Advertisement

ಮಾ.2ರಿಂದ ವಿಧಾನಸೌಧ ಸುತ್ತಲೂ ನಿಷೇಧಾಜ್ಞೆ

11:58 AM Feb 29, 2020 | Suhan S |

ಬೆಂಗಳೂರು: ವಿಧಾನಸಭೆ ಬಜೆಟ್‌ಅಧಿವೇಶನದ ಹಿನ್ನೆಲೆಯಲ್ಲಿ ಮಾ.2ರಿಂದ ಮಾರ್ಚ್‌ 31ರವೆರವರೆಗೆ ವಿಧಾನಸೌಧ ಸುತ್ತ ಎರಡು ಕಿ. ಮೀ ವ್ಯಾಪ್ತಿಯಲ್ಲಿ ನಿಷೇಧಾಜ್ಞೆ ಜಾರಿಗೊಳಿಸಿ ನಗರ ಪೊಲೀಸ್‌ ಆಯುಕ್ತ ಭಾಸ್ಕರ್‌ ರಾವ್‌ ಶುಕ್ರವಾರ ಆದೇಶ ಹೊರಡಿಸಿದ್ದಾರೆ.

Advertisement

ಅಧಿವೇಶನ ಇರುವುದರಿಂದ ವಿವಿಧ ಸಂಘಟನೆಗಳು, ಪಕ್ಷಗಳು ಬೇಡಿಕೆ ಈಡೇರಿಕೆಗೆ ಒತ್ತಾಯಿಸಿ ಪ್ರತಿಭಟನೆ, ಸತ್ಯಾಗ್ರಹ, ವಿಧಾನಸೌಧ ಮುತ್ತಿಗೆ ಹಾಕುವ ಸಾಧ್ಯತೆಯಿರಲಿದೆ. ಇದರಿಂದ ಕಲಾಪಗಳಿಗೆ ಅಡ್ಡಿಯಾಗಲಿದ್ದು, ಸುಗಮ ಸಂಚಾರಕ್ಕೂ ತೊಂದರೆ ಆಗುವ ಸಾಧ್ಯತೆ ಬಗ್ಗೆ ಗುಪ್ತಚರ ಮಾಹಿತಿಯಿದೆ. ಅಧಿವೇಶನ ಸುಗಮವಾಗಿ ಸಾಗಲು ಹಾಗೂ ಕಾನೂನು ಸುವ್ಯವಸ್ಥೆ ಕಾಪಾಡುವ ಉದ್ದೇಶದಿಂದ ಮಾ. 2ರಿಂದಮುಂಜಾನೆ ಆರು ಗಂಟೆಯಿಂದ ಮಾ. 31ರ ಮಧ್ಯರಾತ್ರಿ 12 ಗಂಟೆಯವರೆಗೆ ಅಧಿವೇಶನ ನಡೆಯುವ ದಿನಗಳಂದು ವಿಧಾನಸೌಧ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಲಾಗಿದೆ ಎಂದು ಆದೇಶದಲ್ಲಿ ತಿಳಿಸಲಾಗಿದೆ.

Advertisement

Udayavani is now on Telegram. Click here to join our channel and stay updated with the latest news.

Next