Advertisement
ಬುಧವಾರ ಬೆಳಗ್ಗೆ ಕ್ಷೇತ್ರಾಧಿಪತಿ ಶ್ರೀ ಹುಚ್ಚರಾಯಸ್ವಾಮಿ ಸನ್ನಿಧಿಗೆ ಕುಟುಂಬ ಸಮೇತರಾಗಿ ಆಗಮಿಸಿ ವಿಶೇಷ ಪೂಜೆ ಸಲ್ಲಿಸಿ ನಂತರ ಪರ್ಜನ್ಯ ಹೋಮದ ಸಂಕಲ್ಪದ ಕಾರ್ಯಕ್ರಮದಲ್ಲಿ ಭಾಗವಹಿಸಿದರು. ತಾಲೂಕಿನಿಂದ ಹಾಗೂ ಬೇರೆ ಜೆಲ್ಲೆಗಳಿಂದ ಶುಭಾಷಯ ಕೋರಲು ಆಗಮಿಸಿದ ತಮ್ಮಅಭಿಮಾನಿಗಳೊಂದಿಗೆ ಮಾತನಾಡಿದ ಅವರು, ನಮ್ಮ ರಾಜ್ಯದಲ್ಲಿ ಭೀಕರವಾದ ಬರಗಾಲವು ತಾಂಡವವಾಡುತ್ತಿದ್ದು ರೈತರು, ಶ್ರೀಸಾಮಾನ್ಯರು ಸಂಕಷ್ಟದಲ್ಲಿರುವ ಈ ಸಂದರ್ಭದಲ್ಲಿ ಮಳೆಗಾಗಿ ಪ್ರಾರ್ಥನೆ ಮಾಡಿ ಪರ್ಜನ್ಯ ಹೋಮ ನಡೆಸುತ್ತಿದ್ದೇನೆ. ಅಲ್ಲದೆ ತಾಲೂಕಿನ ವಿವಿಧ ದೇವಸ್ಥಾನಗಳಲ್ಲಿ ಪೂಜೆ- ಪುನಸ್ಕಾರಗಳು ನಡೆಯುತ್ತಿವೆ. ದೇವರ ದಯೆಯಿಂದ ನಾಡಿನಲ್ಲಿ ಮಳೆ ಬೆಳೆ ಸಮೃದ್ಧಿಯಾಗಬೇಕು. ಅಲ್ಲದೇ ರೈತರ ಬದುಕು ಹಸನಾಗಬೇಕು ಎಂದರು.
ಇಲಾಖೆಗಳು ಸಕಾರಾತ್ಮಕವಾಗಿ ಸ್ಪಂದಿಸಬೇಕು ಎಂದರು ಅರ್ಚಕರಾದ ಉಮೇಶ್ ಭಟ್, ಗಣಪತಿ ಭಟ್, ಪ್ರದೀಪ್ ಕುಲಕರ್ಣಿ, ಪ್ರಸನ್ನ ಭಟ್, ಶಿವಮೊಗ್ಗ ಹರೀಶ್ ಜೊಯ್ಸ ಅವರ ನೇತೃತ್ವದಲ್ಲಿ ಪರ್ಜನ್ಯ ಹೋಮ ಹಾಗೂ ಪೂಜಾ ಕಾರ್ಯಕ್ರಮಗಳು ನಡೆದವು. ರಾಘವೇಂದ್ರ ಅವರ ಪತ್ನಿ ತೇಜಸ್ವಿನಿ ರಾಘವೇಂದ್ರ, ಸಹೋದರಿರಾದ ಪದ್ಮಾವತಿ, ಅರುಣಾದೇವಿ, ಉಮಾದೇವಿ, ಸಹೋದರ ಬಿ.ವೈ. ವಿಜೇಂದ್ರ, ಜಿಲ್ಲಾ ಜಾಗೃತಿ ಸಮಿತಿಯ ಕೆ.ಎಸ್. ಗುರುಮೂರ್ತಿ, ಎಂ.ಬಿ. ಚನ್ನವೀರಪ್ಪ, ಪುರಸಭೆ ಅಧ್ಯಕ್ಷೆ ರತ್ನಮ್ಮ, ಮಾಜಿ ಅಧ್ಯಕ್ಷೆ ರೂಪಕಲಾ ಹೆಗಡೆ ಇದ್ದರು.