Advertisement

ವಿವಿ ಧನಸಹಾಯ ಆಯೋಗದ ಶಿಫಾರಸ್ಸಿಗೆ ಶೀಘ್ರ ಒಪ್ಪಿಗೆ ಭರವಸೆ

12:31 PM Jul 26, 2017 | |

ಹುಬ್ಬಳ್ಳಿ: ವಿಶ್ವವಿದ್ಯಾಲಯ ಧನಸಹಾಯ ಆಯೋಗ 7ನೇ ವೇತನ ಪರಿಷ್ಕರಣೆಗೆ ರಚಿಸಿದ ಚವ್ಹಾಣ ಸಮಿತಿ ವರದಿಯನ್ನು ಜುಲೈ ಅಂತ್ಯದಲ್ಲಿ ಅನುಷ್ಠಾನಕ್ಕೆ ಒಪ್ಪಿಗೆ ನೀಡಲು ತೀರ್ಮಾನಿಸಿದೆ ಎಂದು ಮಾನವ ಸಂಪನ್ಮೂಲ ಅಭಿವೃದ್ಧಿ ಸಚಿವ ಪ್ರಕಾಶ ಜಾವಡೇಕರ ಅವರು ಕರ್ನಾಟಕ ರಾಜ್ಯ ಮಹಾವಿದ್ಯಾಲಯ ಶೈಕ್ಷಿಕ ಸಂಘ ಹಾಗೂ ಅಖೀಲ ಭಾರತೀಯ ರಾಷ್ಟ್ರೀಯ ಶೈಕ್ಷಿಕ ಸಂಘದ ನಿಯೋಗಕ್ಕೆ ತಿಳಿಸಿದರು.
 
ನವದೆಹಲಿಯಲ್ಲಿ ನಿಯೋಗವು ಸಚಿವರನ್ನು ಭೇಟಿ ಮಾಡಿತು. ಈ ವೇಳೆ ಪ್ರಕಾಶ ಜಾವಡೇಕರ ಹಾಗೂ ರಾಜ್ಯ ಸಚಿವ ಡಾ| ಮಹೇಂದ್ರನಾಥ ಪಾಂಡೆ ಸಮ್ಮುಖದಲ್ಲಿ ನಡೆದ ಚರ್ಚೆಯಲ್ಲಿ 6ನೇ ವೇತನ ಆಯೋಗದ ತಾರತಮ್ಯಗಳಿಗೆ ಪರಿಹಾರ, ಹೊಸ ಪಿಂಚಣಿ ಯೋಜನೆಯ ಬದಲಾಗಿ 2004ಕ್ಕಿಂತ ಮೊದಲಿದ್ದ ಹಳೆಯ ಪಿಂಚಣಿಗೆ ಒತ್ತಾಯ, ಕಾರ್ಯನಿರತ ಅಧ್ಯಾಪಕರಿಗೆ ಪಿಎಚ್‌ಡಿ ಕೋರ್ಸ್‌ ವಕ್‌ನಿಂದ ವಿನಾಯಿತಿ,

Advertisement

ಪ್ರಾಚಾರ್ಯರ ಸೇವಾವಧಿಯನ್ನು ನಿವೃತ್ತಿಯವರೆಗೆ ವಿಸ್ತರಣೆ, ಕಾಲ ಕಾಲಕ್ಕೆ ಅಧ್ಯಾಪಕರ ನೇಮಕಾತಿ ಹೀಗೆ ಹಲವಾರು ವಿಷಯಗಳ ಕುರಿತು ಒತ್ತಾಯಿಸಲಾಯಿತು. ಸಚಿವರು ಇವುಗಳನ್ನು ಪರಿಹರಿಸಲು ತಾತ್ವಿಕ ಒಪ್ಪಿಗೆ ನೀಡಿದರು ಹಾಗೂ ವಿಶೇಷವಾಗಿ ವಿಶ್ವವಿದ್ಯಾಲಯ ಹಾಗೂ ಕಾಲೇಜು ಅಧ್ಯಾಪಕರಿಗೆ 7ನೇ ವೇತನದ ಆಯೋಗ ಶಿಫಾರಸ್ಸುಗಳನ್ನು ಜುಲೈ ಕೊನೆಯಲ್ಲಿ ಕ್ಯಾಬಿನೆಟ್‌ ಒಪ್ಪಿಗೆ ಪಡೆದು ಅನುಷ್ಠಾನಗೊಳಿಸಲಾಗುವುದು ಎಂದು ಸಚಿವರು ಹೇಳಿದರು.

ನಿಯೋಗದಲ್ಲಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಡಾ| ಜಗದೀಶ ಪ್ರಸಾದ ಸಿಂಗಾಲ, ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಮಹೇಂದ್ರ ಕಪೂರ, ಮಹೇಂದ್ರಕುಮಾರ, ಅನುರಾಗ ಮಿಶ್ರಾ ಇದ್ದರು. ಸಚಿವರಿಗೆ ಹಾಗೂ ರಾಷ್ಟ್ರೀಯ ಶೈಕ್ಷಿಕ ಸಂಘದ ಪದಾಧಿಕಾರಿಗಳಿಗೆ ಕಾಲೇಜು ಶಿಕ್ಷಕ ಸಂಘದ ಡಾ| ರಘು ಅಕ್ಮಂಚಿ, ಡಾ| ಗುರುನಾಥ ಬಡಿಗೇರ, ಡಾ| ರಾಜಣ್ಣ, ನಾರಾಯಣ ಉಪಾಧ್ಯ ಕೃತಜ್ಞತೆ ಸಲ್ಲಿಸಿದರು. 

Advertisement

Udayavani is now on Telegram. Click here to join our channel and stay updated with the latest news.

Next