Advertisement

ಮರಳೂರು ಕೆರೆ ಪರಿಸರ ಸಂರಕ್ಷಿಸಿ: ರೇಣುಕಾ

05:06 PM Nov 27, 2020 | Suhan S |

ತುಮಕೂರು: ನಗರದ ಮರಳೂರು ಕೆರೆ ದಂಡೆಯಲ್ಲಿ ಕಸ ಎಸೆಯುವುದು ಕಂಡು ಬಂದರೆ 5 ರಿಂದ 10 ಸಾವಿರ ರೂ.ಗಳ ದಂಡ ವಿಧಿಸಲಾಗುವುದು ಎಂದು ಪಾಲಿಕೆ ಆಯುಕ್ತೆ ರೇಣುಕಾ ಎಚ್ಚರಿಸಿದರು.

Advertisement

ಜಿಲ್ಲಾ ಕಾನೂನು ಸೇವಾ ಪ್ರಾಧಿಕಾರ, ತುಮಕೂರು ಮಹಾನಗರ ಪಾಲಿಕೆ ಹಾಗೂ ಜಿಲ್ಲಾಮಾಲಿನ್ಯ ನಿಯಂತ್ರಣ ಮಂಡಳಿ ಸಹಯೋಗದಲ್ಲಿ ಬುಧವಾರ ಪರಿಸರ ರಕ್ಷಣಾ ದಿನದ ಅಂಗವಾಗಿ ನಗರದ ಮರಳೂರು ಕೆರೆ ದಂಡೆಯಲ್ಲಿರುವ ತ್ಯಾಜ್ಯವನ್ನು ಸ್ವತ್ಛಗೊಳಿಸುವ ಕಾರ್ಯಕ್ರಮದಲ್ಲಿ ಮಾತನಾಡಿ, ಪರಿಸರವನ್ನು ಸ್ವಚ್ಛವಾಗಿಡುವುದು ಪ್ರತಿಯೊಬ್ಬರ ಜವಾಬ್ದಾರಿಯಾಗಿದೆ ಎಂದರು.

ದಂಡ ಹಾಕುವುದು ಖಚಿತ: ಪಾಲಿಕೆ ವ್ಯಾಪ್ತಿಯ35 ವಾರ್ಡುಗಳಲ್ಲಿ ವಾಹನದ ಮೂಲಕ ಕಸಸಂಗ್ರಹಿಸಲಾಗುತ್ತಿದ್ದರೂ ಸಾರ್ವಜನಿಕರು ತ್ಯಾಜ್ಯವನ್ನು ಈ ಕೆರೆ ದಂಡೆಯಲ್ಲಿ ಎಸೆಯುತ್ತಿದ್ದಾರೆ.ಅನೈರ್ಮಲ್ಯದಿಂದ ಕೂಡಿದ್ದ ರಿಂದ ಇಂದು ಈ ಕೆರೆ ದಂಡೆಯನ್ನು ಸ್ವತ್ಛಗೊಳಿಸಲಾಗುತ್ತಿದೆ. ಸ್ವಚ್ಛಗೊಳಿಸಿದ ನಂತರ ಕಸ ಎಸೆಯ ದಂತೆ ನಿಗಾ ಇಡಲು ಮೇಲ್ವಿಚಾರಣೆಗಾಗಿ ಪಾಲಿಕೆ ಯಿಂದ ಸಿಬ್ಬಂದಿ ತಂಡವನ್ನು ನಿಯೋಜಿಸಲಾಗಿದೆ. ಮುಂದಿನ ದಿನಗಳಲ್ಲಿ ಇಲ್ಲಿ ಕಸ ಎಸೆದರೆ ದಂಡ ಹಾಕುವುದು ಖಚಿತ ಎಂದು ತಿಳಿಸಿದರು.

ಪ್ಲಾಸ್ಟಿಕ್‌ ಬಳಕೆ ಬೇಡ: ಪಾಲಿಕೆ ವ್ಯಾಪ್ತಿಯಲ್ಲಿ ಪ್ಲಾಸ್ಟಿಕ್‌ ನಿಷೇಧ ನಿಯಮವನ್ನು ಉಲ್ಲಂಘಿಸಿದವರಿಗೆ ಅನಿರೀಕ್ಷಿತ ದಾಳಿ ನಡೆಸಿ ದಂಡ ಸಂಗ್ರಹಿಸಲಾಗುತ್ತಿದೆ. ನಗರದ ಹೊರ ವಲಯದಲ್ಲಿಯೂ ಪ್ಲಾಸ್ಟಿಕ್‌ ಬಳಕೆ ಕಂಡು ಬರುತ್ತಿರುವುದರಿಂದ ಪೊಲೀಸ್‌ ರಕ್ಷಣೆಯೊಂದಿಗೆ ಪರಿಸರ ನಿಯಂತ್ರಣ ಮಂಡಳಿಯ ಸಹಕಾರದಲ್ಲಿ ದಾಳಿ ನಡೆಸಲಾಗುವುದೆಂದು ಎಚ್ಚರಿಸಿದರು.

