ವಿದ್ಯುತ್ ನಿಯಂತ್ರಣ ಆಯೋಗಕ್ಕೆ (ಕೆಇಆರ್‌ಸಿ) ಇತ್ತೀಚೆಗೆ ಪ್ರಸ್ತಾವ ಸಲ್ಲಿಸಿದ್ದು, ಶೀಘ್ರವೇ ದರ ಪರಿಷ್ಕರಣೆ ಮಾಡುವಂತೆ ಮನವಿ ಮಾಡಿವೆ. ಆದರೆ ಕೆಇಆರ್‌ಸಿಯು 90 ದಿನಗಳಲ್ಲಿ ನಿಯಮಾನುಸಾರ ಪ್ರಕ್ರಿಯೆ ಪೂರ್ಣಗೊಳಿಸಿ ಮುಂದಿನ ಏಪ್ರಿಲ್ 1ರಿಂದ ದರ ಪರಿಷ್ಕರಣೆ ಅನುಷ್ಠಾನಗೊಳಿಸಲು ನಿರ್ಧರಿಸಿದೆ. ಪ್ರತಿ ನವೆಂಬರ್‌ನಲ್ಲಿ ಎಲ್ಲ ಎಸ್ಕಾಂಗಳು ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸುತ್ತವೆ. ವಿದ್ಯುತ್ ವಿತರಣೆ ಪ್ರಕ್ರಿಯೆಯಲ್ಲಿನ ವೆಚ್ಚಕ್ಕೆ ಅನುಗುಣವಾಗಿ ಆದಾಯ ಹೊಂದಾಣಿಕೆಗಾಗಿ ದರ ಪರಿಷ್ಕರಣೆಗೆ ಮನವಿ ಸಲ್ಲಿಸುತ್ತವೆ. ಅದರಂತೆ ನ.30ರೊಳಗೆ ಎಲ್ಲ ಎಸ್ಕಾಂಗಳು ಪ್ರಸ್ತಾವ ಸಲ್ಲಿಸಿವೆ.
Advertisement
ಬೆಸ್ಕಾಂ ಪ್ರತಿ ಯೂನಿಟ್‌ಗೆ 1.45 ರೂ., ಸೆಸ್ಕ್ 1.65 ರೂ.,ಮೆಸ್ಕಾಂ 1.08 ರೂ., ಜೆಸ್ಕಾಂ 1.36 ರೂ. ಹಾಗೂ ಹೆಸ್ಕಾಂ 1.23 ರೂ. ದರ ಹೆಚ್ಚಳಕ್ಕೆ ಪ್ರಸ್ತಾವ ಸಲ್ಲಿಸಿವೆ. ಪರಿಷ್ಕೃತ ದರಗಳನ್ನು ಏಪ್ರಿಲ್ 1ಕ್ಕೆ ಬದಲಾಗಿ ಮುಂಚಿತವಾಗಿ ಜಾರಿಗೊಳಿಸಲು ಅವಕಾಶ ನೀಡುವಂತೆಯೂ ಮನವಿ ಮಾಡಿವೆ ಎಂದು ಮೂಲಗಳು ತಿಳಿಸಿವೆ. ಪ್ರತಿ ವರ್ಷದಂತೆ ಈ ಬಾರಿಯೂ ಎಲ್ಲ ಎಸ್ಕಾಂಗಳು ದರ ಪರಿಷ್ಕರಣೆಗೆ ಪ್ರಸ್ತಾವ ಸಲ್ಲಿಸಿವೆ. ದರ ಏರಿಕೆ ಪ್ರಸ್ತಾವ ಹಾಗೂ ಅದಕ್ಕೆ ನೀಡಿರುವ ಕಾರಣಗಳು, ವಸ್ತುಸ್ಥಿತಿಯನ್ನು ಅವಲೋಕಿಸಲಾಗುವುದು.
ಪರಿಷ್ಕರಣೆ ಜಾರಿಗೆ ಕ್ರಮ ಕೈಗೊಳ್ಳಲಾಗುವುದು ಎಂದು ಕೆಇಆರ್‌ಸಿ ಅಧ್ಯಕ್ಷ ಎಂ.ಕೆ.ಶಂಕರಲಿಂಗೇಗೌಡ ತಿಳಿಸಿದರು