Advertisement
ಕರ್ನಾಟಕದಲ್ಲೂ ಸೀ ವೀಡ್ ಕೃಷಿಗೆ ಉತ್ತೇಜನ ನೀಡಲು ಕ್ರಮ ವಹಿಸಲಾಗುವುದು ಎಂದು ಕೇಂದ್ರ ಮೀನುಗಾರಿಕೆ, ಪಶುಸಂಗೋಪನೆ, ಹೈನುಗಾರಿಕೆ, ವಾರ್ತಾ ಮತ್ತು ಪ್ರಸಾರ ಇಲಾಖೆ ರಾಜ್ಯ ಸಚಿವ ಡಾ|ಎಲ್ ಮುರುಗನ್ ಹೇಳಿದರು.
ಕಡಲ ಪಾಚಿಯನ್ನು (ಸೀ ವೀಡ್) ಔಷಧ, ಪೌಷ್ಟಿಕ ಆಹಾರ, ಗೊಬ್ಬರವಾಗಿ ಬಳಕೆ ಮಾಡಲಾಗುತ್ತಿದ್ದು, ದೇಶ ವಿದೇಶಗಳಲ್ಲಿ ಅಪಾರ ಬೇಡಿಕೆಯಿದೆ. ಈ ಕೃಷಿ ಮುಖ್ಯವಾಗಿ ಮೀನುಗಾರ ಮಹಿಳೆಯರಿಗೆ ಉದ್ಯೋಗ ನೀಡುವುದಲ್ಲದೆ, ಆರ್ಥಿಕ ಸಶಕ್ತೀಕರಣಕ್ಕೂ ಕಾರಣ ವಾಗಲಿದೆ. ಈ ಹಿನ್ನೆಲೆಯಲ್ಲಿ ಕೇಂದ್ರವು ಸೀ ವೀಡ್ ಎಕನಾಮಿಕ್ ಪಾರ್ಕ್ ಸ್ಥಾಪಿಸಲು ಉದ್ದೇಶಿಸಿದೆ ಎಂದರು.
Related Articles
Advertisement
ಇದನ್ನೂ ಓದಿ:ದೇಗುಲಗಳ ಮೇಲೆ ದಾಳಿ, ಹತ್ಯೆ ಖಂಡಿಸಿ ಬಾಂಗ್ಲಾ ಹಿಂದೂಗಳಿಂದ ದೇಶವ್ಯಾಪಿ ನಿರಶನ
ಕೋವಿಡ್ ಇದ್ದರೂ ಮೀನು ಹಾಗೂ ಅದರ ಉತ್ಪನ್ನಗಳ ರಫ್ತು ಪ್ರಮಾಣ ಏರಿಕೆಯಾಗಿದೆ. ಒಳನಾಡು ಮೀನುಗಾರಿಕೆಯಲ್ಲೂ ಸಾಕಷ್ಟು ಅಭಿವೃದ್ಧಿಯಾಗಿದೆ. ಮೀನು ಕೃಷಿಯಿಂದ ತೊಡಗಿ ರಫ್ತು ಮಾಡುವವರೆಗೂ ವಿವಿಧ ರೀತಿಯ ಘಟಕಗಳ ಸ್ಥಾಪನೆಗೆ ಶೇ.40ರಿಂದ 60ರ ವರೆಗೆ ಸಬ್ಸಿಡಿ ನೀಡಲಾಗುತ್ತಿದೆ ಎಂದರು.
ಸಚಿವ ಎಸ್.ಅಂಗಾರ, ಶಾಸಕ ಡಾ| ವೈ.ಭರತ್ ಶೆಟ್ಟಿ, ಮೀನುಗಾರಿಕಾ ಅಭಿವೃದ್ಧಿ ನಿಗಮ ಅಧ್ಯಕ್ಷ ನಿತಿನ್ ಕುಮಾರ್, ದ.ಕ.-ಉಡುಪಿ ಜಿಲ್ಲಾ ಸಹಕಾರಿ ಮೀನು ಮಾರಾಟ ಫೆಡರೇಶನ್ ಅಧ್ಯಕ್ಷ ಯಶ್‌ಪಾಲ್ ಸುವರ್ಣ, ಮೀನುಗಾರಿಕಾ ಇಲಾಖೆ ನಿರ್ದೇಶಕ ರಾಮಾಚಾರ್ಯ, ಜಿಲ್ಲಾ ಉಪನಿರ್ದೇಶಕ (ಪ್ರಭಾರ) ಹರೀಶ್ ಕುಮಾರ್, ಕಾರ್ಪೋರೇಟರ್ ಕಿರಣ್ ಕುಮಾರ್, ಸುಮಿತ್ರಾ ಕರಿಯಾ ಉಪಸ್ಥಿತರಿದ್ದರು.
ಮೀನು ರಫ್ತಿಗೆ ಆದ್ಯತೆ: ಸಚಿವ ಅಂಗಾರಸಚಿವ ಎಸ್. ಅಂಗಾರ ಮಾತನಾಡಿ, ರಾಜ್ಯದಲ್ಲಿ ಸೀ ವೀಡ್ ಕೃಷಿಗೆ ಸಂಬಂಧಿಸಿ ಉತ್ತರ ಕನ್ನಡ ಜಿಲ್ಲೆಯಲ್ಲಿ 8 ಸ್ಥಳಗಳನ್ನು ಗುರುತಿಸಲಾಗಿದೆ. ಕರಾವಳಿಯಲ್ಲಿ ಸಿಗುವ ಮಡೆಂಜಿ, ಮುಗುಡು ಮೀನನ್ನು ರಫ್ತು ಮಾಡುವ ಚಿಂತನೆ ನಡೆಸಲಾಗಿದ್ದು, ಇದರಿಂದ ಬೇಡಿಕೆ ಜತೆಗೆ ಮೀನುಗಾರರಿಗೆ ಉತ್ತಮ ಬೆಲೆಯೂ ಸಿಗುವ ಸಾಧ್ಯತೆಯಿದೆ. ಮೂಡು ಬಿದಿರೆಯ ನಿಡ್ಡೋಡಿಯಲ್ಲಿ ಸೀ ಫುಡ್‌ಪಾರ್ಕ್ ಕುರಿತಂತೆ ಸಾರ್ವಜನಿಕರಲ್ಲಿ ಇರುವ ಗೊಂದಲ ಪರಿಹರಿಸಿ ಯೋಜನೆ ಮುಂದುವರಿಸಲು ಉದ್ದೇಶಿಸಲಾಗಿದೆ ಎಂದರು.