Advertisement

ಪ್ರಕೃತಿ ರಕ್ಷಣೆ ಮಾಡಿ: ತಮ್ಮಣ

11:10 AM Aug 05, 2020 | Suhan S |

ಭಾರತೀನಗರ: ಪ್ರಕೃತಿಯನ್ನು ನಾವು ಎಷ್ಟು ಚೆನ್ನಾಗಿ ನೋಡಿಕೊಳ್ಳತ್ತೇವೂ ಅಷ್ಟೇ ಚೆನ್ನಾಗಿ ಪ್ರಕೃತಿಯೂ ನಮ್ಮನ್ನು ಕಾಪಾಡುತ್ತದೆ ಎಂದು ಶಾಸಕ ತಮ್ಮಣ್ಣ ತಿಳಿಸಿದರು.

Advertisement

ಸರ್ಕಾರಿ ಪದವಿ ಪೂರ್ವ ಕಾಲೇಜಿನ ಆವರಣದಲ್ಲಿ ಅರಣ್ಯ ಇಲಾಖೆ, ಜಿಲ್ಲಾಡಳಿತ, ಜಿಪಂ, ಸಾಮಾಜಿಕ ಅರಣ್ಯ ವಿಭಾಗ ಮಂಡ್ಯ ಹಾಗೂ ಮದ್ದೂರು ವಲಯ, ಡಿ.ಸಿ.ತಮ್ಮಣ್ಣ ಸಮಾಜ ಸೇವಾ ಪ್ರತಿಷ್ಠಾನ ಹಾಗೂ ಅನನ್ಯ ಸಾಮಾಜಿಕ ಹಾಗೂ ಸಾಂಸ್ಕೃತಿಕ ಕಲ್ಯಾಣ ಟ್ರಸ್ಟ್‌ ಮಂಡ್ಯ, ಜಾಗೃತಿ ಯುವತಿ ಮತ್ತು ಮಹಿಳಾ ಮಂಡಳಿ ಹಾಗೂ ವಿಶ್ವಜ್ಞಾನಿ ಸೇವಾಟ್ರಸ್ಟ್‌ ಮಂಡ್ಯ ಆಶ್ರಯದಲ್ಲಿ ನಡೆದ ವನಮಹೋತ್ಸವ ಮತ್ತು ಹಸಿರುವ ಕರ್ನಾಟಕ ಯೋಜನೆಯಡಿ ಮನೆಗೊಂದು ಗಿಡ, ಊರಿಗೊಂದು ವನ ಅಭಿಯಾನವನ್ನು ಉದ್ಘಾಟಿಸಿ ಮಾತನಾಡಿ, ಮಾನವನಿಗೆ ಪರಿಸರದ ಮೇಲಿನ ಕಾಳಜಿ ಕಡಿಮೆಯಾಗಿದೆ. ಹೀಗಾಗಿ ಪ್ರಕೃತಿ ಮುನಿಸಿಕೊಂಡಂತೆ ಕಾಣಿಸುತ್ತಿದೆ ಎಂದರು.

ರೈತರಿಗೆ ಸಾವಿರಕ್ಕೂ ಹೆಚ್ಚು ವಿವಿಧ ಗಿಡಗಳನ್ನು ವಿತರಣೆ ಮಾಡಲಾಯಿತು. ಉಪ ಅರಣ್ಯ ಸಂರಕ್ಷಣಾಧಿಕಾರಿ ಟಿ.ವೆಂಕಟೇಶ್‌, ವಲಯ ಅರಣ್ಯಾಧಿಕಾರಿ ಬಿ.ಎ.ಮಹೇಶ್‌, ಸಿದ್ದೇಗೌಡ, ಅನನ್ಯ ಸಾಮಾಜಿಕ ಮತ್ತು ಸಾಸ್ಕೃತಿಕ ಟ್ರಸ್ಟ್‌ ಅನುಪಮ, ವಸಂತ, ಡಿ.ಎ.ಕೆರೆ ಪ್ರದೀಪ್‌ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next