Advertisement

ಆಕ್ಸಿಜನ್‌ ಪ್ಲಾಂಟ್‌ಗೆ ಪ್ರಸ್ತಾವನೆ

06:26 PM May 09, 2021 | Team Udayavani |

ಹಾಸನ: ಜಿಲ್ಲಾಧಿಕಾರಿಯವರು ಸ್ಥಳ ಒದಗಿಸಿದರೆ 25ದಿನಗಳೊಳಗೆ 1.25 ಕೋಟಿ ರೂ. ಅಂದಾಜಿನ ಆಕ್ಸಿಜನ್‌ ತಯಾರಿಕೆ ಮತ್ತು ಫಿಲ್ಲಿಂಗ್‌ ಪ್ಲಾಂಟ್‌ ನಿರ್ಮಾಣಮಾಡುವುದಾಗಿ ಲೋಕಸಭಾ ಸದಸ್ಯ ಪ್ರಜ್ವಲ್‌ ರೇವಣ್ಣ ಹೇಳಿದರು.ಸುದ್ದಿಗೋಷ್ಠಿಯಲ್ಲಿ ಮಾತನಾಡಿ, ಹಿಮ್ಸ್‌ ಆಸ ³ತ್ರೆಯಆವರಣದಲ್ಲಿ ಅಥವಾ ಬೇರೆಡೆ 10-15 ಚದುರ ಅಡಿಸ್ಥಳವನ್ನು ಜಿಲ್ಲಾಧಿಕಾರಿಯವರು ನೀಡಿದರೆ ಪ್ರತಿದಿನ 400ರಿಂದ 500 ಜಂಬೋ ಸಿಲಿಂಡರ್‌ ತುಂಬಿಸುವ ಆಕ್ಸಿಜನ್‌ಘಟಕವನ್ನು ನಿರ್ಮಾಣ ಮಾಡಲಾಗುವುದು ಎಂದರು.

Advertisement

ಭಾನುವಾರ ಜಿಲ್ಲಾಧಿಕಾರಿಯವರಿಗೆ ಆಕ್ಸಿಜನ್‌ಘಟಕ ನಿರ್ಮಾಣದ ಪ್ರಸ್ತಾವನೆಯನ್ನು ಸಲ್ಲಿಸಲಾಗುವುದು. ಸೋಮವಾರ ಜಿಲ್ಲಾಧಿಕಾರಿ ಕಚೇರಿಯಸಭಾಂಗಣದಲ್ಲಿ ಅಧಿಕಾರಿಗಳ ಸಭೆಯನ್ನೂ ಕರೆದಿದ್ದು,ಅಷ್ಟರಲ್ಲಿ ಸ್ಥಳ ಗುರ್ತಿಸಿದರೆ ಮಂಗಳವಾರದಿಂದಲೇ ಆಕ್ಸಿಜನ್‌ ಘಟಕ ನಿರ್ಮಾಣ ಆರಂಭಿಸಲಾಗುವುದು.

ಘಟಕ ನಿರ್ಮಾಣಕ್ಕೆ ಸರ್ಕಾರದಿಂದ ಅನುದಾನಕೊಟ್ಟರೆ ಕೊಡಲಿ. ಇಲ್ಲದಿದ್ದರೆ ಶಾಸಕರ ನಿಧಿಯಿಂದಘಟಕ ನಿರ್ಮಾಣಕ್ಕೆ ನಿರ್ಧರಿಸಿದ್ದು, ಜಿಲ್ಲೆಯ ಎಲ್ಲಜೆಡಿಎಸ್‌ ಶಾಸಕರೂ ತಲಾ 25 ಲಕ್ಷ ರೂ.ಗಳನ್ನುಶಾಸಕರ ಕ್ಷೇತ್ರಾಭಿವೃದ್ಧಿ ನಿಧಿಯಿಂದ ನೆರವು ನೀಡಲುಸಮ್ಮತಿಸಿದ್ದಾರೆ ಎಂದರು.ಹಾಸನದ ಕೈಗಾರಿಕಾ ಪ್ರದೇಶದಲ್ಲಿ  ಗ್ಯಾಸ್‌ಏಜನ್ಸಿಯವರು 3.50 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸಿರುವ ಘಟಕದಲ್ಲಿ ಪ್ರತಿದಿನ 480 ಜಂಜೋ ಸಿಲಿಂಡರ್‌ಗಳ ತುಂಬಿಸುವಷ್ಟು ಆಕ್ಸಿಜನ್‌ ಉತ್ಪಾದಿಸುತ್ತಿದ್ದಾರೆ.

