Advertisement

ಪಿಜಿ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವ

10:32 PM Dec 29, 2021 | Team Udayavani |

ಲಿಂಗಸುಗೂರು: ಪಟ್ಟಣದ ಮಿನಿ ವಿಧಾನಸೌಧದ ಪಕ್ಕದಲ್ಲಿ 6 ಎಕರೆ ಜಾಗದಲ್ಲಿ ಸ್ನಾತಕೋತ್ತರ ಕೇಂದ್ರ ಸ್ಥಾಪನೆಗೆ ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ ಎಂದು ಶಾಸಕ ಡಿ.ಎಸ್‌. ಹೂಲಗೇರಿ ಹೇಳಿದರು. ಪಟ್ಟಣದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಸರ್ಕಾರ, ರೋಟರಿ ಕ್ಲಬ್‌ ಹಾಗೂ ಕಾಂಗಿನಿಜೆಂಟ್‌ ಕಂಪನಿ ಸಹಯೋಗದಲ್ಲಿ ಕಾಲೇಜಿಗೆ 50 ಕಂಪ್ಯೂಟರ್‌ ಹಸ್ತಾಂತರ ಕಾರ್ಯಕ್ರಮದಲ್ಲಿ ಅವರು ಮಾತನಾಡಿದರು.

Advertisement

ಮಿನಿ ವಿಧಾನಸೌಧದ ಪಕ್ಕದಲ್ಲಿ 6 ಎಕರೆ ಜಾಗದಲ್ಲಿ ಕೋರ್ಟ್‌ ನಿರ್ಮಾಣಕ್ಕೆ ಈ ಹಿಂದೆ ಚಿಂತಿಸಲಾಗಿದೆ. ಆದರೆ ಕೋರ್ಟ್‌ಗೆ ಬೇರೆಡೆ ನಿವೇಶನ ಒದಗಿಸಲಾಗಿದೆ. ಈಗಿರುವ 6 ಎಕರೆ ಜಾಗದಲ್ಲಿ ಪಿಜಿ ಸ್ಥಾಪಿಸಲು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಸಲಾಗಿದೆ. ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ 2 ಸಾವಿರ ಮಕ್ಕಳು ಓದುತ್ತಿದ್ದು ಕೊರತೆ ಇರುವ ಸೌಲಭ್ಯ ಒದಗಿಸಲಾಗಿದೆ. ಜಿಲ್ಲೆಯಲ್ಲೇ ಮಾದರಿ ಸರ್ಕಾರಿ ಪದವಿ ಕಾಲೇಜು ಮಾಡುವ ಆಸೆಯಿಂದಾಗಿ ಇದರ ಅಭಿವೃದ್ಧಿಗೆ ಪ್ರಯತ್ನಿಸುತ್ತಿದ್ದೇನೆ ಎಂದರು.

ಹಟ್ಟಿ ಚಿನ್ನದ ಗಣಿ ಅಧ್ಯಕ್ಷ ಮಾನಪ್ಪ ವಜ್ಜಲ್‌ ಸಮಾರಂಭ ಉದ್ಘಾಟಿಸಿ, ಬಡ ವಿದ್ಯಾರ್ಥಿಗಳು ಶಿಕ್ಷಣದಿಂದ ವಂಚಿತರಾಗಬಾರದು. ಸರ್ಕಾರ ಶಿಕ್ಷಣಕ್ಕಾಗಿ ಅನೇಕ ಯೋಜನೆ ಜಾರಿಗೊಳಿಸಿದ್ದು, ಅವುಗಳನ್ನು ಪಡೆದು ಶಿಕ್ಷಣವಂತರಾಗಬೇಕು ಎಂದರು. ಈ ವೇಳೆ ರೋಟರಿ ಕ್ಲಬ್‌ನ ನಿಜಾನಂದರೆಡ್ಡಿ, ಎಸ್‌ .ಬಿ. ಪಾಟೀಲ್‌, ಮಂಜುನಾಥ ಗಣೇಕಲ್‌, ಲಕೀÒ$¾ಕಾಂತರೆಡ್ಡಿ, ಕಾಲೇಜು ಪ್ರಾಚಾರ್ಯ ಡಾ| ಮಹಾಂತಗೌಡ ಪಾಟೀಲ್‌ ಸೇರಿದಂತೆ ಇತರರಿದ್ದರು.

 

Advertisement

Udayavani is now on Telegram. Click here to join our channel and stay updated with the latest news.

Next