Advertisement
ಪ್ರತಿಭಟನೆಯು ಮಿನ್ನಿಯಾಪೊಲೀಸ್‌ನಿಂದ ಆಚೆಗಿನ ಇತರ ಪ್ರಮುಖ ನಗರಗಳಿಗೂ ವ್ಯಾಪಿಸಿದೆ. ಪರಿಣಾಮ, ಲಾಸ್ ಏಂಜಲೀಸ್, ಷಿಕಾಗೊ ಮತ್ತು ಅಟ್ಲಾಂಟ ಸೇರಿ ಅಮೆರಿಕದ 24ಕ್ಕೂ ಹೆಚ್ಚು ಪ್ರಮುಖ ನಗರಗಳಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿದ್ದು, ಸಾರ್ವಜನಿಕರು ಮನೆಯಿಂದ ಹೊರಗೆ ಬರದಂತೆ ಪೊಲೀಸರು ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ. ಅಮೆರಿಕದ ಬಹುತೇಕ ರಾಜ್ಯಗಳಲ್ಲಿ ನಾಗರಿಕ ಅಶಾಂತಿಯನ್ನು ನಿಯಂತ್ರಿಲು ರಾಷ್ಟ್ರೀಯ ಕಾವಲು ಪಡೆ (ನ್ಯಾಷನಲ್ ಗಾರ್ಡ್) ಸೈನಿಕರ ನೆರವು ಪಡೆಯಲಾಗಿದೆ.
ಪ್ರತಿಭಟನೆ ಮತ್ತು ಹಿಂಸಾಚಾರ ಕುರಿತು ಸರಣಿ ಟ್ವೀಟ್ ಮಾಡಿರುವ ಅಧ್ಯಕ್ಷ ಟ್ರಂಪ್, ಪ್ರತಿಭಟನಾಕಾರರೇನಾದರೂ ವೈಟ್ ಹೌಸ್ ಬಳಿ ಬಂದರೆ, ಅವರನ್ನು ಅತ್ಯಂತ ಕ್ರೂರ ಶ್ವಾನಗಳು ಹಾಗೂ ಶಸ್ತ್ರಾಸ್ತ್ರಗಳ ಮೂಲಕ ಸ್ವಾಗತಿಸಲಾಗುವುದು, ಎಂದು ಎಚ್ಚರಿಕೆ ನೀಡಿದ್ದಾರೆ. ನಗರಗಳಲ್ಲಿ ಶಾಂತಿ ಕಾಯ್ದುಕೊಳ್ಳದಿದ್ದರೆ ಮಿಲಿಟರಿ ನಿಯೋಜಿಸುವುದಾಗಿ ತಿಳಿಸಿದ್ದಾರೆ. ಅಲ್ಲದೆ, ಗಲಭೆಗೆ ಎಡ ಪಂಥೀಯರು ಕಾರಣ ಎಂದು ದೂರಿರುವ ಟ್ರಂಪ್, ವ್ಯಾಪಕ ಲೂಟಿ ಮತ್ತು ಸಾರ್ವಜನಿಕರ ಆಸ್ತಿಗೆ ಬೆಂಕಿ ಹಚ್ಚುವ ಮೂಲಕ ಗಲಭೆಕೋರರು ಜಾರ್ಜ್ ಫ್ಲಾಯ್ಡ ಬಲಿದಾನವನ್ನು ಅವಮಾನಿ ಸುತ್ತಿದ್ದಾರೆ ಎಂದು ಅಭಿಪ್ರಾಯಪಟ್ಟಿದ್ದಾರೆ.