Advertisement

ಕೋವಿಡ್ ಕಾಲದಲ್ಲೂ ಮೂಡಿ ಬರುತ್ತಿದೆ ಭರವಸೆಯ ಬೆಳಕು; ಆಸ್ತಿ ನೋಂದಣಿ ಚೇತರಿಕೆ

01:06 AM Sep 05, 2020 | mahesh |

ಬೆಂಗಳೂರು: ಕೋವಿಡ್ ಹಿನ್ನೆಲೆಯಲ್ಲಿ ಕುಂಠಿತಗೊಂಡಿದ್ದ ಮುದ್ರಾಂಕ ಮತ್ತು ನೋಂದಣಿ ಶುಲ್ಕ ಮೂಲದ ಆದಾಯ ಕ್ರಮೇಣ ಚೇತರಿಕೆ ಕಾಣುತ್ತಿದೆ. ಈ ವರ್ಷದ ಆಗಸ್ಟ್‌ನಲ್ಲಿ 946.33 ಕೋಟಿ ರೂ. ಆದಾಯ ಸಂಗ್ರಹ ವಾಗಿದ್ದು, ಕಳೆದ ವರ್ಷದ ಆಗಸ್ಟ್‌ಗೆ ಹೋಲಿಸಿದರೆ 6 ಕೋಟಿ ರೂ. ಹೆಚ್ಚು ವರಿ ಆದಾಯ ಸಂಗ್ರಹವಾಗಿರುವುದು ವಿಶೇಷ!

Advertisement

ಲಾಕ್‌ಡೌನ್‌ ಹಿನ್ನೆಲೆಯಲ್ಲಿ ಕಳೆದ ಎಪ್ರಿಲ್‌ನಲ್ಲಿ 23 ದಿನ ಆಸ್ತಿ ನೋಂದಣಿ ಸ್ಥಗಿತವಾಗಿತ್ತು. ಎ. 24ರಿಂದ ನೋಂದಣಿ ಪ್ರಕ್ರಿಯೆ ಆರಂಭವಾಗಿತ್ತು. ಹಾಗಾಗಿ ಎಪ್ರಿಲ್‌ನಲ್ಲಿ ಕೇವಲ 29.81 ಕೋ. ರೂ. ಆದಾಯ ಬಂದಿತ್ತು. 2019-20ರ ಎಪ್ರಿಲ್‌ನಲ್ಲಿ 679.89 ಕೋಟಿ ರೂ. ಆದಾಯ ಸಂಗ್ರಹವಾಗಿತ್ತು.

ಆಗಸ್ಟ್‌ನಲ್ಲಿ ಉತ್ತಮ
ಮೇಯಲ್ಲಿ 358.95 ಕೋಟಿ ರೂ. ಆದಾಯ ಸಂಗ್ರಹವಾಗಿದ್ದು, 2019ರ ಮೇ ಆದಾಯಕ್ಕೆ ಹೋಲಿಸಿದರೆ ಒಂದೇ ತಿಂಗಳಲ್ಲಿ 700 ಕೋ. ರೂ. ಇಳಿಕೆಯಾಗಿದೆ. ಜೂನ್‌ ನಲ್ಲಿ 780 ಕೋ.ರೂ. ಸಂಗ್ರಹವಾಗಿದೆ. ಜುಲೈ ಯಲ್ಲೂ 705 ಕೋಟಿ ರೂ. ಆದಾಯ ಬಂದಿದೆ. ಕಳೆದ ಆಗಸ್ಟ್‌ನಲ್ಲಿ ಸುಮಾರು 1.80 ಲಕ್ಷ ಆಸ್ತಿಗಳ ನೋಂದಣಿಯಾಗಿದ್ದು, 946.25 ಕೋಟಿ ರೂ. ಆದಾಯ ಸಂಗ್ರಹವಾಗಿದೆ. ಇದು 2019ರ ಆಗಸ್ಟ್‌ ತಿಂಗಳ ಆದಾಯಕ್ಕಿಂತ 6 ಕೋಟಿ ರೂ. ಹೆಚ್ಚಾಗಿದೆ.

ಹಿಂದಿನ ವರ್ಷಕ್ಕೆ ಹೋಲಿಸಿದರೆ ಕಳೆದ ಐದು ತಿಂಗಳಲ್ಲಿ ಶೇ. 40ರಷ್ಟು ಆದಾಯ ಇಳಿಕೆಯಾಗಿದೆ. ಮುಂದಿನ ದಿನಗಳಲ್ಲಿ ಆಸ್ತಿ ನೋಂದಣಿ ಪ್ರಕ್ರಿಯೆ ಹೆಚ್ಚಾಗಿ ವಾರ್ಷಿಕ ಗುರಿ ತಲುಪುವ ವಿಶ್ವಾಸವಿದ್ದು, ಅದಕ್ಕೆ ಪೂರಕವಾಗಿ ಎಲ್ಲ ರೀತಿಯ ಪ್ರಯತ್ನ ನಡೆಸಲಾಗುವುದು.
– ಕೆ.ಪಿ. ಮೋಹನ್‌ರಾಜ್‌, ನೋಂದಣಿ ಮಹಾಪರಿವೀಕ್ಷಕರು, ಮುದ್ರಾಂಕ ಆಯುಕ್ತ

ಎಂ. ಕೀರ್ತಿಪ್ರಸಾದ್‌

Advertisement

 

Advertisement

Udayavani is now on Telegram. Click here to join our channel and stay updated with the latest news.

Next