ಬೆಂಗಳೂರು: ಲೋಕಸಭಾ ಚುನಾವಣೆಗೂ ಮುನ್ನವೇ ಭಡ್ತಿ ಮೀಸಲು ಪ್ರಕರಣಕ್ಕೆ ಅಂತ್ಯ ಕಾಣಿಸಲು ನಿರ್ಧರಿಸಿರುವ ಸಮ್ಮಿಶ್ರ ಸರಕಾರ, ಹಿಂಭಡ್ತಿ ಹೊಂದಿದ್ದ ಎಸ್ಸಿ -ಎಸ್ಟಿ ನೌಕರರಿಗೆ ಮುಂಭಡ್ತಿ ನೀಡಿ ಆದೇಶ ಹೊರಡಿಸಿದೆ. ಅಲ್ಲದೆ ಈ ಆದೇಶ ಸುಪ್ರೀಂ ಕೋರ್ಟ್‌ನಲ್ಲಿ ಬಿ.ಕೆ. ಪವಿತ್ರ ಪ್ರಕರಣಕ್ಕೆ ಸಂಬಂಧಿಸಿದಂತೆ ನಡೆಯುತ್ತಿರುವ ವಿಚಾರಣೆಯ ಅಂತಿಮ ತೀರ್ಪಿಗೆ ಒಳಪಟ್ಟಿದೆ ಎಂದು ರಾಜ್ಯ ಸರಕಾರ ಆದೇಶದಲ್ಲಿ ತಿಳಿಸಿದೆ.
ಹಿಂಭಡ್ತಿಗೊಳಗಾಗಿರುವ ಅಧಿಕಾರಿಗಳು ಅದ ಕ್ಕಿಂತ ಹಿಂದೆ ಅಧಿಕಾರದಲ್ಲಿದ್ದ ಹುದ್ದೆಗೆ ಮರು
ನಿಯುಕ್ತಿ ಗೊಳ್ಳಲು ಅವಕಾಶ ಕಲ್ಪಿಸಲಾಗಿದೆ. ಒಂದು ವೇಳೆ ಆ ವೃಂದದಲ್ಲಿ ಹುದ್ದೆಗಳು ಖಾಲಿ ಇಲ್ಲ ದಿದ್ದಲ್ಲಿ ಅವರಿಗೆ ಸ್ಥಳ ನಿಯುಕ್ತಿಗೊಳಿಸಲು ಅಗತ್ಯ ಹುದ್ದೆ ಗಳನ್ನು ಸೃಜಿಸಲು ಆದೇಶದಲ್ಲಿ ಸೂಚಿಸಲಾಗಿದೆ. ಅಲ್ಲದೆ, ಪ್ರಸ್ತುತ ಭಡ್ತಿ ಹೊಂದಿರುವ ಅಹಿಂಸಾ ವರ್ಗದ ಅಧಿಕಾರಿಗಳನ್ನೂ ಹಿಂಭಡ್ತಿಗೊಳಿಸದಂತೆ ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ಎಸ್ಸಿ, ಎಸ್ಟಿ ನೌಕರರು ಹಿಂಭಡ್ತಿ ಹೊಂದುವ ಪೂರ್ವದಲ್ಲಿ ಹೊಂದಿದ್ದ ಹುದ್ದೆಯ ವೇತನ ಹಾಗೂ ಸೌಲಭ್ಯಗಳನ್ನು ನೀಡುವುದು. ಅವರು ಹಿಂಭಡ್ತಿ ಹೊಂದುವ ಪೂರ್ವದಲ್ಲಿ ಹೊಂದಿದ್ದ ಹುದ್ದೆ ಖಾಲಿ ಇಲ್ಲದಿದ್ದರೆ, ಆರ್ಥಿಕ ಇಲಾಖೆ ಅನುಮತಿ ನೀಡಿದೆ ಎಂದು ಭಾವಿಸಿ ಡಿಪಿಎಆರ್ ಸೂಪರ್ ನ್ಯೂಮರರಿ ಹುದ್ದೆ ಗಳನ್ನು ಸೃಷ್ಟಿಸಿ ಸ್ಥಳ ನಿಯುಕ್ತಿಗೊಳಿಸಲು ಸೂಚಿಸ ಲಾಗಿದೆ.
ನೇಮಕಾತಿ ಇಲಾಖೆಗೆ ಜವಾಬ್ದಾರಿ
ಈಗಾಗಲೇ ಮಂಜೂರಾಗಿರುವ ಹುದ್ದೆಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವವರು ಮತ್ತು ಸೂಪರ್ ನ್ಯೂಮರರಿ ಹುದ್ದೆಗಳ ಸೃಜನೆ ಮೂಲಕ ಭಡ್ತಿ ಪಡೆದ ಅಧಿಕಾರಿ ಮತ್ತು ನೌಕರರಿಗೆ ಕಾರ್ಯದ ಮರು ಹಂಚಿಕೆ ಮಾಡುವ ಜವಾಬ್ದಾರಿಯನ್ನು ನೇಮಕಾತಿ ಹಾಗೂ ಇಲಾಖೆ ಮುಖ್ಯಸ್ಥರು ಮಾಡುವಂತೆ ಸೂಚಿಸಲಾಗಿದ್ದು, ಈ ವ್ಯವಸ್ಥೆಯು ಸೂಪರ್ ನ್ಯೂಮರರಿ ಹುದ್ದೆಗಳನ್ನು ರದ್ದು ಮಾಡುವವರೆಗೆ ಮಾತ್ರ ಜಾರಿಯಲ್ಲಿರುತ್ತದೆ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ.
ರಾಜ್ಯ ಸರಕಾರ ಈಗ ಮಾಡಿರುವ ಆದೇಶ ಸುಪ್ರೀಂ ಕೋರ್ಟ್‌ನ ನಿರ್ದೇಶನದ ವಿರುದ್ಧ ಇದೆ. ಈ ಬಗ್ಗೆ ನಮ್ಮ ಪರ ವಾದ ಮಾಡುತ್ತಿರುವ ನ್ಯಾಯವಾದಿಗಳ ಜತೆಗೆ ಚರ್ಚಿಸಿ, ಗುರುವಾರ ಸುಪ್ರೀಂ ಕೊರ್ಟ್ ಮುಂದೆ ಅರ್ಜಿ ಸಲ್ಲಿಸುತ್ತೇವೆ. ಹೊಸ ಕಾಯ್ದೆ ಜಾರಿ ಮಾಡಿದರೆ ಸೂಪರ್ ನ್ಯೂಮರರಿ ಹುದ್ದೆ ಸೃಷ್ಟಿಸಲು ಬರುವುದಿಲ್ಲ. ರಾಜ್ಯ ಸರಕಾರ ಗೊಂದಲ ಸೃಷ್ಟಿಸುವ ಪ್ರಯತ್ನ ಮಾಡುತ್ತಿದೆ.
– ಎಂ. ನಾಗರಾಜ್, ಅಹಿಂಸಾ ಸಂಘಟನೆ ಅಧ್ಯಕ್ಷ