Advertisement
ತಾಲೂಕು ಪಂಚಾಯ್ತಿ ಕೃಷ್ಣರಾಜೇಂದ್ರ ಸಭಾಂಗಣದಲ್ಲಿ ಗುರುವಾರ ನಡೆದ ಗ್ರಾಮೀಣ ದಸರಾ ಉಪ ಸಮಿತಿ ಸಭೆಯಲ್ಲಿ ಅವರು ಮಾತನಾಡಿದರು. ಗ್ರಾಮೀಣ ದಸರಾ ಕ್ರೀಡಾಕೂಟದಲ್ಲಿ 25 ವರ್ಷ ಮೇಲ್ಪಟ್ಟ ಪುರುಷರಿಗೆ ಕೆಸರು ಗದ್ದೆ ಓಟ, ಗೋಣಿಚೀಲದ ಒಳಗೆ ಕಾಲಿಟ್ಟು ಓಡುವುದು, ಗೊಬ್ಬರದ ಮೂಟೆ ಹೊತ್ತು ಓಡುವ ಸ್ಪರ್ಧೆ, ಮೂರು ಕಾಲಿನ ಓಟ ಮತ್ತು ಗುಂಡು ಎತ್ತುವ ಸ್ಪರ್ಧೆ ಆಯೋಜಿಸಲಾಗಿದೆ.
Related Articles
Advertisement
7 ಲಕ್ಷ ರೂ.ಬಿಡುಗಡೆ: ದಸರಾ ಆಚರಣೆಗಾಗಿ ಪ್ರತಿ ಜಿಲ್ಲಾ ಪಂಚಾಯ್ತಿ ವ್ಯಾಪ್ತಿಗೆ ಒಂದು ಲಕ್ಷ ರೂ. ಮತ್ತು ಪುರಸಭೆಗೆ ಒಂದು ಲಕ್ಷ ಸೇರಿದಂತೆ ಕೆ.ಆರ್.ನಗರ ತಾಲೂಕಿಗೆ 7 ಲಕ್ಷ ರೂ. ಬಿಡುಗಡೆ ಮಾಡಲಾಗಿದೆ ಎಂದು ಮಾಹಿತಿ ನೀಡಿದ ಅಧ್ಯಕ್ಷರು, ಇಂದಿನ ಸಭೆಗೆ ಹಾಜರಾಗದವರ ವಿರುದ್ಧ ಜಿಲ್ಲಾಧಿಕಾರಿಗೆ ದೂರು ನೀಡಲಾಗುತ್ತದೆ ಎಂದು ತಿಳಿಸಿದರು.
30ರಂದು ಗ್ರಾಮೀಣ ದಸರಾ: ತಾಲೂಕು ಕೇಂದ್ರದಲ್ಲಿ ಸೆ.30ರಂದು ಸೋಮವಾರ ಗ್ರಾಮೀಣ ದಸರಾ ನಡೆಯಲಿದ್ದು ಕಾರ್ಯಕ್ರಮಕ್ಕೂ ಮೊದಲು ಪಟ್ಟಣದ ಹೊರ ವಲಯದಲ್ಲಿರುವ ತೋಪಮ್ಮನವರ ದೇವಾಲಯದ ಬಳಿಯಿಂದ ನಾಡದೇವತೆ ಚಾಮುಂಡೇಶ್ವರಿ ಮೆರವಣಿಗೆ ನಡೆಸಲಿದೆ. ಈ ಸಂಧರ್ಭದಲ್ಲಿ 5 ಕಲಾ ತಂಡಗಳು, 5 ಸ್ತಬ್ಧಚಿತ್ರಗಳು ಮತ್ತು ಪೂರ್ಣಕುಂಭದೊಂದಿಗೆ ಬಯಲು ರಂಗ ಮಂದಿರವರೆಗೆ ಮೆರವಣಿಗೆ ನಡೆಸಿ ನಂತರ 11 ಗಂಟೆಗೆ ವೇದಿಕೆ ಕಾರ್ಯ ಕ್ರಮ ನಡೆಸಲಾಗುತ್ತದೆ ಎಂದು ಅವರು ಪ್ರಕಟಿಸಿದರು.
ಮನೆಹಬ್ಬದಂತೆ ಆಚರಿಸಿ: ಸಮಿತಿಯ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್ ಮಾತ ನಾಡಿ, ದಸರಾ ಕಾರ್ಯಕ್ರಮದಲ್ಲಿ ಪ್ರತಿಯೊಬ್ಬರೂ ಅರ್ಪಣಾ ಮನೋಭಾವದಿಂದ ಪಾಲ್ಗೊಂಡು ಯಾವುದೇ ಸಮಸ್ಯೆಗಳಿದ್ದಲ್ಲಿ ನಮ್ಮ ಗಮನಕ್ಕೆ ತರಬೇಕು. ನಮ್ಮ ಮನೆಯ ಹಬ್ಬದಂತೆ ನಾಡ ಹಬ್ಬವನ್ನು ಆಚರಿಸೋಣ ಎಂದು ಹೇಳಿದರು.
ಸಮಿತಿಯ ಉಪಾಧ್ಯಕ್ಷ ಹೊಸಹಳ್ಳಿ ವೆಂಕಟೇಶ್, ಉಪ ತಹಸೀಲ್ದಾರ್ ಎಂ.ಎಸ್. ಯದುಗಿರೀಶ್, ಬಿಜೆಪಿ ಮುಖಂಡರಾದ ಕುಪ್ಪೆಪ್ರಕಾಶ್, ಕಗ್ಗುಂಡಿಕುಮಾರ್, ಮಾರ್ಕಂಡೇಯಸ್ವಾಮಿ ಸೇರಿದಂತೆ ತಾಲೂಕು ಮಟ್ಟದ ಅಧಿಕಾರಿಗಳು ಹಾಜರಿದ್ದರು.