Advertisement

ದಿನಕ್ಕೆ 5 ಮನೆಯಲ್ಲಿ ಪ್ರಚಾರ ಮಾಡಿ

12:29 PM Mar 05, 2018 | Team Udayavani |

ತಿ.ನರಸೀಪುರ: ಬಿಜೆಪಿ ಕಾರ್ಯಕರ್ತರು ದಿನವೊಂದಕ್ಕೆ ಕನಿಷ್ಠ ಐದು ಮನೆಗಳಿಗೆ ಭೇಟಿ ಕೊಟ್ಟು ಐದು ನಿಮಿಷ ಜನರೊಟ್ಟಿಗೆ ಸಮಾಲೋಚನೆ ನಡೆಸಲು 15 ನಿಮಿಷವನ್ನು ಮೀಸಲಿಡುವ ಮೂಲಕ ವರುಣ ವಿಧಾನಸಭಾ ಕ್ಷೇತ್ರವನ್ನು ಗೆಲ್ಲಲಿಕ್ಕೆ ಅಂತಿಮ ಸಿದ್ಧತೆಗಳನ್ನು ಮಾಡಿಕೊಳ್ಳಲು ಅಣಿಯಾಗಬೇಕೆಂದು ಕೇಂದ್ರ ಸಾಂಖೀÂಕ ಸಚಿವ ಡಿ.ವಿ.ಸದಾನಂದಗೌಡ ಕಟ್ಟುನಿಟ್ಟಿನ ಸೂಚನೆ ನೀಡಿದರು.

Advertisement

ಮೈಸೂರು ಮುಖ್ಯ ರಸ್ತೆಯಲ್ಲಿ ಚಿಕ್ಕಹಳ್ಳಿ ಗ್ರಾಮದ ಬಳಿಯಿರುವ ಮೈಸೂರು ಕಾಲೇಜ್‌ ಆಫ್ ಎಂಜಿನಿಯರಿಂಗ್‌ ಅಂಡ್‌ ಮ್ಯಾನೇಜ್‌ಮೆಂಟ್‌(ಮೈಸೆಮ್‌) ಕಾಲೇಜು ಆವರಣದಲ್ಲಿ ನಡೆದ ವರುಣಾ ವಿಧಾನಸಭಾ ಕ್ಷೇತ್ರದ ಬಿಜೆಪಿ ನವಶಕ್ತಿ ಸಮಾವೇಶವನ್ನು ಉದ್ಘಾಟಿಸಿ ಸಂಘಟನೆಯ ಪ್ರಗತಿ ಪರಿಶೀಲಿಸಿ ಮಾತನಾಡಿದರು. ಪಕ್ಷದ ಸಭೆ, ಸಮಾವೇಶದ ಭೂಮಿಕೆಗೆ ಮಹಿಳೆಯರನ್ನೂ ಕರೆತರಬೇಕೆಂದು ಹೇಳಿದರು.

ಪಕ್ಷಕ್ಕೆ ಸೆಳೆಯಿರಿ: ವರಣಾ ಮುಖ್ಯಮಂತ್ರಿಗಳ ಕ್ಷೇತ್ರ ಎಂದು ಹೆದರುವ ಅಗತ್ಯವಿಲ್ಲ. ಬಿಜೆಪಿ ಸಂಘಟನೆಯಲ್ಲಿನ ಲೋಪಗಳನ್ನು ಸರಿಪಡಿಸಿಕೊಳ್ಳಲು ಆಯಾ ಸ್ಥಳೀಯ ಮುಖಂಡ ನಿವಾಸಗಳಲ್ಲಿ ಸಭೆ ಸೇರಿ ಅಸಮಾಧಾನವನ್ನು ಸರಿಪಡಿಸಿಕೊಳ್ಳಬೇಕು. ಪರಿಷ್ಕೃತ ಮತದಾರರ ಪಟ್ಟಿಯನ್ನು ಪಡೆದುಕೊಂಡು ಹೆಸರು ಬಿಟ್ಟು ಹೋಗಿರುವ ಮತದಾರರ ಹೆಸರನ್ನು ನೋಂದಾಯಿಸಬೇಕು. ಹಿಂದಿನ ಬಿಜೆಪಿ ಸರ್ಕಾರ ಹಾಗೂ ಈಗಿನ ಕೇಂದ್ರ ಸರ್ಕಾರದ ಯೋಜನೆಗಳ ಸೌಲಭ್ಯ ಪಡೆದ ಫ‌ಲಾನುಭವಿಗಳನ್ನು ಭೇಟಿ ಮಾಡಿ ಪಕ್ಷದತ್ತ ಸೆಳೆಯಬೇಕು ಎಂದರು.

