Advertisement
ದ.ಕ. ಜಿಲ್ಲಾ ಕಾಂಗ್ರೆಸ್ ಕಚೇರಿಯಲ್ಲಿ ಶುಕ್ರವಾರ ಪತ್ರಿಕಾಗೋಷ್ಠಿ ಯಲ್ಲಿ ಮಾತನಾಡಿ, ಸದ್ಯ ಕೋವಿಡ್ ಕಾರಣಕ್ಕಾಗಿ ಚುನಾವಣೆ ಮುಂದೂಡುವುದು ಅನಿವಾರ್ಯ ಎಂಬುದು ನಿಜ. ಆದರೆ ಇದನ್ನು ನೆಪವಾಗಿಸಿ ನಾಮಕರಣ ವ್ಯವಸ್ಥೆಯನ್ನು ಜಾರಿಗೆ ತರುವುದಕ್ಕೆ ಅವಕಾಶ ನೀಡುವುದಿಲ್ಲ. ಒಂದು ವೇಳೆ ನಾಮಕರಣ ಮಾಡಲು ಮುಂದಾದರೆ ನಿರಂತರ ಚಳವಳಿ ನಡೆಸುವುದಾಗಿ ಎಚ್ಚರಿಸಿದರು. .ಗಳಿಗೆ ನಾಮಕರಣ ಮಾಡುವುದರಿಂದ ಪಂ.ರಾಜ್ ವ್ಯವಸ್ಥೆ ದುರ್ಬಲ ವಾಗಲಿದೆ. ಸರಕಾರ ಪಂ. ಆಡಳಿತ ವ್ಯವಸ್ಥೆಯನ್ನು ಹಾಳುಗೆಡವಲು ಹೊರಟಿದೆ ಎಂದವರು ದೂರಿದರು. ಪಂ. ಆಡಳಿತವನ್ನು ದುರ್ಬಲಗೊಳಿಸುವ ಕಾರ್ಯಕ್ಕೆ ಬಿಜೆಪಿ ಚಾಲನೆ ನೀಡಿದೆ. ಆದರೆ ಪಂ.ರಾಜ್ ವ್ಯವಸ್ಥೆಗೆ ಬಲ ನೀಡಿರುವುದು ಕಾಂಗ್ರೆಸ್ ಎಂದವರು ಹೇಳಿದರು.
ಕಾಂಗ್ರೆಸ್ ನಾಯಕಿ ಸೋನಿಯಾ ಗಾಂಧಿ ವಿರುದ್ಧ ಆಗಿರುವ ಎಫ್ಐಆರ್ ಅನ್ನು ಹಿಂಪಡೆಯಬಾರದು ಎಂಬ ಸಂಸದ ನಳಿನ್ ಹೇಳಿಕೆ ಬಗ್ಗೆ ಸುದ್ದಿಗಾರರ ಪ್ರಶ್ನೆಗೆ ಉತ್ತರಿಸಿದ ರಮಾನಾಥ ರೈ, ನಳಿನ್ ತಿಳುವಳಿಕೆಯಿಲ್ಲದೆ ಮಾತನಾಡುತ್ತಾರೆ. ನಳಿನ್ ಕುಮಾರ್ ಮೇಲೆಯೂ ಸಾವಿರಾರು ಎಫ್ಐಆರ್ ದಾಖಲಿಸಬಹುದು ಎಂದರು.