Advertisement

ಗೋವು-ಧರ್ಮ ರಕ್ಷಣೆ ಮಾಡಿ: ಕುಮಾರ್‌

01:52 PM May 12, 2019 | Team Udayavani |

ಪಾವಗಡ: ಗೋವುಗಳನ್ನು ರಕ್ಷಣೆ ಮಾಡಿದರೆ ಧರ್ಮವನ್ನು ಸಂರಕ್ಷಣೆ ಮಾಡಿದಂತೆ. ಗೋವುಗಳ ಬಗ್ಗೆ ವ್ಯತಿರಿಕ್ತ ಹೇಳಿಕೆ ನೀಡುವವರಿಗೆ ಗೋವುಗಳ ಬಗ್ಗೆ ತಿಳಿವಳಿಕೆ ನೀಡಬೇಕಿದೆ ಎಂದು ನಿವೃತ್ತ ನ್ಯಾಯಾಧೀಶ ಎನ್‌.ಕುಮಾರ್‌ ತಿಳಿಸಿದರು.

Advertisement

ಶನಿವಾರ ಪಾವಗಡ ಸ್ವಾಮಿ ವಿವೇಕಾನಂದ ಸಂಘಟಿತ ಗ್ರಾಮಾಂತರ ಅರೋಗ್ಯ ಕೇಂದ್ರದ ಸಭಾಂಗಣದಲ್ಲಿ ನಡೆದ ಕೃತಜ್ಞತಾ ಸಮರ್ಪಣಾ ಸಮಾರಂಭದಲ್ಲಿ ಅಧ್ಯಕ್ಷತೆ ವಹಿಸಿಮಾತನಾಡಿದರು. ಗೋಮಾತೆಗೆ ಸನಾತನ ಕಾಲದಿಂದಲೂ ಅಗ್ರ ಪೂಜೆ ಸ್ಥಾನ ನೀಡಲಾಗಿದ್ದು ಅವುಗಳಿಗೆ ಅವಮಾನ ಮಾಡಿ ದರೆ ಧರ್ಮಕ್ಕೆ ಅವಮಾನ ಮಾಡಿದಂತೆ ಎಂದರು.

ಗಂಜಲ, ಸಗಣಿ ವೈಜ್ಞಾನಿಕವಾಗಿ ಬಳಸಿ: ಗೋಹತ್ಯೆ ಮಹಾಪಾಪ. ಗೋವುಗಳಿಂದ ಬರುವ ಗಂಜಲ, ಸಗಣಿಯನ್ನು ಶುದ್ಧೀಕರಿಸಿ ಅವುಗಳನ್ನು ಔಷಧಿ ಯಾಗಿ ಬಳಸುವ ವೈಜ್ಞಾನಿಕ ವಿಧಾನಗಳನ್ನು ಅಭಿವೃದ್ಧಿಗೊಳಿಸುವುದು ಹೆಚ್ಚು ಸೂಕ್ತ. ಹೀಗೆ ಮಾಡಿದರೆ ಗೋವುಗಳನ್ನು ರಕ್ಷಣೆ ಮಾಡಿದಂತೆ. ಇಂತಹ ಸಂಸ್ಥೆಯನ್ನು ಸ್ಥಾಪಿಸುವಂತೆ ಸ್ವಾಮಿ ಜಪಾನಂದಜೀ ಅವರಲ್ಲಿ ಮನವಿ ಮಾಡಿದರು.

ಶ್ಲಾಘನೀಯ: ಗೋವುಗಳಿಗೆ ಆಹಾರ ಸಿಗದೆ ಸಾವಿರಾರು ರಾಸುಗಳಿಗೆ ಆಹಾರ ನೀಡುವ ಕಾಯಕದಲ್ಲಿ ತೊಡಗಿಸಿಕೊಂಡಿರುವ ಸ್ವಾಮೀಜಿ ಅವರಲ್ಲಿ ನಿಜವಾದ ಮಾನವೀಯತೆ ಕಾಣ ಬಹುದು. ಒಂದು ಸರ್ಕಾರ ಮಾಡಬೇಕಾದ ಕೆಲಸ ಒಬ್ಬ ಸನ್ಯಾಸಿ ಮಾಡುತ್ತಿರುವುದು ಶ್ಲಾಘನೀಯ ಎಂದು ತಿಳಿಸಿದರು.