ಪಕ್ಷದ ಮುಖಂಡರೆನಿಸಿಕೊಂಡ ನಮ್ಮಿಂದಲೇ ಕಳೆದ ವಿಧಾನಸಭಾ ಚುನಾವಣೆ ಬಿಜೆಪಿಗೆ ಅಧಿಕಾರ ಕೈ ತಪ್ಪಿ$ದ ಅರಿವಿದೆ. ಹಿಂದಿನ ಬಿಜೆಪಿ ಸರ್ಕಾರದ ಅವಧಿಯಲ್ಲಿ ಸಿಎಂ ಆಗಿದ್ದ ಬಿ.ಎಸ್‌.ಯಡಿಯೂರಪ್ಪ ಅವರು ಮಾಡಿದ್ದ ಕೆಲಸವನ್ನು 70 ವರ್ಷ ರಾಜ್ಯದಲ್ಲಿ ಅಧಿಕಾರ ನಡೆಸಿದವರು ಮಾಡಿರಲಿಲ್ಲ. ಸಾರ್ವತ್ರಿಕ ವಿಧಾನಸಭಾ ಚುನಾವಣೆಯಲ್ಲಿ ಬಿಜೆಪಿ ಅಧಿಕಾರಕ್ಕೆ ಬರುವುದ ಬಹುತೇಕ ಖಚಿತವಾಗಿದ್ದರಿಂದ ಪಕ್ಷದ ಕಾರ್ಯಕರ್ತರು ಹಾಗೂ ಮುಖಂಡರು ನಿಷ್ಠೆಯಿಂದ ವರುಣ ಕ್ಷೇತ್ರದಲ್ಲಿ ಗೆಲ್ಲಲಿಕ್ಕೆ ದುಡಿಯಬೇಕು ಎಂದು ಡಿ.ವಿ.ಸದಾನಂದಗೌಡ ಕರೆ ನೀಡಿದರು.

ಬಿಜೆಪಿಗೇ ಗೆಲುವು: ಬಿಜೆಪಿ ಜಿಲ್ಲಾಧ್ಯಕ್ಷ ಕೋಟಿ ಎಂ.ಶಿವಣ್ಣ ಮಾತನಾಡಿ, ಕೇಂದ್ರ ಸಚಿವ ಡಿ.ವಿ.ಸದಾನಂದಗೌಡರ ನೇತೃತ್ವದಲ್ಲಿ ವರುಣ ಕ್ಷೇತ್ರದಲ್ಲಿ ಈ ಬಾರಿ ಬಿಜೆಪಿ ಗೆಲ್ಲಲಿದೆ. ರಾಜ್ಯದ ಆಡಳಿತರೂಢ ಕಾಂಗ್ರೆಸ್‌ ಸರ್ಕಾರ ದುರಾಡಳಿತಕ್ಕೆ ಬೇಸತ್ತಿರುವ ಜನರು ಪ್ರಧಾನಿ ನರೇಂದ್ರ ಮೋದಿ ಅವರ ದಕ್ಷ ಆಡಳಿತವನ್ನು ಮೆಚ್ಚಿಕೊಂಡು ರಾಜ್ಯದಲ್ಲಿ ಬಿಜೆಪಿಗೆ ಮತ್ತೆ ಅಧಿಕಾರವನ್ನು ನೀಡಲಿದ್ದಾರೆ ಎಂಬ ವಿಶ್ವಾಸವನ್ನು ವ್ಯಕ್ತಪಡಿಸಿದರು.

Advertisement

ಬಿಜೆಪಿ ವಿಭಾಗೀಯ ಸಂಘಟನಾ ಕಾರ್ಯದರ್ಶಿ ಸುರೇಶ್‌ ಬಾಬು ಸಂಘಟನಾ ವಿಧಾನಗಳನ್ನು ತಿಳಿಸಿಕೊಟ್ಟರು. ಕ್ಷೇತ್ರಾಧ್ಯಕ್ಷ ಎ.ಎನ್‌.ಶಿವಯ್ಯ, ರಾಜ್ಯ ಸಮಿತಿ ಸದಸ್ಯ ಕರೋಹಟ್ಟಿ ಮಹದೇವಯ್ಯ, ಜಿ.ಪಂ ಸದಸ್ಯರಾದ ಮಂಗಳ ಸೋಮಶೇಖರ್‌, ಸದಾನಂದ, ಗುರುಸ್ವಾಮಿ, ಮಾಜಿ ಅಧ್ಯಕ್ಷರಾದ ಕೆ.ಎನ್‌.ಪುಟ್ಟಬುದ್ಧಿ, ಕಾ.ಪು.ಸಿದ್ಧವೀರಪ್ಪ, ಬಿ.ಎಂ.ರಾಮು, ಮೃಗಾಲಯ ಪ್ರಾಧಿಕಾರದ ಮಾಜಿ ಅಧ್ಯಕ್ಷ ಎಂ.ನಂಜುಂಡಸ್ವಾಮಿ, ಬಿಜೆಪಿ ಜಿಲ್ಲಾ ಉಪಾಧ್ಯಕ್ಷ ಎಸ್‌.ಸಿ.ಅಶೋಕ್‌, ಪ್ರಧಾನ ಕಾರ್ಯದರ್ಶಿ ಮಾರ್ಬಳ್ಳಿ ಮೂರ್ತಿ,