ಹೊಸದಾಗಿ ನಿರ್ಮಿಸಲು ಉದ್ಧೇಶಿಸಿರುವ ಘಟಕವನ್ನು1.25 ಕೋಟಿ ರೂ. ವೆಚ್ಚದಲ್ಲಿಯೇ ಟರ್ಕಿಯಿಂದಯಂತ್ರೋಪಕರಣಗಳನ್ನು ತರಿಸಿ ನಿರ್ಮಾಣಮಾಡಲಾಗುವುದು. ಡೀಸಿಯವರು ತಕ್ಷಣ ನಿರ್ಧಾರಕೈಗೊಂಡು ಸ್ಥಳ ನಿಗದಿಪಡಿಸಬೇಕು ಎಂದರು. ಹಿಮ್ಸ್‌ ಆಸ್ಪತ್ರೆ ಆವರಣದಲ್ಲಿ 13, 000 ಲೀ.ಆಕ್ಸಿಜನ್‌ ಸಂಗ್ರಹ ಸಾಮರ್ಥಯದ ಘಟಕವಿದೆ.

ಡಾಬಸ್‌ಪೇಟೆಯಿಂದ ಪ್ರತಿದಿನ 9000 ಲೀ. ಆಕ್ಸಿಜನ್‌ಟ್ಯಾಂಕರ್‌ನಲ್ಲಿ ಬರುತ್ತಿದೆ. ಅದರೆ ಜತೆಗೆ ಸ್ಥಳೀಯವಾಗಿಆಕ್ಸಿಜನ್‌ ಉತ್ಪಾದನೆ ಹಾಗೂ ಫಿಲ್ಲಿಂಗ್‌ ಘಟಕನಿರ್ಮಿಸುವುದರಿಂದ ತಾಲೂಕು ಕೇಂದ್ರದ ಸರ್ಕಾರಿಆಸ್ಪತ್ರೆಗಳಿಗೆ, ಸಮುದಾಯ ಆರೋಗ್ಯ ಕೇಂದ್ರಗಳಿಗೆಹಾಗೂ ಖಾಸಗಿ ಆಸ್ಪತ್ರೆಗಳಿಗೂ ಆಕ್ಸಿಜನ್‌ ಪೂರೈಕೆಮಾಡಬಹುದಾಗಿದೆ ಎಂದರು.

Advertisement

ಸರ್ಕಾರ ಆಕ್ಸಿಜನ್‌ ಬೆಡ್‌ ವ್ಯವಸ್ಥೆ ನಿಲ್ಲಿಸಿದೆ: ಆಕ್ಸಿಜನ್‌ಪೂರೈಕೆ ಮಾಡಲು ಸಾಧ್ಯವಾಗುತ್ತಿಲ್ಲವೆಂದು ಸರ್ಕಾರಆಕ್ಸಿಜನ್‌ ವ್ಯವಸ್ಥೆಯ ಹಾಸಿಗೆಗಳನ್ನು ವಿಸ್ತರಿಸಬಾರದುಎಂದು ಜಿಲ್ಲಾಡಳಿತಕ್ಕೆ ಸೂಚನೆ ನೀಡಿದೆ. ಇದು ವಿಷಾದನೀಯ ಬೆಳವಣಿಗೆ. ಸರ್ಕಾರ ಆಕ್ಸಿಜನ್‌ ಉತ್ಪಾದನೆಗೆಕ್ರಮ ಕೈಗೊಳ್ಳಬೇಕೇ ಹೊರತು ಆಕ್ಸಿಜನ್‌ ವ್ಯವಸ್ಥೆಯಹಾಸಿಗೆಗಳ ಹೆಚ್ಚಳ ಮಾಡದಂತೆ ಸೂಚನೆ ನೀಡಿರುವುದು ಸರಿಯಲ್ಲ ಎಂದು ಆತಂಕ ವ್ಯಕ್ತಪಡಿಸಿದರು.

ಪ್ರಸ್ತುತವಾಗಿ ಜನರು ಭ್ರಮ ನಿರಸಗೊಂಡಿದ್ದಾರೆ. ಕರ್ನಾಟಕ್ಕೆ ಆಕ್ಸಿಜನ್‌ ಕೊಡಬೇಕೆಂದು ಹೈ ಕೋರ್ಟ್‌ಹೇಳಿದರೂ ಅದರ ವಿರುದ್ಧವೇ ಕೇಂದ್ರ ಸರ್ಕಾರಸುಪ್ರೀಂ ಕೋರ್ಟಿಗೆ ಮೇಲ್ಮನವಿ ಸಲ್ಲಿಸುತ್ತದೆ ಎಂದರೆಕರ್ನಾಟಕದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಎಷ್ಟು ಕಾಳಜಿಇದೆ ಎಂಬುದನ್ನು ಜನರು ಅರಿಯಬೇಕು ಎಂದರು.

Advertisement

Udayavani is now on Telegram. Click here to join our channel and stay updated with the latest news.

Next