ಸ್ವಾಮೀಜಿ ಮಾದರಿ: ಸ್ವಾಮೀಜಿ ತಾವು ಮಾಡುವ ಕಾಯಕದಿಂದ ರೈತರಲ್ಲಿ ಇವರ ಬಗ್ಗೆ ಮೂಡಿದ ಅಭಿನಂದನೆ ಇದಾಗಿದೆ ಅದಕ್ಕಾಗಿ ಇಂದು ರೈತರು ತಾವಾಗಿಯೇ ಬಂದು ಅವರಿಗೆ ಕೃತಜ್ಞತೆ ಸಮರ್ಪಿ ಸುತ್ತಿದ್ದಾರೆ. ಇಂತಹ ಕಾರ್ಯ ಸಮಾಜ ಸೇವೆ ಮಾಡುವವರಿಗೆ ಮಾದರಿಯಾಗಲಿದೆ ಎಂದು ಹೇಳಿದರು.

Advertisement

ಇರುವವರೆಗೂ ಸೇವೆ: ಸ್ವಾಮಿ ಜಪಾನಂದಜೀ ಮಾತನಾಡಿ, ತಾನು ಇರುವವರೆಗೂ ಸೇವೆ ಮಾಡುವ ಅವಕಾಶ ನೀಡಲಿ ಎಂದು ದೇವರಲ್ಲಿ ಕೇಳಿಕೊಳ್ಳುತ್ತೇನೆ. ಆಹಾರ ಇಲ್ಲದ ರಾಸುಗಳಿಗೆ ಸೇವೆ ಸಲ್ಲಿಸುವ ಅವಕಾಶ ತನಗೆ ಸಿಕ್ಕಿದ್ದು ದೇವರ ಕೃಪೆ ಎಂದರು. ಹಿರಿಯ ವಕೀಲ ಎಂ.ನಾಗೇಂದ್ರಪ್ಪ ಮಾತನಾಡಿ, ಎಲ್ಲಿ ಅಗತ್ಯವಿದೆಯೋ ಅಲ್ಲೆಲ್ಲಾ ರಾಸುಗಳಿಗೆ ಮೇವು ನೀಡುವ ಕೆಲಸವನ್ನು ಸ್ವಾಮೀಜಿ ಮಾಡುತ್ತಿದ್ದಾರೆ. ಈ ಕಾರ್ಯ ನಿಜಕ್ಕೂ ಮಹತ್ವದ್ದು ಎಂದು ತಿಳಿಸಿದರು.

ಸನ್ಮಾನ: ರೈತ ಸಂಘದ ಅಧ್ಯಕ್ಷ ನರಸಿಂಹರೆಡ್ಡಿ ಮಾತನಾಡಿ, ಪ್ರತಿನಿತ್ಯ ಸಾವಿರಾರು ಕೆ.ಜಿ.ಮೇವನ್ನು ಚಳ್ಳಕೆರೆ, ಹಿರಿಯೂರು, ಪಾವಗಡ ತಾಲೂಕಿನ ರಾಸುಗಳಿಗೆ ನೀಡುತ್ತಿರುವ ಸ್ವಾಮೀಜಿ ಅವರ ಸೇವೆಯನ್ನು ಸ್ಮರಿಸಿದರು. ತಾಲೂಕು ರೈತಸಂಘದ ವತಿಯಿಂದ ಸ್ವಾಮೀಜಿ ಅವರಿಗೆ ಶಾಲು ಹೊಂದಿಸಿ ಸನ್ಮಾನಿಸಲಾಯಿತು.

ಕಾರ್ಯಕ್ರಮದಲ್ಲಿ ಡಾ.ಜಿ.ವೆಂಕಟರಾಮಯ್ಯ, ಪ್ರೇರಣ ತಂಡದ ಮುಖ್ಯಸ್ಥ ಮಹೇಶ್‌, ರೈತ ಸಂಘದ ಕೆಂಚಣ್ಣ, ಅಂಜಯ್ಯ, ನೂರಾರು ರೈತರು, ಆಶ್ರಮದ ಸಿಬ್ಬಂದಿ ಉಪಸ್ಥಿತರಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next