ಕೆರೆ ದಂಡೆ ಸ್ವಚ್ಛಕ್ಕೆ ಚಾಲನೆ: ಹಿರಿಯ ಸಿವಿಲ್‌ನ್ಯಾಯಾಧೀಶ ಹಾಗೂ ಜಿಲ್ಲಾ ಕಾನೂನು ಸೇವೆಗಳಪ್ರಾಧಿಕಾರದ ಸದಸ್ಯ ಕಾರ್ಯದರ್ಶಿ ರಾಘವೇಂದ್ರ ಶೆಟ್ಟಿಗಾರ್‌ ಮಾತನಾಡಿ, ಪ್ಲಾಸ್ಟಿಕ್‌ ಮತ್ತಿತರ ತ್ಯಾಜ್ಯ ವಸ್ತುಗಳಿಂದ ಕೂಡಿದ್ದರಿಂದ 2 ಜೆಸಿಬಿ, 3 ಟಿಪ್ಪರ್‌, ಸುಮಾರು 30 ಪೌರ ಕಾರ್ಮಿಕರನ್ನು ಬಳಸಿ ಸುಮಾರು 1 ಕಿ.ಮೀ.ನಷ್ಟು ಮರಳೂರು ಕೆರೆ ದಂಡೆಯನ್ನು ಸ್ವತ್ಛಗೊಳಿಸುವ ಕಾರ್ಯವನ್ನು ಹಮ್ಮಿಕೊಳ್ಳಲಾಗಿದೆ ಎಂದು ತಿಳಿಸಿದರು.

Advertisement

ಪಾಲಿಕೆಯೊಂದಿಗೆ ಸಹಕರಿಸಿ: ಮೇಯರ್‌ಫ‌ರೀದಾ ಬೇಗಂ ಮಾತನಾಡಿ, ನಗರದ ಸ್ವತ್ಛತೆಗಾಗಿಪಾಲಿಕೆಯೊಂದಿಗೆ ಎಲ್ಲಾ ಇಲಾಖೆಗಳು ಹಾಗೂಸಾರ್ವಜನಿಕರು ಸಹಕರಿಸ ಬೇಕು. ಎಲ್ಲದಕ್ಕೂ ಪಾಲಿಕೆಯನ್ನು ದೂರಬಾರದು. ಹಗಲಿರುಳು ಸ್ವಚ್ಛತೆ ಕಾಪಾಡುವುದರೊಂದಿಗೆ ನಗರದ ಅಭಿವೃದ್ಧಿಗಾಗಿ ಪಾಲಿಕೆ ಶ್ರಮಿಸುತ್ತಿದೆ ಎಂದು ತಿಳಿಸಿದರಲ್ಲದೆ ಈಗಾಗಲೇ ರಾತ್ರಿ ವೇಳೆ ಯಲ್ಲಿ ಕಣ್ತಪ್ಪಿಸಿ ಕಸ ಎಸೆಯುವವರ ಮೇಲೆ ನಿಗಾ ಇಡಲುಅಧಿಕಾರಿ, ಸಿಬ್ಬಂದಿ ತಂಡ ರಚಿಸಿ ನಿಯೋಜಿಸಲಾಗಿದೆ. ಕಸ ಎಸೆಯುವುದರಿಂದ ಆಗುವ ದುಷ್ಪರಿಣಾಮಗಳಬಗ್ಗೆಜನರಿಗೆಅರ್ಥಮಾಡಿಸಬೇಕೆನ್ನುವ ನಿಟ್ಟಿನಲ್ಲಿ ಕಸ ಎಸೆದವರ ಮೇಲೆ ಮುಲಾಜಿಲ್ಲದೆ ದಂಡ ವಿಧಿಸಲಾಗುವುದು ಎಂದು ತಿಳಿಸಿದರು.

ಪಾಲಿಕೆ ಸದಸ್ಯ ಧರಣೇಂದ್ರ ಕುಮಾರ್‌ ರಾಜು, ಪಾಲಿಕೆ ಆರೋಗ್ಯಾಧಿಕಾರಿ ಡಾ. ನಾಗೇಶ್‌, ಪರಿಸರ ಮಾಲಿನ್ಯ ನಿಯಂತ್ರಣಾಧಿಕಾರಿ ಇದ್ದರು.

Advertisement

Udayavani is now on Telegram. Click here to join our channel and stay updated with the latest news.

Next