ಮಾಜಿ ಜಿಲ್ಲಾಧ್ಯಕ್ಷ ಹೇಮಂತ್‌ಕುಮಾರ್‌ಗೌಡ, ಎಸ್ಸಿ ಮೋರ್ಚಾ ಪ್ರಧಾನ ಕಾರ್ಯದರ್ಶಿ ಡಿ.ಕೃಷ್ಣಮೂರ್ತಿ, ಕ್ಷೇತ್ರದ ಅಧ್ಯಕ್ಷ ಶ್ರೀಧರ್‌, ಮಂಡಲ ಪ್ರಧಾನ ಕಾರ್ಯದರ್ಶಿಗಳಾದ ಕುಪ್ಪೇಗಾಲ ಶಿವಬಸಪ್ಪ, ಚಿಕ್ಕಮಾದಪ್ಪ, ಗುರುಮಲ್ಲಮ್ಮ, ಸ್ಲಂ ಮೋರ್ಚಾ ಅಧ್ಯಕ್ಷ ಕೆ.ಗಣೇಶ್‌, ಟೌನ್‌ ಶಕ್ತಿ ಕೇಂದ್ರಗಳ ಅಧ್ಯಕ್ಷರಾದ ಬಿ.ವೀರಭದ್ರಪ್ಪ, ಎಲ್‌.ಮಂಜುನಾಥ್‌, ಎಸ್‌.ಮಹದೇವಯ್ಯ, ಡಾ.ಶಿವರಾಮ, ಚಿನ್ನಂಬಳ್ಳಿ ಮಂಜುನಾಥ್‌, ಎಂ.ಜಿ.ರಾಮಕೃಷ್ಣಪ್ಪ, ಮಾದೇಗೌಡನಹುಂಡಿ ಸ್ವಾಮಿ, ಸುಧಾಮಣಿ, ಬಿ.ಮಹೇಶ ಇನ್ನಿತರರು ಇದ್ದರು.

ರಾಜ್ಯದ ವಿಧಾನಸಭೆಗೆ ಮೇ.5 ಅಥವಾ 8 ರಂದು ಸಾರ್ವತ್ರಿಕ ವಿಧಾನಸಭಾ ಚುನಾವಣೆ ನಡೆಯಲಿದ್ದು, 45 ದಿನಗಳ ಮುಂಚಿತವಾಗಿ ನೀತಿಸಂಹಿತೆ ಜಾರಿಯಾಗುವುದರಿಂದ ವರುಣ ವಿಧಾನಸಭಾ ಕ್ಷೇತ್ರದಲ್ಲಿ ಯುವ ಮೋರ್ಚಾ ಹಾಗೂ ಮಹಿಳಾ ಮೋರ್ಚಾಗಳ ಸಮಾವೇಶ ಮತ್ತು ಪ.ಜಾತಿ ಮತ್ತು ಪ.ಪಂಗಡ ಸಮುದಾಯಗಳ ಪ್ರಮುಖ ಮುಖಂಡರ ಸಭೆಯನ್ನು ನಡೆಸಬೇಕು. ಚುನಾವಣೆ ಘೋಷಣೆ ನಂತರ ನಡೆಯುವ ಸಮಾವೇಶ ಮತ್ತು ಸಭೆಗಳ ಖರ್ಚು ಅಭ್ಯರ್ಥಿ ಲೆಕ್ಕದ ಖಾತೆಗೆ ಜಮಾ ಆಗುವುದರಿಂದ ಸಮಾವೇಶಗಳಿಗೆ ಸಿದ್ಧತೆಯನ್ನು ಕಾರ್ಯಕಾರಿಣಿ ಸಮಿತಿ ಮಾಡಿಕೊಳ್ಳಬೇಕು.
-ಡಿ.ವಿ.ಸದಾನಂದಗೌಡ, ಕೇಂದ್ರ ಸಚಿವ ಹಾಗೂ ವರುಣ ಕ್ಷೇತ್ರದ ಉಸ್ತುವಾರಿ

Advertisement

Udayavani is now on Telegram. Click here to join our channel and stay updated with the latest news.

Next