Advertisement

ಪ.ಬಂಗಾಲದಲ್ಲಿ ನಿಷೇಧಾಜ್ಞೆ ಜಾರಿ

02:09 AM May 21, 2019 | sudhir |

ಲೋಕಸಭೆ ಚುನಾವಣೆ ವೇಳೆ ಸತತ 7 ಹಂತಗಳಲ್ಲಿಯೂ ಹಿಂಸಾಚಾರಕ್ಕೆ ಸಾಕ್ಷಿಯಾದ ಪಶ್ಚಿಮ ಬಂಗಾಲದ ಕೆಲವೆಡೆ ಚುನಾವಣ ಆಯೋಗ ಸೋಮವಾರ ನಿಷೇಧಾಜ್ಞೆ ಜಾರಿಗೊಳಿಸಿದೆ. ಚುನಾವಣೋತ್ತರ ಹಿಂಸಾಚಾರವನ್ನು ನಿಯಂತ್ರಿಸುವ ಸಲುವಾಗಿ ಭತ್ಪಾರಾ ಸೇರಿದಂತೆ ಕೆಲವೆಡೆ ಸೆಕ್ಷನ್‌ 144 ಅನ್ನು ಅನಿರ್ದಿಷ್ಟಾವಧಿಗೆ ಜಾರಿಗೊಳಿಸಿರುವುದಾಗಿ ಆಯೋಗ ಮಾಹಿತಿ ನೀಡಿದೆ. ಮತ ಎಣಿಕೆಗೆ ಸಹಕರಿಸಲು ಮತ್ತು ಚುನಾವಣೋತ್ತರ ಹಿಂಸೆಯನ್ನು ನಿಗ್ರಹಿಸಲು ಕೇಂದ್ರೀಯ ಪv ೆಗಳ ಸುಮಾರು 200 ಕಂಪೆನಿಗಳನ್ನು ನಿಯೋಜಿಸಲಾಗಿದೆ. ರಾಜ್ಯಾದ್ಯಂತ ಹೆಚ್ಚುವರಿ ಭದ್ರತಾ ಸಿಬಂದಿ ನಿಯೋಜಿಸಲಾಗಿದೆ ಎಂದು ವಿಶೇಷ ಪೊಲೀಸ್‌ ವೀಕ್ಷಕ ವಿವೇಕ್‌ ದುಬೆ ಹೇಳಿದ್ದಾರೆ.

Advertisement

ಇವಿಎಂಗೆ ದೀದಿ ಜನರ ಕಾವಲು ಪಶ್ಚಿಮ ಬಂಗಾಲದಲ್ಲಿ ಮತ ಎಣಿಕೆ ನಡೆಯಲಿರುವ ಅರಂಗಡ ಗರ್ಲ್ಸ್‌ ಸ್ಕೂಲ್‌, ಹೂಗ್ಲಿ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿ ಮತ್ತು ಸೆರಾಂಪುರ ಕಾಲೇಜಿನ ಸುತ್ತಲೂ ಭದ್ರತಾ ಸಿಬಂದಿಯ ಹೊರತಾಗಿ ಕೆಲವರು ಕಾವಲು ಕಾಯುತ್ತಿದ್ದಾರೆ. ಅದು ತೃಣಮೂಲ ಕಾಂಗ್ರೆಸ್‌ನ ಕಾರ್ಯಕರ್ತರು. ರವಿವಾರ ರಾತ್ರಿಯೇ 12 ಕಾರ್ಯಕರ್ತರು ಈ ಪ್ರದೇಶಗಳಿಗೆ ತೆರಳಿದ್ದು, ಸ್ಟ್ರಾಂಗ್‌ ರೂಂಗಳ ಹೊರಗೆ ಕಣ್ಣಿಗೆ ಎಣ್ಣೆ ಬಿಟ್ಟುಕೊಂಡು ಕಾವಲು ಕಾಯುತ್ತಿದ್ದಾರೆ. ಯಾವುದಾದರೂ ಅನುಮಾನಾಸ್ಪದ ಚಟುವಟಿಕೆ ನಡೆಯುತ್ತವೆಯೇ ಎಂಬುದನ್ನು ನೋಡಲು ಸಿಎಂ ಆದೇಶದ ಮೇರೆಗೆ ಬಂದಿರುವುದಾಗಿ ಹೇಳಿದ್ದಾರೆ.

Advertisement

Udayavani is now on Telegram. Click here to join our channel and stay updated with the latest news.

Next