Advertisement

26ಕ್ಕೆ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಅಭಿಯಾನ 

07:00 AM Jan 21, 2018 | |

ಬೆಂಗಳೂರು: ಸಂವಿಧಾನ ಬದಲಾಯಿಸುತ್ತೇವೆ ಎಂದು ಹೇಳಿರುವ ಕೇಂದ್ರ ಸಚಿವರ ವಿರುದ್ದ ಜ.26 ರಂದು ಯುವ
ಕಾಂಗ್ರೆಸ್‌ ಘಟಕದ ವತಿಯಿಂದ ಪ್ರತಿ ವಿಧಾನಸಭಾ ಕ್ಷೇತ್ರದಲ್ಲಿ ಸಂವಿಧಾನ ರಕ್ಷಿಸಿ ದೇಶ ಉಳಿಸಿ ಎಂಬ ಅಭಿಯಾನ ನಡೆಸಲು ತೀರ್ಮಾನಿಸಲಾಗಿದೆ.

Advertisement

ಅರಮನೆ ಮೈದಾನದಲ್ಲಿ ಮೂರು ದಿನಗಳಿಂದ ನಡೆದ ಯುವದೃಷ್ಟಿ ಕಾರ್ಯಾಗಾರದ ಕೊನೆಯ ದಿನವಾದ ಶನಿವಾರ ಈ ತೀರ್ಮಾನ ತೆಗೆದುಕೊಳ್ಳಲಾಗಿದೆ. ಸಂವಿಧಾನ ಬದಲಾಯಿಸುವ ನಿರ್ಧಾರ ದೇಶದ ವೈವಿಧ್ಯತೆ ಮತ್ತು ಏಕತೆಗೆ ಧಕ್ಕೆ ತರಲಿದೆ. ಹೀಗಾಗಿ ಜ. 26 ರಂದು ತ್ರಿವರ್ಣ ಧ್ವಜ ಹಿಡಿದು ರಾಜ್ಯದ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಸಂವಿಧಾನ ರಕ್ಷಣಾ ನಡಿಗೆ ಹಮ್ಮಿಕೊಳ್ಳಲಾಗಿದೆ ಎಂದು ಕೆಪಿಸಿಸಿ ಯುವ ಘಟಕದ ಅಧ್ಯಕ್ಷ ಬಸನಗೌಡ ಬಾದರ್ಲಿ ಹೇಳಿದರು. ರಾಜ್ಯದಲ್ಲಿ ಹೆಚ್ಚುತ್ತಿರುವ ಕೋಮುಗಲಭೆ, ಕೊಲೆ ಪ್ರಕರಣಗಳು ಮರುಕಳಿಸದಂತೆ ಯುವ ಜನರಲ್ಲಿ ಜಾಗೃತಿ ಮೂಡಿಸಲಾಗುವುದು.

ಫೆಬ್ರವರಿ ಅಂತ್ಯದಲ್ಲಿ ಎಐಸಿಸಿ ಅಧ್ಯಕ್ಷ ರಾಹುಲ್‌ ಗಾಂಧಿ ನೇತೃತ್ವದಲ್ಲಿ ಬೃಹತ್‌ ಯುವ ಸಮಾವೇಶ ಹಮ್ಮಿಕೊಳ್ಳಲು
ತೀರ್ಮಾನಿಸಲಾಗಿದೆ. ಯುವ ಘಟಕದಿಂದ ಈಗಾಗಲೇ 54 ಸಾವಿರ ಬೂತ್‌ ಕಮಿಟಿ ರಚನೆಯಾಗಿದೆ ಎಂದರು.

ಯುವ ಪ್ರಣಾಳಿಕೆ
ಕೊನೆಯ ದಿನದ ಕಾರ್ಯಾಗಾರದಲ್ಲಿ ಪಾಲ್ಗೊಂಡಿದ್ದ ಕೆಪಿಸಿಸಿ ಕಾರ್ಯಾಧ್ಯಕ್ಷ ದಿನೇಶ್‌ ಗುಂಡೂರಾವ್‌, ಯುವಕರಿಗೆ
ಪ್ರತ್ಯೇಕ ಪ್ರಣಾಳಿಕೆ ಸಿದ್ಧಪಡಿಸುವಂತೆ ಸೂಚಿಸಿದ್ದಾರೆ. ಅವರ ಸೂಚನೆಯಂತೆ ಎಲ್ಲ ವಿಧಾನಸಭಾ ಕ್ಷೇತ್ರಗಳಲ್ಲೂ ಯುವಕರ ಬೇಡಿಕೆಗಳನ್ನು ಆಲಿಸಿ, ಪ್ರಣಾಳಿಕೆ ಸಿದ್ಧಪಡಿಸಲಾಗುವುದು. ಆನ್‌ಲೈನ್‌ ಮೂಲಕವೂ ಪ್ರಣಾಳಿಕೆಗೆ ಯುವಕರ
ಅಭಿಪ್ರಾಯ ಸಂಗ್ರಹಿಸುವ ಕಾರ್ಯ ನಡೆಸಲಾಗುತ್ತಿದೆ ಎಂದು ಹೇಳಿದರು.

Advertisement

Udayavani is now on Telegram. Click here to join our channel and stay updated with the latest news.

Next