ್ಲಿ ಆರೋಗ್ಯಕರ ಚರ್ಚೆ ಗಳು ನಡೆದರೆ ಅದನ್ನು ಸ್ವಾಗತಿಸ ಲಾಗುವುದು. ಆದರೆ ಸಾಮಾಜಿಕ ವಾತಾವರಣವನ್ನು ಹಿಂಸೆಗೆ ತಿರುಗಿಸಲು ಪ್ರಯತ್ನಿಸುವ, ಕಾನೂನು ಸುವ್ಯವಸ್ಥೆಗೆ ಭಂಗ ತರುವ ರೀತಿಯ ಪ್ರಚೋದನಕಾರಿ ಚರ್ಚೆ, ಪೋಸ್ಟಿಂಗ್‌ಗಳ ವಿರುದ್ಧ ಕಠಿನ ಕ್ರಮಗಳನ್ನು ಕೈಗೊಳ್ಳಲಾಗುವುದು. ಹಾಗಾಗಿ ಯಾವುದೇ ಚರ್ಚೆಗಳು ಅರ್ಥಪೂರ್ಣ ಆಗಿರ ಬೇಕು. ಸಾಮಾಜಿಕ ಜಾಲತಾಣಗಳಲ್ಲಿ ಬರುವ ಸಂದೇಶ ಗಳ ಬಗ್ಗೆ ಗಮನಹರಿಸಲು “ಸೋಶಿಯಲ್‌ ಮೀಡಿಯಾ ಮಾನಿಟರಿಂಗ್‌ ಕಮಿಟಿ’ ಇದೆ. ಆದ್ದ ರಿಂದ ಸಾಮಾಜಿಕ ಜಾಲತಾಣಗಳನ್ನು ನಿಭಾಯಿಸುವವರು ಇದನ್ನು ಗಮನಿಸುವುದು ಅಗತ್ಯ.

ಬಿಇ ಮತ್ತು ಎಂ.ಟೆಕ್‌. ಪದವೀಧರರಾಗಿರುವ ನಿಮಗೆ ಪೊಲೀಸ್‌ ಇಲಾಖೆಯಲ್ಲಿ ಮತ್ತು ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿದ್ದು ಹೇಗೆ? 
     ಬಿಇ ಮತ್ತು ಎಂ.ಟೆಕ್‌. ಪದವಿ ಬಳಿಕ ಲೋಕಸೇವಾ ಆಯೋಗದ ಪರೀಕ್ಷೆ ಬರೆದಿದ್ದು, 6ನೇ ರ್‍ಯಾಂಕ್‌ ಬಂದಿತ್ತು. ಈ ಪರೀಕ್ಷೆ ಪಾಸಾಗಿದ್ದರಿಂದ 1997ರಲ್ಲಿ ಡಿವೈಎಸ್‌ಪಿ ಹುದ್ದೆ ಲಭಿಸಿತ್ತು. ಹಾಗೆ ಪೊಲೀಸ್‌ ಇಲಾಖೆ ಸೇರಿಕೊಂಡೆ. ನನ್ನ ತಂದೆ ಬೆಸಗರಹಳ್ಳಿ ರಾಮಣ್ಣ ಸಾಹಿತಿ. ಅವರ ಮೂಲಕ ಸಾಹಿತ್ಯದಲ್ಲಿ ಆಸಕ್ತಿ ಹುಟ್ಟಿತು. ಅನೇಕ ಕವನ, ಲೇಖನ ಬರೆದಿದ್ದು, “ಕುವೆಂಪು ಸಾಂಸ್ಕೃತಿಕ ವಿದ್ಯಮಾನ: ಒಂದು ಅಧ್ಯಯನ’ ಎಂಬ ಸಂಶೋಧನ ಮಹಾ ಪ್ರಬಂಧಕ್ಕೆ ಹಂಪಿ ಕನ್ನಡ ವಿ.ವಿ. 2015ರಲ್ಲಿ ಡಿ.ಲಿಟ್‌. ಪದವಿ ಪ್ರದಾನ ಮಾಡಿದೆ.

– ಹಿಲರಿ ಕ್ರಾಸ್ತಾ 

Advertisement

Udayavani is now on Telegram. Click here to join our channel and stay updated with the latest news.

Next