ವಿಜಯಪುರ: ಸರ್ಕಾರ ತಹಶೀಲ್ದಾರ್ ಹುದ್ದೆಗೆ ಅನ್ಯ ಇಲಾಖೆಗಳ ಅ ಧಿಕಾರಿಗಳನ್ನು ನೇಮಿಸುತ್ತಿದ್ದು, ಕಂದಾಯ ಮೂಲ ಇಲಾಖೆಯ ಕೆಳ ಹಂತದ ಅಧಿ ಕಾರಿಗಳಿಗೆ ಮುಂಬಡ್ತಿ ನೀಡಿ ತಹಶೀಲ್ದಾರ್ ಹುದ್ದೆಗೆ ನಿಯೋಜಿಸಬೇಕು ಎಂದು ಆಗ್ರಹಿಸಿ ಕಂದಾಯ ಇಲಾಖೆ ನೌಕರರು ಜಿಲ್ಲಾ ಧಿಕಾರಿಗೆ ಮನವಿ ಸಲ್ಲಿಸಿದರು.
ಗುರುವಾರ ಕಂದಾಯ ದಿನಾಚರಣೆ ಅಂಗವಾಗಿ ಜಿಲ್ಲಾ ಧಿಕಾರಿ ಕಚೇರಿಗೆ ತೆರಳಿ ಮನವಿ ಸಲ್ಲಿಸಿದ ಕಂದಾಯ ಇಲಾಖೆಯ ತಹಶೀಲ್ದಾರ್ ಹುದ್ದೆ ತಾಲೂಕು ಮ್ಯಾಜಿಸ್ಟಿÅಯಲ್ ಅಧಿ ಕಾರ ಹೊಂದಿರುವ ಹುದ್ದೆಯಾಗಿದ್ದು, ಅತ್ಯಂತ ಜವಾಬ್ದಾರಿ ಸ್ಥಾನ ಹೊಂದಿದೆ. 634 ತಹಶೀಲ ಹುದ್ದೆಗಳಿದ್ದು, ಶೇ.50 ರಷ್ಟು ಮುಂಬಡ್ತಿ ಹುದ್ದೆ, ಶೇ.50 ರಷ್ಟು ನೇರ ನೇಮಕಾತಿ ಹುದ್ದೆಗಳಿವೆ. ಆದರೆ ಸರ್ಕಾರ ಬೇರೆ ಇಲಾಖೆಯಿಂದ ತಹಶೀಲ್ದಾರ್ ಹುದ್ದೆಗೆ ನೇಮಕಾತಿ ಮಾಡಲಾಗುತ್ತಿದೆ.
ಸರ್ಕಾರದ ಈ ಕ್ರಮದಿಂದ ಕಂದಾಯ ಮೂಲ ಇಲಾಖೆಯ ನೌಕರರಿಗೆ ಅನ್ಯಾಯವಾಗುತ್ತದೆ ಎಂದು ಆಕ್ಷೇಪಿಸಿದರು. ಕಂದಾಯ ಇಲಾಖೆಯ ಮೂಲ ನೌಕರರಾದ ಗ್ರಾಮಲೆಕ್ಕಾ ಧಿಕಾರಿ, ಪ್ರಥಮ-ದ್ವಿತೀಯ ದರ್ಜೆ ಸಹಾಯಕರು, ರಾಜಸ್ವ ನಿರೀಕ್ಷಕರು, ಶಿರಸ್ತೇದಾರರು ಹಾಗೂ ಉಪ ತಹಶೀಲ್ದಾರ್ ಸೇರಿದಂತೆ ಕಂದಾಯ ಮೂಲ ಇಲಾಖೆಯಲ್ಲೇ ಸಾವಿರಾರು ಸಂಖ್ಯೆಯ ಸಿಬ್ಬಂದಿಯಿದ್ದಾರೆ. 35 ವರ್ಷ ಸೇವೆ ಸಲ್ಲಿಸಿದ್ದರೂ ಸಹ ಮುಂಬಡ್ತಿಯಿಂದ ವಂಚಿತರಾಗಿರುತ್ತಾರೆ.
ಆದ್ದರಿಂದ ತಹಶೀಲ್ದಾರ್ ಹುದ್ದೆಗೆ ಅನ್ಯ ಇಲಾಖೆಯಿಂದ ಬಂದ ನೌಕರರನ್ನು ಅವರ ಮಾತೃ ಇಲಾಖೆಗೆ ಬಿಡುಗಡೆ ಮಾಡಬೇಕು. ತಕ್ಷಣವೇ ಕಂದಾಯ ಮೂಲ ಇಲಾಖೆ ನೌಕರರಿಗೆ ಮುಂಬಡ್ತಿ ನೀಡಿ ತಹಶೀಲ್ದಾರ್ ಹುದ್ದೆಗೆ ನೇಮಿಸಬೇಕು ಎಂದು ಜಿಲ್ಲಾ ಧಿಕಾರಿ ಸುನಿಲಕುಮಾರ ಅವರಿಗೆ ಮನವಿ ಸಲ್ಲಿಸಿದರು.
ಅಪರ ಜಿಲ್ಲಾ ಧಿಕಾರಿ ರಮೇಶ ಕಳಸದ, ವಿಜಯಪುರ ಉಪ ವಿಭಾಗಾಧಿ ಕಾರಿ ಬಲರಾಮ ಲಮಾಣಿ, ಸಿದ್ರಾಯ ಭೋಸಗಿ ತಹಶೀಲ್ದಾರ್, ಬಬಲೇಶ್ವರ ಶಿರಸ್ತೇದಾರ, ಕಂದಾಯ ಇಲಾಖಾ ನೌಕರರ ಸಂಘದ ಅಧ್ಯಕ್ಷ ಜಿ.ಎಸ್.ರಾಜಾಪುರ, ನಾಗಠಾಣಾ ಉಪ ತಹಶೀಲ್ದಾರ್ ಜಿ.ಪಿ.ಡೋಬಳೆ, ಗ್ರಾಮಲೆಕ್ಕಾ ಧಿಕಾರಿಗಳ ಸಂಘದ ಅಧ್ಯಕ್ಷ ಆರ್.ಬಿ.ಬಡಿಗೇರ, ಜಿಲ್ಲಾ ಧಿಕಾರಿ ಕಚೇರಿ ಶಿರಸ್ತೇದಾರ ಎಸ್.ಎಸ್.ತೇರದಾಳ, ಶಿರಸ್ತೇದಾರ ಆರ್.ಎಸ್.ಹಾದಿಮನಿ, ಕಂದಾಯ ನಿರೀಕ್ಷಕ ವಿಲಾಸ ಪವಾರ, ವಿಜಯಕುಮಾರ ಗುಮಶೆಟ್ಟಿ ಸೇರಿದಂತೆ ಹಾಜರಿದ್ದರು.