ಚಾಮರಾಜನಗರ: ಜಿಲ್ಲೆಯಲ್ಲಿ ಸಾಕಷ್ಟು ಪ್ರವಾಸಿ ತಾಣಗಳಿದ್ದು ಇವುಗಳ ಬಗ್ಗೆ ವ್ಯಾಪಕವಾಗಿ ಮಾಹಿತಿ ನೀಡಿ ಪ್ರವಾಸೋದ್ಯಮ ವನ್ನು ಅಭಿವೃದ್ಧಿಗೊಳಿಸಲು ಉತ್ತೇಜಿಸಲಾಗುವುದು ಎಂದು ಜಿಲ್ಲಾ ಉಸ್ತುವಾರಿ ಸಚಿವ ಎಸ್.ಸುರೇಶ್‌ಕುಮಾರ್ ತಿಳಿಸಿದರು.
ನಗರದಜೆ.ಎಚ್.ಪಟೇಲ್ ಸಭಾಂಗಣದಲ್ಲಿ ಜಿಲ್ಲಾಡಳಿತಹಾಗೂಪ್ರವಾಸೋದ್ಯಮಇಲಾಖೆ ವತಿಯಿಂದ ಭಾನುವಾರ ಆಯೋಜಿಸಿದ್ದ ವಿಶ್ವ ಪ್ರವಾಸೋದ್ಯಮ ದಿನಾಚರಣೆ ಉದ್ಘಾಟಿಸಿ ಮಾತನಾಡಿದರು.
ಪ್ರೇಕ್ಷಣೀಯ ಸ್ಥಳ: ಜಿಲ್ಲೆಯಲ್ಲಿ ಶೇ.48ರಷ್ಟು ಅರಣ್ಯ ಪ್ರದೇಶವಿದ್ದು, ರಮಣೀಯ ಜಲಪಾತಗಳು ಹಾಗೂ ಜಲಾಶಯಗಳಿವೆ. ಮಲೆ ಮಹದೇಶ್ವರ, ಸಿದ್ಧಪ್ಪಾಜಿ ಸೇರಿದಂತೆ ಹಲವಾರು ಪವಾಡ ಪುರುಷರ ಧಾರ್ಮಿಕ ಸ್ಥಳಗಳಿವೆ. ಪುರಾತನ ದೇವಾಲಯಗಲಿವೆ. ಇವುಗಳ ಬಗ್ಗೆ ಪ್ರಚಾರ ಮಾಡಿ ಮತ್ತಷ್ಟು ಪ್ರವಾಸಿಗರನ್ನುಕರೆತರಬೇಕಿದೆ ಎಂದರು. ಜಿಲ್ಲೆಯ ಪ್ರವಾಸೋದ್ಯಮ ಅಭಿವೃದ್ಧಿ ಸಂಬಂಧ ಇಲಾಖೆಯ ಉನ್ನತ ಅಧಿಕಾರಿಗಳ
ಜೊತೆ ಮಾತನಾಡಿದ್ದೇನೆ. ಕೋವಿಡ್ ದಿಂದ ಪ್ರವಾಸೋದ್ಯಮಸೇರಿದಂತೆಒಟ್ಟಾರೆಆರ್ಥಿಕತೆ ಮೇಲೆಹೊಡೆತಬಿದ್ದಿದೆ.ಇಂತಹಸಂದರ್ಭದಲ್ಲಿ ಪ್ರವಾಸೋದ್ಯಮ ಉತ್ತೇಜಿಸಲು ಪ್ರವಾಸೋದ್ಯಮ ದಿನಾಚರಣೆ ಅಗತ್ಯವಿದೆ ಎಂದರು. ಧಾರ್ಮಿಕ ಪ್ರವಾಸೋದ್ಯಮ ಈ ಹಿಂದಿನಿಂದಲೂ ಇದೆ. ನಮ್ಮಲ್ಲಿ ಕೃಷಿ, ಪಾರಂಪರಿಕ, ಸಾಹಸ ಪ್ರವಾಸೋದ್ಯಮ ಆರಂಭವಾಗಿದೆ. ಇದರ ಪರಿಣಾಮ ಬಹಳಷ್ಟು ಜನರಲ್ಲಿ ಆಸಕ್ತಿ ಮೂಡಿದೆ. ನಮ್ಮಲ್ಲಿರುವ ಹಲವು ಪ್ರವಾಸಿ ತಾಣಗಳನ್ನು ನಾವು ಪ್ರಚುರಗೊಳಿಸಬೇಕಿದೆ ಎಂದು ಸಚಿವರು ಸಲಹೆ ಮಾಡಿದರು.
