Advertisement
ಈ ಕುರಿತಂತೆ ಭೂಮಾಪನ, ಭೂದಾಖಲೆಗಳು ಹಾಗೂ ಸೆಟ್ಲಮೆಂಟ್ ಇಲಾಖಾ ಆಯುಕ್ತ ಮನೀಶ್ ಮುದ್ಗೀಲ್ ಶನಿವಾರ ಮಂಗಳೂರಿಗೆ ಆಗಮಿಸಿ ಪರಿಶೀಲನೆ ನಡೆಸಿ ಇಲಾಖಾ ಅಧಿಕಾರಿಗಳ ಜತೆ ಸಭೆ ನಡೆಸಿದ್ದಾರೆ. ಮಂಗಳೂರು ನಗರ ವ್ಯಾಪ್ತಿಯೊಳಗೆ ಆಸ್ತಿ ನೋಂದಣಿಗೆ ಪ್ರಾಪರ್ಟಿಕಾರ್ಡ್ ಕಡ್ಡಾಯವನ್ನು ಜೂ. 10ರ ವರೆಗೆ ಮುಂದೂಡಿ ಮೇ 25ರಂದು ಆದೇಶ ಹೊರಡಿಸಲಾಗಿತ್ತು.
Related Articles
Advertisement
ಮೂರು ಉಪನೋಂದಣಿ ಕಚೇರಿಗಳಲ್ಲಿ ಜಾರಿ
ಸರಕಾರದ ಆದೇಶದಂತೆ ಜೂ. 10ರ ಬಳಿಕ ಮಂಗಳೂರು ನಗರ, ಗ್ರಾಮಾಂತರ, ಮೂಲ್ಕಿ ಉಪನೋಂದಣಿ ಕಚೇರಿಗಳಲ್ಲಿ ಆಸ್ತಿ ಮಾರಾಟ ಮತ್ತು ನೋಂದಣಿಗೆ ಪ್ರಾಪರ್ಟಿಕಾರ್ಡ್ ಕಡ್ಡಾಯವಾಗಲಿದೆ. ಈ ನಿಟ್ಟಿನಲ್ಲಿ ಭೂಮಾಪನ, ಭೂದಾಖಲೆಗಳು, ಸೆಟ್ಲಮೆಂಟ್ ಇಲಾಖೆ ಎಲ್ಲ ಸಿದ್ಧತೆಗಳನ್ನು ಮಾಡಿದೆ.
ಉಪನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಲಿಂಕ್ ಮಾಡುವ ಕಾರ್ಯವೂ ನಡೆದಿದೆ. ಅಸ್ತಿ ನೋಂದಣಿ ಕಚೇರಿಗಳ ಸರ್ವರ್‌ಗಳಿಗೆ ಪ್ರಾಪರ್ಟಿ ಕಾರ್ಡ್ ಸರ್ವರ್ ಜೋಡಣೆಯಾದ ಬಳಿಕ ಮಾರಾಟ /ಖರೀದಿ ಜಾಗದ ಪ್ರಾಪರ್ಟಿಕಾರ್ಡ್ ನಂಬರ್‌ನ್ನು ನೋಂದಣಿ ಕಚೇರಿಯ ಸರ್ವರ್‌ನಲ್ಲಿ ನಮೂದಿಸಿದರೆ ಅದಕ್ಕೆ ಸಂಬಂಧಪಟ್ಟ ಎಲ್ಲ ದಾಖಲೆಗಳು, ವಿವರಗಳು ಲಭ್ಯವಾಗಲಿದ್ದು, ನೋಂದಣಿ ಪ್ರಕ್ರಿಯೆಯಲ್ಲಿ ಸುಗಮವಾಗಲಿದೆ.
ಪ್ರಾಪರ್ಟಿ ಕಾರ್ಡ್ ವಿತರಣೆಯ ಅವ್ಯವಸ್ಥೆಯನ್ನು ಖಂಡಿಸಿ ಶಾಸಕ ಡಿ. ವೇದವ್ಯಾಸ ಕಾಮತ್ ನೇತೃತ್ವದಲ್ಲಿ ಜೂ. 10ರಂದು ಬೆಳಗ್ಗೆ 11 ಗಂಟೆಗೆ ನಗರದ ಸಮೀಪವಿರುವ ಮಿನಿ ವಿಧಾನಸೌಧದ ಆವರಣದಲ್ಲಿರುವ ಪ್ರಾಪರ್ಟಿ ಕಾರ್ಡ್ ವಿತರಣೆ ಕೇಂದ್ರದ ಎದುರು ಪ್ರತಿಭಟನೆ ನಡೆಯಲಿದೆ. ಪಾಪರ್ಟಿ ಕಾರ್ಡ್ ಅನುಷ್ಠಾನಗೊಳಿಸಿದ ಸರಕಾರ ಅದರ ವಿತರಣೆಗೆ ಸರಕಾರಿ ಕಚೇರಿಗಳಲ್ಲಿ ಯಾವುದೇ ಸೌಲಭ್ಯ ಕಲ್ಪಿಸದೆ ನಾಗರಿಕರನ್ನು ಸತಾಯಿಸಲಾಗುತ್ತ್ತಿದೆ. ಆದ್ದರಿಂದ ಈ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಶಾಸಕರು ತಿಳಿಸಿದ್ದಾರೆ.