ಕೊಡ್ಲಮೊಗರು ಶ್ರೀ ವಾಣಿವಿಜಯ ವಿದ್ಯಾಲಯದ ಅಧ್ಯಾಪಿಕೆ ಕೃಷ್ಣವೇಣಿ ಬಿ. ಸಂಪನ್ಮೂಲ ವ್ಯಕ್ತಿಯಾಗಿ ಬಾಗವಹಿಸಿ ಮಾತನಾಡಿ, ನಮ್ಮ ಮಕ್ಕಳಲ್ಲಿ ಪ್ರೀತಿಯ ಕೊರತೆ, ಮನೆಯಲ್ಲಿ ಹೆತ್ತವರೊಳಗೆ ಕಲಹ, ಪರಸ್ಪರ ಆತ್ಮವಿಶ್ವಾಸದ ಕೊರತೆ ಇರುವ ಮಕ್ಕಳು ಬೇಗನೆ ಮಾದಕ ವಸ್ತುಗಳ ದಾಸರಾಗುತ್ತಾರೆ. ಅಲ್ಲದೆ ವಿವಿಧ ರೀತಿಯ ಕೆಟ್ಟ ಚಟಗಳಿಗೆ ಬಲಿಯಾಗುತ್ತಾರೆ ಎಂಬುದಾಗಿ ಮಾದಕ ವಸ್ತುಗಳಿಂದ ಉಂಟಾಗುವ ದುಷ್ಪರಿಣಾಮಗಳ ಕುರಿತು ವಿವರವಾಗಿ ವಿವರಿಸಿದರು. ಗ್ರಂಥಾಲಯದ ಅಧ್ಯಕ್ಷ ಉದಯ ಶೆಟ್ಟಿ, ರೂಪಕಲಾ ಕರ್ಷಕ ಸಮಿತಿಯ ಮಾಜಿ ಅಧ್ಯಕ್ಷ ಮೊಹಮ್ಮದ್ ಎಸ್ ಉಪಸ್ಥಿತರಿದ್ದರು. ಗ್ರಂಥಾಲಯದ ಕಾರ್ಯದರ್ಶಿ ಆಶಾ ದಿಲೀಪ್ ಸ್ವಾಗತಿಸಿದರು. ಉಪಾಧ್ಯಕ್ಷ ರವೀಂದ್ರ ಮಾಂಡೇಲು ವಂದಿಸಿದರು. ಸದಸ್ಯೆ ಫೌಝಿಯಾಬಾನು ನಿರೂಪಿಸಿದರು.
Advertisement