Advertisement

ಅಕ್ಯೂಮಾಸ್‌ನಿಂದ “ದೆ ದೇ ಪ್ಯಾರ್‌ ದೇ’ಚಿತ್ರ ಪ್ರಚಾರ

01:23 AM May 25, 2019 | Lakshmi GovindaRaj |

ಬೆಂಗಳೂರು: ಬಾಲಿವುಡ್‌ ನಟ ಅಜಯ್‌ ದೇವಗನ್‌, ನಟಿ ಟಬು ಮತ್ತು ರಾಕುಲ್‌ ಪ್ರೀತ್‌ ಅಭಿನಯದ ಹೊಸ ಹಿಂದಿ ಚಿತ್ರ ‘ದೆ ದೇ ಪ್ಯಾರ್‌ ದೇ’ ಹಾಗೂ ‘ಅಕ್ಯೂಮಾಸ್‌’ ಆಯುರ್ವೇದಿಕ್‌ ಗ್ರಾನುಯೆಲ್ಸ್‌ ತಯಾರಕ ಕಂಪನಿ ದಿವಿಸಾ ಹರ್ಬಲ್‌ ಕೇರ್‌ ನಡುವೆ ಪ್ರಚಾರ ಒಪ್ಪಂದವೇರ್ಪಟ್ಟಿದೆ.

Advertisement

ಚಿತ್ರದುದ್ದಕ್ಕೂ ಮೈನವಿರೇಳಿಸುವ ಹಾಸ್ಯವುಳ್ಳ ಚಿತ್ರ ನಿರ್ದೇಶಿಸಿರುವ ಅಕಿವ್‌ ಅಲಿ ಹಾಗೂ ದಿವಿಸಾ ಕಂಪನಿ ಪ್ರತಿನಿಧಿ ದೆಹಲಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಪ್ರಚಾರ ಒಡಂಬಡಿಕೆಗೆ ಸಹಿ ಹಾಕಿದ್ದಾರೆ. ನಂತರ ಮಾತನಾಡಿದ ಅವರು ಅಕ್ಯೂಮಾಸ್‌ ಆಯುರ್ವೇದಿಕ್‌ ಗ್ರಾನುಯೆಲ್ಸ್‌ ದೇಹದ ದುರ್ಬಲತೆಯನ್ನು ಕಡಿಮೆ ಮಾಡಿ ತೂಕ ಹೆಚ್ಚಿಸುವಲ್ಲಿ ಸಹಾಯ ಮಾಡಲಿದೆ. ಕೇವಲ ತೂಕ ಹೆಚ್ಚಿಸುವುದು ಮಾತ್ರವಲ್ಲ ಸ್ವಶಕ್ತಿಯನ್ನು ಹೆಚ್ಚಿಸಿ ದೇಹಕ್ಕೆ ಚೇತನ ತರಲಿದೆ.

18 ಗಿಡಮೂಲಿಕೆಗಳಿಂದ ತಯಾರಿಸಲ್ಪಟ್ಟಿರುವ ಅಕ್ಯೂಮಾಸ್‌ ಆಯುರ್ವೇದಿಕ್‌ ವೈದ್ಯಕೀಯ ಸಂಸ್ಥೆಯಿಂದ ಪ್ರಮಾಣೀಕರಿಸಲ್ಪಟ್ಟಿದ್ದು, ಸಂಶಯವಿಲ್ಲದೆ ಯಾವುದೇ ವಯಸ್ಸಿನವರು ಕೂಡ ಸೇವಿಸಬಹುದಾಗಿದೆ ಎಂದರು. ಕಾರ್ಯಕ್ರಮದಲ್ಲಿ ಎಸ್‌ಬಿಎಸ್‌ ಬಯೋಟೆಕ್‌ (ಘಟಕ-2) ಪ್ರತಿನಿಧಿಗಳು ಭಾಗವಹಿಸಿ ಚಿತ್ರ ತಂಡಕ್ಕೆ ಶುಭ ಕೋರಿದರು.

Advertisement

Udayavani is now on Telegram. Click here to join our channel and stay updated with the latest news.

Next