ಉದ್ಯೋಗ ಸೃಷ್ಟಿ: ಜಿಲ್ಲಾ ಪ್ರವಾಸಿ ತಾಣಗಳ ಕೈಪಿಡಿಯನ್ನು ಬಿಡುಗಡೆ ಮಾಡಿ ಮಾತನಾಡಿದ ಶಾಸಕ ಸಿ.ಪುಟ್ಟರಂಗಶೆಟ್ಟಿ, ಜಿಲ್ಲೆಯಲ್ಲಿ ಹಲವು ಪ್ರವಾಸಿ ತಾಣಗಳಿದ್ದರೂ ನಿರೀಕ್ಷಿತವಾಗಿ ಕ್ಷೇತ್ರಗಳು ಅಭಿವೃದ್ಧಿ ಹೊಂದಬೇಕಿದೆ. ಪ್ರವಾಸಿ ತಾಣಗಳಿಗೆ ಮೂಲ ಸೌಕರ್ಯ ಕಲ್ಪಿಸಿದರೆ ಸಾಕಷ್ಟು ಉದ್ಯೋಗ ಸೃಷ್ಟಿಯಾಗಲಿದೆ. ಈ ನಿಟ್ಟಿನಲ್ಲಿ ಸಚಿವರು ಗಮನ ನೀಡಬೇಕು ಎಂದು ಕೋರಿದರು.
ಸಾಧನೆ ಕೈಪಿಡಿ: ಇದೇ ವೇಳೆ ಎಸ್.ಸುರೇಶ್ ಕುಮಾರ್ ಜಿಲ್ಲಾ ಉಸ್ತುವಾರಿ ಸಚಿವರಾಗಿ ಒಂದು ವರ್ಷ ಪೂರೈಸುತ್ತಿರುವ ಹಿನ್ನೆಲೆಯಲ್ಲಿ ಜಿಲ್ಲೆಯಲ್ಲಿ ಕೈಗೊಂಡಿರುವ ಅಭಿವೃದ್ಧಿಕೆಲಸಗಳ ಕುರಿತು ಮಾಹಿತಿಯುಳ್ಳ ನಮ್ಮ ಚಾಮ ರಾಜನಗರ-ಉಸ್ತುವಾರಿಯ ಜವಾಬ್ದಾರಿ ವರುಷದ ವರದಿ ಎಂಬ ಕೈಪಿಡಿಯನ್ನು ಇದೇ ಸಂದರ್ಭದಲ್ಲಿ ಬಿಡುಗಡೆ ಮಾಡಲಾಯಿತು.
ನಗರಾಭಿವೃದ್ಧಿ ಪ್ರಾಧಿಕಾರದ ಅಧ್ಯಕ್ಷ ಶಾಂತಮೂರ್ತಿಕುಲಗಾಣ, ತಾಪಂಉಪಾಧ್ಯಕ್ಷ ಕೆ.ರವೀಶ್, ಜಿಪಂ ಸದಸ್ಯರಾದ ಸಿ.ಎನ್ .ಬಾಲರಾಜು, ಕೆರೆಹಳ್ಳಿ ನವೀನ್, ಜಿಪಂ ಸಿಇಒ ಅಧಿಕಾರಿ ಹರ್ಷಲ್ ಬೋಯಲ್ ನಾರಾಯಣ್ ರಾವ್, ಹೆಚ್ಚುವರಿ ಜಿಲ್ಲಾಧಿಕಾರಿ ಸಿ.ಎಲ್.ಆನಂದ್, ಹೆಚ್ಚುವರಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅನಿತಾ ಹದ್ದಣ್ಣನವರ್, ಉಪ ವಿಭಾಗಾಧಿಕಾರಿ ಡಾ. ಗಿರೀಶ್ ದಿಲೀಪ್ ಬೋಡ್ಲೆ, ಪ್ರವಾಸೋದ್ಯಮ ಇಲಾಖೆಯ ಪ್ರಭಾರ ಸಹಾಯಕ ನಿರ್ದೇಶಕ ಕೆ.ಎಚ್. ಗಿರೀಶ್ ಇತರರಿದ್ದರು