ಪಿರಿಯಾಪಟ್ಟಣ: ಆದಿವಾಸಿ ಸಮುದಾಯದ ಯುವಕರ ಕ್ರೀಡಾ ಚಟುವಟಿಕೆಯನ್ನು ಪ್ರೋತ್ಸಾಹಿಸುವ ಉದ್ದೇಶದಿಂದ ಗ್ರಾಮೀಣ ವಾಲಿಬಾಲ್ ಪಂದ್ಯಾವಳಿ ಹಮ್ಮಿಕೊಳ್ಳಲಾಗಿದೆ ಎಂದು ಆದಿವಾಸಿ ಮುಖಂಡ ಮಧು ಕುಮಾರ್ ತಿಳಿಸಿದರು.
ತಾಲೂಕಿನ ರಾಜೀವ್ ಗ್ರಾಮದಲ್ಲಿ ಮಹಾಗಣಪತಿ ಶ್ರೀ ವೀರಾಂಜನೇಯ ಸ್ವಾಮಿ 7 ನೇ ವರ್ಷದ ಜಯಂತೋತ್ಸವದ ಅಂಗವಾಗಿ ಹಮ್ಮಿಕೊಳ್ಳಲಾಗಿದ್ದ ವಾಲಿಬಾಲ್ ಪಂದ್ಯಾವಳಿಯನ್ನು ಉದ್ಘಾಟಿಸಿ ಮಾತನಾಡಿದರು.
ಮೈಸೂರು ಮತ್ತು ಕೊಡಗು ಜಿಲ್ಲೆಗಳ ಆದಿವಾಸಿ ಜೇನುಕುರುಬ ಸಮುದಾಯದ ಯುವಕರಿಗಾಗಿ ನಡೆದ ಈ ಪಂದ್ಯಾವಳಿಯಲ್ಲಿ 23 ತಂಡ ಭಾಗವಹಿಸಿದ್ದು ಸೆಮಿ ಪೈನಲ್ ಹಂತದಲ್ಲಿ ಪಂದ್ಯಗಳು ಮುನ್ನಡೆಯುತ್ತಿದೆ. ಪೈನಲ್ ಪಂದ್ಯದಲ್ಲಿ ವಿಜೇತರಾದವರಿಗೆ ಮಹಾಗಣಪತಿ ಶ್ರೀ ವೀರಾಂಜನೇಯ ಸ್ವಾಮಿ ಜಯಂತೋತ್ಸವದ ಉತ್ಸವದ ದಿನದಂದು ಬಹುಮಾನ ವಿತರಿಸಲಗುವುದು. ಅದೇ ರೀತಿ ಆದಿವಾಸಿ ಯುವಕರು ವಾಲಿಬಾಲ್ ಸೇರಿದಂತೆ ಇತರ ಕ್ರೀಡೆ ಗಳಲ್ಲಿ ಉತ್ತಮ ಆಟಗಾರರಿದ್ದು ಇವರನ್ನು ಸರಕಾರ ಪ್ರೋತ್ಸಾಹಿಸ ಬೇಕು ಎಂದರು
ಈ ಸಂದರ್ಭದಲ್ಲಿ ಮೈಸೂರು ಮತ್ತು ಕೊಡಗು ಜಿಲ್ಲೆಯ ಶೆಟ್ಟಳ್ಳಿ, ಆಲದಕಟ್ಟೆ ಗಿರಿಜನ ಹಾಡಿ, ಕಟ್ಟಾಳ, ಚೆಕ್ಪೋಸ್ಟ್ ಗಿರಿಜನ ಹಾಡಿ ಸೇರಿದಂತೆ 3 ಗಿರಿಜನ ಹಾಡಿಯ ಯುವಕರು ವಾಲಿಬಾಲ್ ಪಂದ್ಯಾವಳಿಯಲ್ಲಿ ಭಾಗವಹಿಸಿದ್ದರು.
ಈ ಸಂದರ್ಭದಲ್ಲಿ ಗ್ರಾಮದ ಮುಖಂಡರಾದ ವಿನಯ್ ಕುಮಾರ್, ಬಸವಣ್ಣ, ಅನಿಲ್ ಕುಮಾರ್, ಪೂವಯ್ಯ, ಪಾಪಣ್ಣ, ಸೋಮಣ್ಣ, ಗಣೇಶ್ ಸೇರಿದಂತೆ ಮತ್ತಿತರರು ಹಾಜರಿದ್ದದರು.